ನಾಗಪುರ:ಹಿರಿಯ ಆರೆಸ್ಸೆಸ್ ಸ್ವಯಂಸೇವಕ, ಲಘು ಉದ್ಯೋಗ ಭಾರತಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸ್ಕಾರ ಭಾರತಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಖ್ಯಾತ ಕೈಗಾರಿಕೋದ್ಯಮಿ ವಿಶ್ರಾಮ್ ಜಾಮ್ದಾರ್ ಅವರು ಬುಧವಾರ ಕೋವಿಡ್-19ರ ಕಾರಣದಿಂದ ನಿಧನರಾದರು. ಅವರಿಗೆ 75ವರ್ಷ ಪ್ರಾಯವಾಗಿತ್ತು. ಅವರು ಪತ್ನಿ ,ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಅವರನ್ನು ಕೋವಿಡ್-19 ಸೋಂಕಿನ ಕಾರಣಕ್ಕಾಗಿ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು.ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಬುಧವಾರ ಸಂಜೆ ಕೊನೆಯುಸಿರೆಳೆದರು. ಅವರ ಪತ್ನಿ ಕೂಡಾ ಸೋಂಕಿಗೆ ತುತ್ತಾಗಿದ್ದರೂ ಕೆಲದಿನಗಳ ಹಿಂದೆ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಆದರೆ ಇವರು ಉಸಿರಾಟದ ತೀವ್ರ ಸಮಸ್ಯೆಗೆ ಸಿಲುಕಿ ವೆಂಟಿಲೇಟರ್ನಲ್ಲಿದ್ದರು.
ಅವರಹಿರಿಯ ಶಿಕ್ಷಣ ತಜ್ಞರೂ ಆಗಿದ್ದ ವಿಶ್ರಾಮ್ ರಾಮಚಂದ್ರ ಜಾಮ್ದಾರ್ ಅವರು ಆಧ್ಯಾತ್ಮಿಕ ಚಿಂತಕರಾಗಿದ್ದು, ಖ್ಯಾತ ಲೇಖಕರೂ ಆಗಿದ್ದರು. ಮಧ್ಯ ಭಾರತದ ಖ್ಯಾತ ಕೈಗಾರಿಕೋದ್ಯಮಿಯಾಗಿ ಅನೇಕ ಕೈಗಾರಿಕೆ-ಉದ್ಯಮಗಳಿಗೆ ಮಾರ್ಗದರ್ಶಕರಾಗಿದ್ದ ಅವರು ಜಗತ್ತಿನ ಅನೇಕ ಉದ್ಯಮ ಸಮ್ಮೇಳನಗಳಲ್ಲೂ ಭಾರತವನ್ನು ಪ್ರತಿನಿಸಿದ್ದರು.ಭಾರತೀಯ ಆಧ್ಯಾತ್ಮಿಕ ಮತ್ತು ಸಂಸ್ಕøತಿಗೆ ಸಂಬಂಸಿ ಅನೇಕ ಲೇಖನಗಳನ್ನು ಮತ್ತು ಪುಸ್ತಕಗಳನ್ನು ಅವರು ಬರೆದಿದ್ದಾರೆ.