ಉಜಳಂಬ ಗ್ರಾಮದಲ್ಲಿ ರಾತ್ರಿ 9.15ರವರೆಗೆ ಅಹವಾಲು ಆಲಿಸಿದ ಮುಖ್ಯಮಂತ್ರಿ – ಸುದ್ದಿಗೋಷ್ಠಿಯ ಸಾರಾಂಶ

ಮುಖ್ಯಮಂತ್ರಿ ಅವರ ಜನತಾ ದರ್ಶನ: ವಿಕಲಚೇತನರಿಗೆ ವಿಶೇಷ ವ್ಯವಸ್ಥೆ

ಉಜಳಂಬ ಗ್ರಾಮದಲ್ಲಿ ಮಾ.೨೭ರಂದು ಮಾನ್ಯ ಮುಖ್ಯಮಂತ್ರಿ ಅವರ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲೆಯ ನಾನಾ ಗ್ರಾಮಗಳಿಂದ ಜನರು ಆಗಮಿಸಿ ದೂರು ಅರ್ಜಿಗಳನ್ನು ಸಲ್ಲಿಸಿದರು.

ಸುಲಭವಾಗಿ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಜಿಲ್ಲಾಡಳಿತದಿಂದ ಅಚ್ಚುಕಟ್ಟಾದ ಅಹವಾಲು ಸ್ವೀಕಾರ ಕೇಂದ್ರವನ್ನು ತೆರೆಯಲಾಗಿತ್ತು. ಜನರು ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮನವಿ ಪತ್ರಗಳನ್ನು ಸಲ್ಲಿಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯಿಂದ ಸೂಕ್ತ ಭದ್ರತೆ ಒದಗಿಸಲಾಗಿತ್ತು.

ವಿಕಲಚೇತನರಿಗೆ ವೀಲ್ ಚೇರ್ ವ್ಯವಸ್ಥೆ:
ಮಾನ್ಯ ಮುಖ್ಯಮಂತ್ರಿ ಅವರಿಗೆ ದೂರು ಅರ್ಜಿಗಳನ್ನು ಸಲ್ಲಿಸಲು ಬಂದಿದ್ದ ವಿಕಲಚೇತನರಿಗೆ ವೀಲ್ ಚೇರ್ ಗಳ ವ್ಯವಸ್ಥೆ ಮಾಡಲಾಗಿತ್ತು. ಸ್ಕೌಟ್, ಗೈಡ್ಸ್ ಹಾಗೂ ಇತರೆ ಸ್ವಯಂ ಸೇವಕರು ವಿಕಲಚೇತನರಿಗೆ ನೆರವಾದರು.

ಸರತಿ ಸಾಲಿನಲ್ಲಿಯೂ ಕುರ್ಚಿ:
ವಿಕಲಚೇತನರಚೇತನರ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಮಾನ್ಯ ಮುಖ್ಯಮಂತ್ರಿ ಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಬಳಿಗೆ ಅಹವಾಲು ಸಲ್ಲಿಸಲು ಆಗಮಿಸುವ ವಿಕಲಚೇತನರು ಸರತಿ ಸಾಲಿನಲ್ಲಿ ನಿಲ್ಲಲು ಕಷ್ಟಪಡುತ್ತಿರುವುದನ್ನು ಕಂಡು ಸಾಲಿನಲ್ಲಿಯೂ ಕುರ್ಚಿಗಳನ್ಮು ಹಾಕಲು ಸೂಚನೆ ನೀಡಿದರು. ಕೂಡಲೇ ಕುರ್ಚಿಗಳನ್ನು ಹಾಕಲಾಯಿತು.

ರಾತ್ರಿ 9.15ರವರೆಗೆ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿ, ಅಹವಾಲು ಆಲಿಸಿದ ಮುಖ್ಯಮಂತ್ರಿಗಳು
ಬೀದರ ಜೂನ್ 27 ಕ.ವಾ.: ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ಜೂನ್ 27ರಂದು ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂದಿತು.

ಉಜಳಂಬ ಹಾಗೂ ಉಜಳಂಬ ಗ್ರಾಮದ ಸುತ್ತಲಿನ ಹಳ್ಳಿಗಳಾದ ಹೊನ್ನಳ್ಳಿ, ಮನ್ನಳ್ಳಿ, ಮಂಠಾಳ,‌ ಕಿಟ್ಟಾ, ಗೋಸಗಾ, ಜೋಗವಾಡಿ ಸೇರಿದಂತೆ ಹಲವಾರು ಗ್ರಾಮಸ್ಥರು ಸಿಎಂ ಅವರಿಗೆ ತಮ್ಮ ಅಹವಾಲನ್ನು ಸಲ್ಲಿಸಿದರು.

ಸಿಎಂ ಅವರಿಗೆ ನೇರವಾಗಿ ಮನವಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಇದಕ್ಕಾಗಿ ವೇದಿಕೆಯ ಮುಂದುಗಡೆ ಬ್ಯಾರಿಕೇಡ್ ಹಾಕಲಾಗಿತ್ತು. ಜನರು ಸಾಲಾಗಿ ಒಬ್ಬೋಬ್ಬರಾಗಿ ಬಂದು ಮನವಿ ಸಲ್ಲಿಸಿದರು. ಸಿಎಂ ಅವರು ವಿಕಲಚೇತನರು ಇದ್ದಲ್ಲಿಗೆ ಹೋಗ ಅವರ ಅರ್ಜಿ ಸ್ವೀಕರಿಸಿ ಅಹವಾಲು ಕೇಳಿದರು. ಹಲವಾರು ಸಂಘಟನೆಗಳ ಸದಸ್ಯರು ಸಿಎಂ ಅವರ ಬಳಿ ಬಂದು ತಮ್ಮ ಮನವಿ ಸಲ್ಲಿಸಿದರು.

ರಾತ್ರಿ 9.15ರವರೆಗೆ ಸಿಎಂ ಅವರು ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿದರು. ಜನರು ಸಾವಧಾನದಿಂದ ಸಾಲಾಗಿ ಬಂದು ಸಿಎಂ ಬಳಿ ಮನವಿ ಸಲ್ಲಿಸಿದರು.

ಈ ವೇಳೆ ಸಚಿವರಾದ ಬಂಡೆಪ್ಪ ಖಾಶೆಂಪೂರ, ರಾಜಶೇಖರ ಪಾಟೀಲ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಿ.ನಾರಾಯಣರಾವ್ ಇದ್ದರು.

 ಉಜಳಂಬ ಗ್ರಾಮದಲ್ಲಿ ಜನಸಂಪರ್ಕ ಸಭೆ ಬಳಿಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಸುದ್ದಿಗೋಷ್ಠಿಯ ಸಾರಾಂಶ

ಇಂದು 4 ಸಾವಿರಕ್ಕೂ ಅಧಿಕ ಅರ್ಜಿಗಳ ಸ್ವೀಕಾರ.

ಹಲವಾರು ಸಮಸ್ಯೆಗಳಿಗೆ ಸ್ಥಳದಲ್ಲಿ ಪರಿಹಾರ ಸೂಚಿಸಲಾಗಿದೆ. ಉಳಿದ ಎಲ್ಲಾ ಮನವಿಗಳಿಗೆ ಕಾಲಮಿತಿಯ ಒಳಗಾಗಿ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಬೀದರ ನಗರದಲ್ಲಿ ಕನ್ನಡ ಭವನ ನಿರ್ಮಾಣ ಕಾಮಗಾರಿಗೆ ಒಂದು ಕೋಟಿ ರುಪಾಯಿ ನೆರವು ನೀಡಲಾಗುವುದು.

ತುಳಜಾಪುರ ಧಾರ್ಮಿಕ ಕ್ಷೇತ್ರದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ 5 ಕೋಟಿ ರೂಪಾಯಿ ಅನುದಾನ.

ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಒದಗಿಸಲು, ಕಾರಂಜಾ ಸಂತ್ರಸ್ತರ ಸಮಸ್ಯೆಯನ್ನು ಬಗೆಹರಿಸಲು ಮನವಿಗಳು ಬಂದಿದೆ. ಈ ಕುರಿತು ಹಣಕಾಸು ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಭೆಯನ್ನು ಕರೆದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.

ಮುಂದಿನ ನಾಲ್ಕೈದು ತಿಂಗಳುಗಳ ಒಳಗಾಗಿ ಎಲ್ಲಾ 30 ಜಿಲ್ಲೆಗಳಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ನಡೆಸಲಾಗುವುದು.

ಈ ಎಲ್ಲ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿರುವ ಅನುದಾನಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗುವುದು ಮಾತ್ರವಲ್ಲದೆ ಎಲ್ಲಾ ಕಾಮಗಾರಿಗಳನ್ನು ತಕ್ಷಣ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು .

ಔರಾದ್ಕರ್ ವರದಿ ಜಾರಿ ಕುರಿತಾಗಿ ಈಗಾಗಲೇ ಹಣಕಾಸು ಇಲಾಖೆ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಭೆ ನಡೆಸಲಾಗಿದೆ. ಈ ಕುರಿತು ಮುಂದಿನ ಹತ್ತು ಹದಿನೈದು ದಿನಗಳ ಒಳಗಾಗಿ ತೀರ್ಮಾನವನ್ನು ಕೈಗೊಳ್ಳಲಾಗುವುದು.

ಈ ವಿಡಿಯೋಗಳು ನಾವು ತಯಾರಿಸಿದ್ದಲ್ಲ. ವಾಟ್ಸಪ್ಪ್ ನಲ್ಲಿ ವೈರಲ್ ಆಗಿರೋ ವಿಡಿಯೋಗಳು. ನಾವು ಅವುಗಳನ್ನು ಪರಿಶೀಲಿಸಿ ನಿಮ್ಮೊಂದಿಗೆ ಕೇವಲ ಮನೋರಂಜನೆಗಾಗಿ ತೋರಿಸುತ್ತಿದ್ದೇವೆ. ನಾವು ಈ ವಿಡಿಯೋಗಳ ಮಾಲೀಕತ್ವದ ಹಕ್ಕು ಪಡೆಯುವುದಿಲ್ಲ. ಯಾರನ್ನು ನೋವುಂಟು ಮಾಡುವ ಅಥವಾ ತೇಜೋವಧೆ ಮಾಡುವ ಉದ್ದೇಶವು ನಮಗಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ