ದೇಶಾದ್ಯಂತ ಇದೇ 16ರಂದು ಕೋವಿಡ್-19 ಲಸಿಕಾ ಆಂದೋಲನ ಆರಂಭವಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ದೆಹಲಿಯಲ್ಲಿಂದು ಉನ್ನತ ಮಟ್ಟದ ಸಭೆ ನಡೆಸಿ, ಕೋವಿಡ್-19 ಸ್ಥಿತಿಗತಿ ಹಾಗೂ ಕೋವಿಡ್ ಲಸಿಕೆ ನೀಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಿರುವ ಸಿದ್ಧತೆಯ ಪರಿಶೀಲನೆ ನಡೆಸಿದರು. ಈ ಮಹತ್ವದ ಸಭೆಯಲ್ಲಿ ಸಂಪುಟ ಕಾರ್ಯದರ್ಶಿ, ಪ್ರಧಾನಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಕಾರ್ಯದರ್ಶಿ ಮತ್ತು ನಾನಾ ಇಲಾಖೆಗಳ ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದರು. ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳಿಗೆ ಆರೋಗ್ಯ ನಿಯಂತ್ರಣ ಸಂಸ್ಥೆ ಅನುಮೋದನೆ ನೀಡಿದ್ದು, ಇವು ಸಂಪೂರ್ಣ ಸುರಕ್ಷಿತ ಮತ್ತು ಸೋಂಕು ನಿಯಂತ್ರಣ ಶಕ್ತಿ ಹೊಂದಿವೆ ಎಂದು ಸಭೆ ಅನುಮೋದಿಸಿದೆ. ಕೋವಿಡ್-19 ಲಸಿಕೆ ನೀಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಡೆಸಿರುವ ಸಿದ್ಧತೆ ಕುರಿತು ಸಮಾಲೋಚನೆ ನಡೆಸಿದ ಪ್ರಧಾನಂತ್ರಿ ಅವರು, ಜನರ ಪಾಲ್ಗೊಳ್ಳುವಿಕೆ, ಚುನಾವಣಾ ಅನುಭವದ ಬಳಕೆ ಮತ್ತು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಗಳ ತತ್ವಗಳನ್ನು ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ದೇಶಾದ್ಯಂತ ಸುಮಾರು 3 ಕೋಟಿ ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುವುದು. ಎರಡನೇ ಹಂತದಲ್ಲಿ 50 ವರ್ಷ ದಾಟಿದವರಿಗೆ ಸೋಂಕಿತರಿಗೆ ಮತ್ತು ಮೂರನೇ ಹಂತದಲ್ಲಿ 50 ವರ್ಷದೊಳಗಿನ ಗುಂಪುಗಳಿಗೆ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಕೋ-ವಿನ್ ಲಸಿಕಾ ವಿತರಣೆ ನಿರ್ವಹಣೆ ವ್ಯವಸ್ಥೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು ಈಗಾಗಲೇ 79 ಲಕ್ಷಕ್ಕಿಂತ ಹೆಚ್ಚಿನ ಫಲಾನುಭವಿಗಳು ಇದರಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
Related Articles
ಕೊರೋನಾ ಎರಡನೇ ಅಲೆಗೆ ಪಾಕ್ ತತ್ತರ ಎಲ್ಲ ಆಸ್ಪತ್ರೆಗಳೂ ಭರ್ತಿ:ಸರಕಾರ ಆತಂಕದಲ್ಲಿ
November 27, 2020
Varta Mitra News - SP
ರಾಷ್ಟ್ರೀಯ, ಆರೋಗ್ಯ
Comments Off on ಕೊರೋನಾ ಎರಡನೇ ಅಲೆಗೆ ಪಾಕ್ ತತ್ತರ ಎಲ್ಲ ಆಸ್ಪತ್ರೆಗಳೂ ಭರ್ತಿ:ಸರಕಾರ ಆತಂಕದಲ್ಲಿ
Seen By: 53 ಇಸ್ಲಾಮಾಬಾದ್:ಪಾಕಿಸ್ಥಾನದಾದ್ಯಂತ ಕೋವಿಡ್-19 ತನ್ನ ಎರಡನೇ ಅಲೆಯನ್ನು ತೀವ್ರಗೊಳಿಸಿದ್ದು, ಪಾಕಿಸ್ತಾನದಾದ್ಯಂತ ಆಸ್ಪತ್ರೆಗಳು ಅದರಲ್ಲೂ ತೀವ್ರ ನಿಗಾ ಘಟಕಗಳು ಪೂರಾ ಭರ್ತಿಯಾಗಿವೆ.ಇದರಿಂದಾಗಿ ಪಾಕ್ ಸರಕಾರ ತತ್ತರಿಸಿದ್ದು, [more]
ಸೋಂಕಿನ ಲಕ್ಷಣ ಇರುವವರ ಪತ್ತೆ, ಪರೀಕ್ಷೆ ಹಚ್ಚಿಸಲು ಸಹಕಾರಿ ಆರೋಗ್ಯ ಸೇತುಗೆ ವಿಶ್ವಸಂಸ್ಥೆ ಮೆಚ್ಚುಗೆ
October 14, 2020
Varta Mitra News - SP
ರಾಷ್ಟ್ರೀಯ
Comments Off on ಸೋಂಕಿನ ಲಕ್ಷಣ ಇರುವವರ ಪತ್ತೆ, ಪರೀಕ್ಷೆ ಹಚ್ಚಿಸಲು ಸಹಕಾರಿ ಆರೋಗ್ಯ ಸೇತುಗೆ ವಿಶ್ವಸಂಸ್ಥೆ ಮೆಚ್ಚುಗೆ
Seen By: 46 ನ್ಯೂಯಾರ್ಕ್: ಕೊರೋನಾ ಸೋಂಕಿತರ ಪತ್ತೆ, ಜನರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಆರೋಗ್ಯ ಸೇತು ಆ್ಯಪ್ಗೆ ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ. ಭಾರತದಲ್ಲಿ [more]
ಸ್ವಲ್ಪ ಯೋಚಿಸಿ; ಕೊರೋನಾ ಹೋಗಿಲ್ಲ, ಲಾಕ್ ಮಾತ್ರ ತೆರವು: ತಪ್ಪದಿರಿ ಎಚ್ಚರ!
July 9, 2021
Varta Mitra News - SP
ರಾಷ್ಟ್ರೀಯ
Comments Off on ಸ್ವಲ್ಪ ಯೋಚಿಸಿ; ಕೊರೋನಾ ಹೋಗಿಲ್ಲ, ಲಾಕ್ ಮಾತ್ರ ತೆರವು: ತಪ್ಪದಿರಿ ಎಚ್ಚರ!
Seen By: 52 ಹೊಸದಿಲ್ಲಿ: ಕೋವಿಡ್ ಎರಡನೇ ಅಲೆ ಇನ್ನೂ ಅಂತ್ಯಗೊಂಡಿಲ್ಲವಾದರೂ, ಜನಜೀವನ ನಡೆಯಬೇಕೆಂಬ ಏಕೈಕ ಕಾರಣಕ್ಕಾಗಿ ಸರಕಾರ ಲಾಕ್ಡೌನ್ ಸಡಿಲಗೊಳಿಸಿದೆ. ಆದರೆ ಪ್ರವಾಸಿ ತಾಣಗಳಲ್ಲಿ, ಪೇಟೆಗಳಲ್ಲಿ [more]