ಚಿಟ್ ಫಂಡ್ ಸಂಸ್ಥೆಯಿಂದ 47ಕೋಟಿ ಹಣ ವಂಚನೆ

ಬೆಂಗಳೂರು,ಮೇ 11-ಇಂದಿರಾನಗರದಲ್ಲಿರುವ ಚಿಟ್ ಫಂಡ್ ಸಂಸ್ಥೆಯಿಂದ 190ಕ್ಕೂ ಅಧಿಕ ಹೂಡಿಕೆದಾರರಿಗೆ ಬರೋಬ್ಬರಿ 47ಕೋಟಿ ಹಣ ವಂಚನೆಯಾಗಿದೆ ಎಂದು ಹೂಡಿಕೆದಾರ ಹಾಗೂ ವಂಚನೆಗೊಳಗಾದ ಹೆಚ್.ಶ್ರೀಬಿವಾಸ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಂಪನಿಯನ್ನು ಅನೇಕ ಮಂದಿ ಹೊಟ್ಟೆ ಬಟ್ಟೆ ಕಟ್ಟಿ ಚೀಟಿ ಹಾಕಿದ್ದರು. ಆದರೆ ಚಿಟ್ ಫಂಡ್ ಸಂಸ್ಥೆಯ ಮಾಲೀಕ ಪಿ.ಕೆ. ಚಂದ್ರಶೇಖರ್ ಅವರು ಚೀಟಿ ಮುಗಿದ ಬಳಿಕ ಹಣ ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ದೂರಿದ್ದಾರೆ.

ಇನ್ನೂ ವಂಚನೆಗೆ ಒಳಗಾದ ಶಂಕರ್ ಮಾತನಾಡಿ, ಈ ಸಂಸ್ಥೆಯಲ್ಲಿ ನಮ್ಮ ಮಕ್ಕಳ ಮದುವೆಗಾಗಿ 10ಲಕ್ಷ ಚೀಟಿ ಹಾಕಿದ್ದೆ ಆದ್ರೆ ಚೀಟಿ ಮುಗಿದ ಬಳಿಕ ಹಣ ವಾಪಸ್ ನೀಡದೆ ಕಚೇರಿ ಮುಚ್ಚಿ ಪರಾರಿಯಾಗಿದೆ. ನಮಗೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.

ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಮೇ 2ರಂದು ಕಂಪನಿ ವಿರುದ್ಧ ದೂರು ದಾಖಲಾಗಿದೆ. ಇಲ್ಲಿಯವರೆಗೂ ಯಾವುದೇ ಆರೋಪಿಯನ್ನು ಬಂಧಿಸಿಲ್ಲ. ಇನ್ನೂ ಈ ಸಂಬಂಧ ಡೆಪ್ಯುಟಿ ರಿಜಿಸ್ಟ್ರಾರ್ ಬಳಿ ಕೇಳಿದರೂ ಅವರಿಂದಲೂ ನಮಗೆ ಸೂಕ್ತ ನ್ಯಾಯ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ವಂಚನೆಗೆ ಒಳಗಾದ ಶಂಕರ್ ಮತ್ತು ಶಾಮಾಲ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ