ಬೆಂಗಳೂರು : ಒಂದು ಕಡೆ ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ಕಾಂಗ್ರೆಸ್-ಜೆಡಿಎಸ್ ಕಸರತ್ತು ಮತ್ತೊಂದು ಕಡೆ ಅಧಿಕಾರಕ್ಕೆರುವ ಹಂಬಲ್ಲಿದುರವ ಬಿಜೆಪಿ. ಇದಕ್ಕೆ ಪೂರಕವಾಗಿ ರೆಸಾರ್ಟ್ ರಾಜಕಾರಣ. ಈ ಎಲ್ಲ ಕಸರತ್ತುಗಳಿಗೆ ಇಂದು ತೆರೆ ಬೀಳುವ ಸಾಧ್ಯತೆ ಇದೆ. ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಆಗುವ ಸಾಧ್ಯತೆ ಇದ್ದು, ಮೂರು ಪಕ್ಷಗಳಿಗೆ ಇಂದು ಪ್ರಮುಖ ದಿನವಾಗಿದೆ.
ಶನಿವಾರ-ಭಾನುವಾರ ಅತೃಪ್ತರ ಮನವೊಲಿಸಿ ಸರ್ಕಾರ ಉಳಿಸಿಕೊಳ್ಳುವ ತಂತ್ರದಲ್ಲಿ ಮೈತ್ರಿ ಪಾಳಯ ಸಜ್ಜಾಗಿತ್ತು. ಇದಕ್ಕಾಗಿ ಮೈತ್ರಿ ನಾಯಕರು ಅಧಿವೇಶನದಲ್ಲಿ ಕಾಲಾಹರಣ ಮಾಡಿ, ವಿಶ್ವಾಸಮತ ಯಾಚನೆಯನ್ನು ಸೋಮವಾರಕ್ಕೆ ಮುಂದೂಡುವಂತೆ ಮಾಡಿದ್ದರು ಎಂದು ಬಿಜೆಪಿ ಆರೀಪಿಸಿತ್ತು. ಆದರೆ, ರೆಬೆಲ್ ಶಾಸಕರನ್ನು ಸಂಪರ್ಕ ಮಾಡಲು ಸಾಧ್ಯವಾಗಿಲ್ಲ. ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಮಂತ ಪಾಟೀಲ್ ಅವರನ್ನು ಭೇಟಿ ಮಾಡಲೂ ಮೈತ್ರಿ ನಾಯಕರಿಗೆ ಸಾಧ್ಯವಾಗಿಲ್ಲ. ಹಾಗಾಗಿ ಇಂದು ಕಾಂಗ್ರೆಸ್-ಜೆಡಿಎಸ್ಗೆ ಮಾಡು ಇಲ್ಲವೆ ಮಡಿ ದಿನ.
ಸದನದಲ್ಲಿ ಇಂದು ಸಿಎಂ ವಿಶ್ವಾಸಮತಯಾಚನೆ ಮಾಡುತ್ತಾರೆ ಎನ್ನುವ ವಿಶ್ವಾಸದಲ್ಲಿ ಬಿಜೆಪಿ ಇದೆ. ಮೈತ್ರಿ ಸರ್ಕಾರ ಇಂದು ಪತನವಾಗುತ್ತದೆ, ನಾವು ಹೊಸ ಸರ್ಕಾರ ರಚನೆ ಮಾಡಬಹುದು ಎನ್ನುವ ಹುಮ್ಮಸ್ಸಿನಲ್ಲಿ ಬಿಜೆಪಿ ನಾಯಕರಿದ್ದಾರೆ.
ಬಿಜೆಪಿ ರಾಜ್ಯಾದ್ಯಕ್ಷ ಬಿಎಸ್ ಯಡಿಯೂರಪ್ಪ ಶಾಸಕರ ಜೊತೆ ರಮಡ ರೆಸಾರ್ಟ್ನಲ್ಲಿ ತಂಗಿದ್ದಾರೆ. ಬೆಳಗ್ಗೆ 9 ಗಂಟೆಗೆ ಶಾಸಕರ ಜೊತೆ ಬಸ್ ನಲ್ಲಿ ವಿಧಾನಸೌಧಕ್ಕೆ ಬಿಎಸ್ವೈ ಆಗಮಿಸಲಿದ್ದಾರೆ. ಕೆಲ ಶಾಸಕರು ಪ್ರತ್ಯೇಕವಾಗಿ ತಮ್ಮ ಕಾರಿನಲ್ಲಿ ಬರಲು ನಿರ್ಧರಿಸಿದ್ದರು. ಆದರೆ, ಎಲ್ಲ ಶಾಸಕರು ಬಸ್ನಲ್ಲಿ ವಿಧಾನಸೌಧಕ್ಕೆ ಬರಲು ಸೂಚನೆ ನೀಡಲಾಗಿದೆ.