ಬುದ್ಧ ಪೂರ್ಣಿಮಾ ಹಿನ್ನಲೆ-ಇಂದಿನಿಂದ 8 ದಿನಗಳ ಕಾಲ ಬುದ್ಧ ಪೂರ್ಣಿಮೆ ಆಚರಣೆ

ಬೆಂಗಳೂರು, ಮೇ 11- ಬುದ್ಧ ಪೂರ್ಣಿಮಾ ಅಂಗವಾಗಿ ಇಂದಿನಿಂದ ಮೇ 18ರವರೆಗೆ ಮಹಾ ಬೋಧಿ ಸೊಸೈಟಿ ವತಿಯಿಂದ ಒಟ್ಟು 8 ದಿನಗಳ ಕಾಲ ಬುದ್ಧ ಪೂರ್ಣಿಮೆ ಆಚರಣೆ ಮಾಡಲಾಗುತ್ತಿದೆ ಎಂದು ಮಿಕ್ಕೂ ಬುದ್ಧ ದತ್ತ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಗವಾನ್ ಬುದ್ಧರ ಮೂರು ಮಹಾ ಘಟನೆಗಳಾದ ಜನನ, ಜ್ಞಾನೋದಯ ಮತ್ತು ಮಹಾ ಪರಿನಿಬ್ಬಾಣ ಆಗಿದೆ.ಇಂದು ಮಹಾಬೋಧಿ ಬುದ್ಧ ವಿಹಾರದ ಭಿಕ್ಷುಗಳು ನಗರದ ವಿವಿಧ ಪ್ರದೇಶಗಳಲ್ಲಿ ಭಿP್ಷÁಟನೆ ಕಾರ್ಯಕ್ರಮವಿದೆ ಎಂದರು.
13ರಂದು ಬೆಂಗಳೂರು ಮತ್ತು ತುಮಕೂರಿನಲ್ಲಿ ಮಹಿಳಾ ಮತ್ತು ಮಕ್ಕಳ ಧರ್ಮ ಕಾರ್ಯಗಾರ ಆಯೋಜಿಸಲಾಗಿದೆ. 14ರಂದು ಘಾಟಿ ಸುಬ್ರಮಣ್ಯದಲ್ಲಿರುವ ಗೋಶಾಲೆಗೆ ಮೇವು ವಿತರಣೆ ಮಾಡಲಿದ್ದಾರೆ..
ಮೇ 16ರಂದು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಹಾಗೂ ಕೆಜಿಎಫ್‍ನಲ್ಲಿ ಧರ್ಮ ಪ್ರವಚನ ನಡೆಯಲಿದೆ.
17ರಂದು ಚಾಮರಾಜನಗರದ ನಾಗವಲ್ಲಿ ಗ್ರಾಮದಲ್ಲಿ ಪ್ರವಚನ ಕಾರ್ಯಕ್ರಮ ನಡೆಯಲಿದೆ.ಮೆ18ರಂದು ನಗರದ ಮಹಾಬೋಧಿ ಸೊಸೈಟಿಯಲ್ಲಿ ಪವಿತ್ರ ವೈಶಾಖ ಬುದ್ಧ ಪೂರ್ಣಿಮೆ ನಡೆಯಲಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ