ಬೆಂಗಳೂರು, ಜು.22- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೊಂಡುತನ ಬಿಟ್ಟು ವಿಶ್ವಾಸಮತಯಾಚನೆ ಮಾಡಬೇಕೆಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಹೇಳಿದರು.
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಇಂದು ಯಾವುದೇ ಅರ್ಜಿ ವಿಚಾರಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ಕುಮಾರಸ್ವಾಮಿ ಅವರು ವಿಶ್ವಾಸಮತಯಾಚಿಸಬೇಕೆಂದು ಅವರು ತಿಳಿಸಿದರು.
ಈಗಾಗಲೇ 15 ಶಾಸಕರು ರಾಜೀನಾಮೆ ನೀಡಿ ಸರ್ಕಾರ ಬಹುಮತ ಕಳೆದುಕೊಂಡಿದೆ.ವಿಶ್ವಾಸಮತಯಾಚನೆ ವಿಳಂಬ ಮಾಡದಂತೆ ನಡೆಸಬೇಕು.ಮೊಂಡುತನ ಪ್ರದರ್ಶಿಸಬಾರದು ಎಂದು ಅವರು ಹೇಳಿದರು.