ಶ್ರೀಮಂತ ಪಾಟೀಲ್‍ ಪ್ರಸ್ತಾಪ

ಬೆಂಗಳೂರು, ಜು.23-ಕಾಂಗ್ರೆಸ್ ಶಾಸಕ ಶ್ರೀಮಂತಪಾಟೀಲ್ ಅವರನ್ನು ಬೆಂಗಳೂರಿಗೆ ಕರೆಸಬೇಕೆಂದು ಶಾಸಕ ಡಾ.ರಂಗನಾಥ್ ವಿಧಾನಸಭೆಯಲ್ಲಿ ಮನವಿ ಮಾಡಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಮಂಡಿಸಿರುವ ವಿಶ್ವಾಸ ಮತಯಾಚನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ನಗರ ಅಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರು ಶ್ರೀಮಂತ ಪಾಟೀಲ್ ಅವರ ವಿಷಯ ಪ್ರಸ್ತಾಪಿಸಿದಾಗ, ಮಧ್ಯಪ್ರವೇಶಿಸಿ ರಂಗನಾಥ್ ಅವರು ತಾವು ವೈದ್ಯರಾಗಿದ್ದು, ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಹೃದ್ರೋಗ ಆಸ್ಪತ್ರೆಗಳಿವೆ. ಅವರಿಗೆ ಸೆಕ್ಯೂರಿಟಿ ಕೊಟ್ಟು ಬೆಂಗಳೂರಿಗೆ ಕರೆಸಬೇಕೆಂದು ಮನವಿ ಮಾಡಿದರು.
ರೆಸಾರ್ಟ್‍ನಲ್ಲಿ ನಮ್ಮೊಂದಿಗೆ ಚೆನ್ನಾಗಿದ್ದರು.ಅವರು ಹೃದಯ ಬೇನೆಗೆ ಒಳಗಾಗಿ ಮುಂಬೈನ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ.ಆದರೆ ಆ ಆಸ್ಪತ್ರೆಯಲ್ಲಿ ಹೃದ್ರೋಗಕ್ಕೆ ಚಿಕಿತ್ಸೆ ನೀಡುವ ಘಟಕವೇ ಇಲ್ಲ ಎಂದು ಹೇಳಿದರು.
ರಾಜೀನಾಮೆ ನೀಡಿರುವ ಶಾಸಕರ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಮಧ್ಯಂತರ ತೀರ್ಪಿನ ವಿಚಾರವನ್ನು ಸಚಿವ ಪ್ರಸ್ತಾಪಿಸಿದಾಗ ಮಧ್ಯಪ್ರವೇಶಿಸಿ ಬಿಜೆಪಿಯ ಶಾಸಕ ಮಾಧುಸ್ವಾಮಿ, ನಿಮ್ಮ ಶಾಸಕರ ಕೈಕಾಲು ಕಟ್ಟುತ್ತೀರೋ, ಏನು ಮಾಡುತ್ತೀರೋ ಮಾಡಿ. ಸುಪ್ರೀಂಕೋರ್ಟ್ ತೀರ್ಪಿನ ಚರ್ಚೆ ಬೇಡ ಎಂದರು.
ಜೆಡಿಎಸ್ ಶಾಸಕ ಶಿವಲಿಂಗೇಗೌಡ ಮಾತನಾಡಿ, ರಾಜೀನಾಮೆ ನೀಡಿರುವ 15 ಶಾಸಕರಿಗೂ ನಮಗೂ ಸಂಬಂಧವಿಲ್ಲ ಎಂದು ಹೇಳುತ್ತೀರಿ.ಅವರಿಗೆ ಸಚಿವ ಸ್ಥಾನ ಕೊಡುವುದಿಲ್ಲ ಎಂದು ಹೇಳಿಬಿಡಿ. ಈಗಲೇ ವಿಶ್ವಾಸಮತ ಯಾಚನೆ ನಿರ್ಣಯವನ್ನು ಮತಕ್ಕೆ ಹಾಕುವಂತೆ ಹೇಳುತ್ತೇವೆ ಎಂದರು.
ಆಗ ಮಾತು ಮುಂದುವರೆಸಿದ ಮಾಧುಸ್ವಾಮಿ, ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿ ಕೆಲವು ನಿಯಮಗಳನ್ನು ರೂಪಿಸಲಾಗಿದೆ.ಆದರೆ ಸಂವಿಧಾನ ಯಾವ ಶಾಸಕರನ್ನೂ ಕೂಡ ಜೀತದಾಳು ಮಾಡಲು ಅವಕಾಶ ಮಾಡಿಕೊಟ್ಟಿಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಈ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು.
ಯು.ಟಿ.ಖಾದರ್ ಮನವಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ