ಪ್ರತಿದಿನ ಕನಿಷ್ಠ 40ಕಿಲೋ ಮೀಟರ್ ರಸ್ತೆ ನಿರ್ಮಾಣ ಮಾಡುವ ಗುರಿಯನ್ನು ಮಾರ್ಚ್ ಅಂತ್ಯದೊಳಗೆ ಸಾಧಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ದೆಹಲಿಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸರ್ಕಾರ ಈಗಾಗಲೇ ಪ್ರತಿದಿನ 30 ಕಿಲೋ ಮೀಟರ್ ರಸ್ತೆ ನಿರ್ಮಾಣ ಗುರಿ ಸಾಧಿಸಿದೆ. ದೇಶದಲ್ಲಿ ಪ್ರತಿದಿನ ರಸ್ತೆ ಅಪಘಾತಗಳಲ್ಲಿ ಸರಾಸರಿ 415 ಜನರು ಮರಣ ಹೊಂದುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ರಸ್ತೆಗಳ ಗುಣಮಟ್ಟ ಕಾಪಾಡಲು ಬದ್ಧವಾಗಿದೆ. ರಸ್ತೆಗಳಲ್ಲಿರುವ ಗುಂಡಿ, ಕಂದಕಗಳನ್ನು ಮುಚ್ಚಲು 14 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು. ಜನರ ಪ್ರಯಾಣ ಮತ್ತು ಸಂಚಾರ ಸುರಕ್ಷತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ತಿಳಿಸಿದರು. ರಕ್ಷಣಾ ಸಚಿವ ರಾಜನಾಥ್ಸಿಂಗ್ ಮಾತನಾಡಿ, ರಸ್ತೆ ಸುರಕ್ಷತೆ ಕೇವಲ ಒಂದು ತಿಂಗಳಿಗೆ ಸೀಮಿತವಾಗದೇ ನಿರಂತರ ಪ್ರಕ್ರಿಯೆಯಾಗಬೇಕು. ದೇಶದ ಆರ್ಥಿಕತೆಯ ಪ್ರಗತಿಗೆ ರಸ್ತೆಗಳು ಜೀವನಾಡಿಗಳಾಗಿವೆ. ರಸ್ತೆಗಳ ಮೂಲ ಸೌಕರ್ಯ ಅಭಿವೃದ್ಧಿಪಡಿಸಿ ರಸ್ತೆ ಸಂಪರ್ಕಗಳ ಸುಧಾರಣೆಗೆ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದರು.
Related Articles
ಶೆಹ್ಲಾ ರಷೀದ್ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನಿಡಿದ ಸಚಿವ ನಿತಿನ್ ಗಡ್ಕರಿ
June 11, 2018
Samachar Network-CLB
ರಾಷ್ಟ್ರೀಯ, ರಾಜಕೀಯ, ಪ್ರಧಾನಿ ಮೋದಿ
Comments Off on ಶೆಹ್ಲಾ ರಷೀದ್ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನಿಡಿದ ಸಚಿವ ನಿತಿನ್ ಗಡ್ಕರಿ
Seen By: 104 ನವದೆಹಲಿ:ಜೂ-11; ಆರ್ ಎಸ್ಎಸ್ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ನೋಡಿದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆಗೈಯಲು ಸಂಚು ರೂಪಿಸಿದಂತಿದೆ [more]
ಕಾವೇರಿ ನಿರ್ವಹಣಾ ಮಂಡಳಿ ರಚನೆ ಸುಲಭದ ಕೆಲಸವಲ್ಲ; ಕಾಲಾವಕಾಶದ ಅಗತ್ಯವಿದೆ: ಸುಪ್ರೀಂ ಗೆ ಕೇಂದ್ರ ಸರ್ಕಾರದ ಹೇಳಿಕೆ
February 27, 2018
Samachar Network
ರಾಜ್ಯ, ರಾಷ್ಟ್ರೀಯ, ರಾಜಕೀಯ
Comments Off on ಕಾವೇರಿ ನಿರ್ವಹಣಾ ಮಂಡಳಿ ರಚನೆ ಸುಲಭದ ಕೆಲಸವಲ್ಲ; ಕಾಲಾವಕಾಶದ ಅಗತ್ಯವಿದೆ: ಸುಪ್ರೀಂ ಗೆ ಕೇಂದ್ರ ಸರ್ಕಾರದ ಹೇಳಿಕೆ
Seen By: 83 ನವದೆಹಲಿ:ಫೆ-27: ಕಾವೇರಿ ನಿರ್ವಹಣಾ ಮಂಡಳಿ ರಚನೆ ಅಷ್ಟು ಸುಲಭವಲ್ಲ; ಕರ್ನಾಟಕ ಹಾಗೂ ತಮಿಳುನಾಡು ಎರಡೂ ರಾಜ್ಯಗಳ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಕಾವೇರಿ ನಿರ್ವಹಣಾ ಮಂಡಳಿ [more]
ಕಾನೂನು ಕ್ರಮದ ಎಚ್ಚರಿಕೆ ಬೆನ್ನಲ್ಲೇ ಶಹ್ಲಾ ರಷೀದ್ ಮತ್ತೊಂದು ಟ್ವೀಟ್: ಜೆಎನ್ಯು ವಿದ್ಯಾರ್ಥಿ ಉಮರ್ ಖಾಲಿದ್ ಹಾಗೂ ಆತನ ತಂದೆಯ ಮೇಲೆ ಹಲ್ಲೆಯಾದಾಗ ಯಾರೂ ಏಕೆ ಎಚ್ಚರ ವಹಿಸಿಲ್ಲ ಎಂದು ತಿರುಗೇಟು
June 11, 2018
Samachar Network-CLB
ರಾಷ್ಟ್ರೀಯ, ರಾಜಕೀಯ
Comments Off on ಕಾನೂನು ಕ್ರಮದ ಎಚ್ಚರಿಕೆ ಬೆನ್ನಲ್ಲೇ ಶಹ್ಲಾ ರಷೀದ್ ಮತ್ತೊಂದು ಟ್ವೀಟ್: ಜೆಎನ್ಯು ವಿದ್ಯಾರ್ಥಿ ಉಮರ್ ಖಾಲಿದ್ ಹಾಗೂ ಆತನ ತಂದೆಯ ಮೇಲೆ ಹಲ್ಲೆಯಾದಾಗ ಯಾರೂ ಏಕೆ ಎಚ್ಚರ ವಹಿಸಿಲ್ಲ ಎಂದು ತಿರುಗೇಟು
Seen By: 61 ನವದೆಹಲಿ:ಜೂ-೧೧: ತಮ್ಮ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ಕಿಡಿಕಾರಿರುವ ಶೆಹ್ಲಾ ರಷೀದ್, ತಳಬುಡವಿಲ್ಲದ ಮಾಧ್ಯಮ [more]