ಮುಂಬೈ,ಜು.14-ಮುಂಬೈನಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿದ ಎಂ.ಟಿ.ಬಿ.ನಾಗರಾಜ್, ನಾವು 12 ಜನ ಶಾಸಕರು ಒಗ್ಗಾಟಿಗಿದ್ದೇವೆ, ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಅಥವಾ ಗುಂಪುಗಾರಿಕೆಯಿಲ್ಲ ಎಂದು ಹೇಳಿದರು.
ನಾವು ಯಾರ ಸಂಪರ್ಕದಲ್ಲೂ ಇಲ್ಲ, ನಮಗೆ ಯಾರಿಂದಲೂ ಒತ್ತಡವಿಲ್ಲ, ನಾವು ಯಾವ ಒತ್ತಡಗಳಿಗೂ ಮಣಿಯುವುದಿಲ್ಲ ಎಂದು ಎಂಟಿಬಿ ನಾಗರಾಜ್ ಹೇಳಿದರು.
ಶಾಸಕ ಡಾ.ಸುಧಾಕರ್ ಅವರು ದೆಹಲಿಯಲ್ಲಿದ್ದಾರೆ, ಅವರೂ ಕೂಡ ಮುಂಬೈಗೆ ಬಂದು ನಮ್ಮ ಜೊತೆ ಸೇರಲಿದ್ದಾರೆ. ಅವರ ಮೇಲೆ ಹಲ್ಲೆಯಾಗಿದೆ, ಅವರು ದೆಹಲಿಯಲ್ಲಿ ಸುರಕ್ಷಿತ ಸ್ಥಳದಲ್ಲಿದ್ದಾರೆ ಎಂದು ಎಂಟಿಬಿ ನಾಗರಾಜ್ ಹೇಳಿದರು.
ನಮ್ಮನ್ನು ಆರ್.ಆಶೋಕ್ ಅವರು ಕರೆದುಕೊಂಡು ಬಂದಿಲ್ಲ, ನಾವೆಲ್ಲ ಸ್ವಯಂಪ್ರೇರಿತವಾಗಿ ಬಂದಿದ್ದೇವೆ ಎಂದು ಹೇಳಿದರು.
ಕಾಂಗ್ರೇಸ್ನ ಯಾವ ನಾಯಕರು ಒತ್ತಡ ಹಾಕಿದರೂ ಅಥವಾ ಮನವಿ ಮಾಡಿದರೂ ರಾಜೀನಾಮೆ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಮತ್ತೇನು ಹೇಳಿದ್ರು?
ಮೈತ್ರಿ ಸರ್ಕಾರದ ಪತನಕ್ಕೆ ಬೆಳಗಾವಿ ಜಿಲ್ಲೆಯ ಶಾಸಕಿಯೇ ಮೊದಲ ಕಾರಣ, ಮತ್ತು ಬೆಳಗಾವಿ ರಾಜಕೀಯದಲ್ಲಿ ಪ್ರಭಾವಿ ಸಚಿವರೊಬ್ಬರ ಹಸ್ತಕ್ಷೇಪ.
ಪ್ರತಿಯೊಂದು ವಿಚಾರದಲ್ಲೂ/ವಿಷಯದಲ್ಲೂ ಕಾಂಗ್ರೇಸ್ ಪ್ರಭಾವಿ ಸಚಿವರ ಮತ್ತು ಎಚ್.ಡಿ.ರೇವಣ್ಣನವರು ಹಸ್ತಕ್ಷೇಪ ಮಾಡುತ್ತಿದ್ದರು. ಸರ್ಕಾರ ಬೀಳಲು ಅವರಿಬ್ಬರೇ ಕಾರಣ.
ಶಾಸಕರ ಪತ್ರಗಳಿಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಬೆಲೆಯನ್ನೇ ಕೊಡುತ್ತಿರಲಿಲ್ಲ.
ಇದ್ಯಾವದಕ್ಕೂ ಸಿದ್ದರಾಮಯ್ಯನವರಾಗಲಿ ಅಥವಾ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಹಾಗಲಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ ಎಂದು ವಾಟ್ಸಪ್ ಮೂಲಕ ತಮ್ಮ ಕ್ಷೇತ್ರದ ಮತದಾರರಿಗೆ ಸಂದೇಶ ಕಳುಹಿಸಿದ್ದಾರೆ. ಎನ್ನುತ್ತಿದ್ದಾರಂತೆ…..