ಬೆಂಗಳೂರು: ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರು ಇಂದು ಸಂಜೆ ಇಂದು ಸಂಜೆ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಒಂದುವಾರಗಳ ಕಾಲ ಅವರು ಅಲ್ಲಿಯೇ ಉಳಿಯಲಿದ್ದಾರೆ.
ಹಾಂಗಂತ ಎಚ್ಡಿಕೆ ಕುಟುಂಬ ಸಮೇತ ಹೋಗುತ್ತಿಲ್ಲ ಅಥವಾ ಯಾವುದೇ ಚಿಕಿತ್ಸೆಗೆ ಅಮೆರಿಕಕ್ಕೆ ತೆರಳುತ್ತಿಲ್ಲ. ಅವರು ಅಲ್ಲಿಗೆ ಪ್ರಯಾಣ ಬೆಳೆಸಲು ಮುಖ್ಯ ಕಾರಣ ಒಕ್ಕಲಿಗ ಪರಿಷತ್ ಆಯೋಜಿಸಿರುವ ಕಾರ್ಯಕ್ರಮ. ಹೌದು, ಅಮೆರಿಕ ಒಕ್ಕಲಿಗರ ಪರಿಷತ್ ಒಂದು ವಾರಗಳ ಕಾಲ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ 7.15ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅವರು ಅಮೆರಿಕಕ್ಕೆ ತೆರಳಲಿದ್ದಾರೆ. ಜುಲೈ 8ರಂದು ಬೆಳಗ್ಗೆ ಬೆಂಗಳೂರಿಗೆ ವಾಪಾಸಾಗಲಿದ್ದಾರೆ
ಆದಿಚುಂಚನಗಿರಿ ಮಠದ ಶಿವನ ದೇವಸ್ಥಾನದ ಶಿಲಾನ್ಯಾಸ, ಜುಲೈ 4,5,6 ರಂದು ಒಕ್ಕಲಿಗ ಪರಿಷತ್ನ ಸಮ್ಮೇಳನ ನಡೆಯಲಿದೆ. ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಕುಮಾರಸ್ವಾಮಿ ಅವರಿಗೆ ವಿಶೇಷ ಆಮಂತ್ರಣ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಬಿಡುವಿಲ್ಲದ ದಿನಚರಿ ಮಧ್ಯೆಯೂ ಅವರು ಬಿಡುವು ಮಾಡಿಕೊಂಡು ಅಮೆರಿಕಕ್ಕೆ ತೆರಳುತ್ತಿದ್ದಾರೆ.
ಕುಮಾರಸ್ವಾಮಿ ಅವರು ಯಾದಗಿರಿ, ರಾಯಚೂರು ಹಾಗೂ ಬೀದರ್ನಲ್ಲಿ ಗ್ರಾಮವಾಸ್ತವ್ಯ ಮಾಡಿದ್ದರು. ಈ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದವು.