ಹೊಸದಿಲ್ಲಿ ; ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂತರಾಗಿ ಈಗ ಪರೋಲ್ ಮೇಲೆ ಬಿಡುಗಡೆಗೊಂಡಿರುವ ಉದ್ಯಮಿ, ಸುಬ್ರಾತಾ ರಾಯ್ ಗೆ 62,600 ಕೋಟಿ ರೂ.ಗಳನ್ನು ತಕ್ಷಣಪಾವತಿಸುವಂತೆ , ಇಲ್ಲವಾದಲ್ಲಿ ಅವರ ಪರೋಲ್ ರದ್ದುಗೊಳಿಸುವ ನಿರ್ದೇಶನ ಕೋರಿ ಸೆಕ್ಯೂರಿಟಿಸ್ ಆ್ಯಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ( ಎಸ್ಇಬಿಐ) ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
2012ರಲ್ಲಿ ಸಹಾರಾ ಇಂಡಿಯಾ ಪರಿವಾರ್ ಗ್ರೂಪ್ಸಂಸ್ಥೆ ಕಾನೂನುಬಾಹಿರವಾಗಿ, ಭದ್ರತಾ ನಿಯಮಗಳನ್ನು ಉಲ್ಲಂಘಿಸಿ, ಬ್ಯಾಂಕಿಂಗ್ ಸೌಲಭ್ಯ ಪಡೆಯಲಾಗದ ಲಕ್ಷಾಂತರ ಮಂದಿಯಿಂದ 3.5 ಶತಕೋಟಿ ರೂ. ಸಂಗ್ರಹಿಸಿರುವುದು ಸಾಬೀತಾಗಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಅಲ್ಲದೆ, ಹೂಡಿಕೆ ಹೆಸರಿನಲ್ಲಿ ಮಾಡಿರುವ ಬಹುಕೋಟಿ ವಂಚನೆ ಬಹಿರಂಗಗೊಂಡ ಬಳಿಕ ಹೂಡಿಕೆದಾರರಿಗೆ ಹಣ ಮರುಪಾವತಿಸುವಂತೆಯೂ ತಿಳಿಸಿತ್ತು.
ಆದೇಶದಲ್ಲಿ ಸುಪ್ರೀಂ 25,700 ಕೋಟಿ ರೂ. ಪಾವತಿಸಲು ಸೂಚಿಸಲಾಗಿತ್ತಾದರೂ, ಸಂಸ್ಥೆ ಪಾವತಿಸದ ಹಿನ್ನೆಲೆ ಮುಖ್ಯಸ್ಥ ರಾಯ್ ಅನ್ನು 2 ವರ್ಷ ಜೈಲಿಗೂ ಕಳುಹಿಸಲಾಗಿದೆ. ಬಳಿಕ 2016ರಲ್ಲಿ ರಾಯ್ ಪರೋಲ್ ಮೇಲೆ ಹೊರಬಂದಿದ್ದರೂ, ಇನ್ನೂ ಬಾಕಿ ಪಾವತಿಸಿಲ್ಲ.
ಈ ಹಿನ್ನೆಲೆ ಬಾಕಿ ಮೊತ್ತಕ್ಕೆ ಬಡ್ಡಿ ಸೇರಿಸಿ ಈಗ ಸಂಸ್ಥೆ ಒಟ್ಟು 52,600 ಕೋಟಿ ರೂ.ಗಳನ್ನು ಪಾವತಿಸಬೇಕಿದ್ದು , ಪಾವತಿಸದೇ ಇದ್ದಲ್ಲಿ ಪರೋಲ್ ರದ್ದುಮಾಡಿ ರಾಯ್ ಅವರನ್ನು ಜೈಲಿನಲ್ಲಿರಿಸುವಂತೆ ನಿರ್ದೇಶನ ನೀಡಲು ಎಸ್ಇಬಿಐ ಸುಪ್ರೀಂಗೆ ಮನವಿ ಅರ್ಜಿ ಸಲ್ಲಿಸಿದೆ.