ಕೋಲ್ಕತ್ತ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನ್ವಯ 2021ರ ಜನವರಿಯಿಂದ ಪಾಕಿಸ್ಥಾನ, ಅಫ್ಘಾನಿಸ್ಥಾನ, ಬಾಂಗ್ಲಾದೇಶದ ನಿರಾಶ್ರಿತರಿಗೆ ಭಾರತದ ಪೌರತ್ವ ನೀಡುವ ಪ್ರಕ್ರಿಯೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಆರಂಭಿಸಲಿದೆ ಎಂದು ಬಿಜೆಪಿ ಪಶ್ಚಿಮ ಬಂಗಾಳ ಉಸ್ತುವಾರಿ ಕೈಲಾಶ್ ವಿಜಯ್ ವರ್ಗೀಯಾ ಹೇಳಿದ್ದಾರೆ.
ನೆರೆರಾಷ್ಟ್ರಗಳಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಭಾರತವನ್ನು ಆಶ್ರಯಿಸಿ ಬಂದಿದ್ದ ನಿರಾಶ್ರಿತರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಭಯ ಹಸ್ತ ನೀಡಿದ್ದು, ಭಾರತೀಯ ಪೌರತ್ವ ನೀಡುವುದಾ ಭರವಸೆ ನೀಡಿತ್ತು. ಈಗ ಆ ಭರವಸೆ ಈಡೇರಲಿದೆ ಎಂದಿದ್ದಾರೆ.
ಅಲ್ಲದೆ, ಬಿಜೆಪಿ ತನ್ನ ವಾಗ್ದಾನವನ್ನು ಎಂದಿಗೂ ಮರೆತಿಲ್ಲ,ಮರೆಯುವುದು ಇಲ್ಲ. ನಿರಾಶ್ರಿತರಿಗೆ ಪೌರತ್ವ ನೀಡುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ. ಜತೆಗೆ ಪಶ್ಚಿಮ ಬಂಗಾಳ ಸರ್ಕಾರದ ಓಲೈಕೆ ಮನೋಭಾವದ ಬಗ್ಗೆ ವ್ಯಂಗ್ಯವಾಡಿರುವ ವಿಜಯ್, ಈ ಸರ್ಕಾರ ಕೇವಲ ಶೇ.30 ಭಾಗದ ಜನರನ್ನು ಮತ್ತು ಓಲೈಸಲು, ಅಭಿವೃದ್ಧಿಗೊಳಿಸಲು ಯೋಜಿಸುತ್ತದೆ. ಬಿಜೆಪಿ ಹಾಗಲ್ಲ ಉಳಿದ ಶೇ.70ರೊಂದಿಗೆ ಈ ಶೇ.30ನ್ನೂ ಸೇರಿಸಿ ದೇಶದ ಶೇ.100 ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಇದು ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಎಂಬುದರ ನಿಜವಾದ ಅರ್ಥ ಎಂದಿದ್ದಾರೆ.