ಬೆಂಗಳೂರು,ಆ.17- ನಗರದಾದ್ಯಂತ ಕಟ್ಟೆಚ್ಚರ ವಹಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೆÇಲೀಸ್ ಆಯುಕ್ತ ಭಾಸ್ಕರ್‍ರಾವ್ ಅವರು ಇಂದು ಅಧಿಕಾರಿಗಳ ಸಭೆ ನಡೆಸಿದರು.
ಈ ಸಭೆಯಲ್ಲಿ ಹೆಚ್ಚುವರಿ ಪೆÇಲೀಸ್ ಆಯುಕ್ತರು, ಜಂಟಿ ಪೆÇಲೀಸ್ ಆಯುಕ್ತರು, ಎಲ್ಲ ವಿಭಾಗದ ಡಿಸಿಪಿಗಳು ಭಾಗವಹಿಸಿದ್ದರು.
ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾಡುತ್ತಿರುವ ಗಸ್ತು ಹಾಗೂ ಯಾವ, ಯಾವ ಪ್ರದೇಶಗಳಲ್ಲಿ ಯಾವ ರೀತಿಯ ಭದ್ರತೆ ಕೈಗೊಂಡಿದ್ದಾರೆ ಎಂಬಿತ್ಯಾದಿ ಬಗ್ಗೆ ಅವರು ಮಾಹಿತಿ ಪಡೆದುಕೊಂಡು ಕೆಲವು ಅಗತ್ಯ ಸಲಹೆಗಳನ್ನು ನೀಡಿದ್ದಾರೆ.
ಇದು ಸೂಕ್ಷ್ಮ ವಿಚಾರ.ಈ ಸಂದರ್ಭದಲ್ಲಿ ಎಲ್ಲರೂ ಬಹಳ ಜಾಗ್ರತೆಯಿಂದ ಕೆಲಸ ಮಾಡಬೇಕು.ಯಾವುದೇ ರೀತಿಯ ಸಣ್ಣ ಘಟನೆಯೂ ನಡೆಯದ ರೀತಿ ನೋಡಿಕೊಳ್ಳಬೇಕು ಎಂದು ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಆಯುಕ್ತರ ಸಭೆಯ ನಂತರ ಹೆಚ್ಚುವರಿ ಪೆÇಲೀಸ್ ಆಯುಕ್ತರು ತಮ್ಮ ತಮ್ಮ ವಿಭಾಗದ ಡಿಸಿಪಿಗಳ ಜೊತೆ ಸಭೆ ನಡೆಸಿದರು.