ಮೊನ್ನೆ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ ಅಂಗಳದಲ್ಲಿ ಆರ್.ಅಶ್ವಿನ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 28 ರನ್ಗಳ ಅಂತರದಿಮದ ಸೋಲು ಕಂಡಿತು.
ಹೈವೋಲ್ಟೇಜ್ನಿಂದ ಕೂಡಿದ್ದ ಪಂದ್ಯದಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನೀಡಿದ್ವು ಆದ್ರೆ ಪಂಜಾಬ್ ತಂಡದ ಕ್ಯಾಪ್ಟನ್ ಆರ್.ಅಶ್ವಿನ್ ಮಾಡಿದ ಆ ಎರಡು ಯಡವಟ್ಟುಗಳು ಪಂದ್ಯವನ್ನ ಕೈಚೆಲ್ಲಿ ಕೊಳ್ಳುವಂತೆ ಮಾಡಿತು.
ಇತ್ತಿಚೆಗೆಷ್ಟೆ ಕೇರಂ ಸ್ಪಿನ್ನರ್ ಕಮ್ ಕ್ಯಾಪ್ಟನ್ ಆರ್.ಅಶ್ವಿನ್ ಜೋಸ್ ಬಟ್ಲರ್ ಅವರನ್ನ ಮಂಕಡ್ ಶೈಲಿಯಲ್ಲಿ ಔಟ್ ಮಾಡಿ ಭಾರೀ ಚರ್ಚೆಗೆ ಕಾರಣರಾಗಿದ್ರು.
ಮಂಕಡ್ ಶೈಲಿಯಲ್ಲಿ ಅಶ್ವಿನ್ ಔಟ್ ಮಾಡಿದ್ದು ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಈ ತಮಿಳುನಾಡು ಬೌಲರ್ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿವೆ.
ಈ ಪರ ವಿರೋಧದ ಚರ್ಚೆ ನಡೆಯುತ್ತಿರುವಾಗಲೇ ಇದೀಗ ಅಶ್ವಿನ್ ಅವರ ಕಳಪೆ ನಾಯಕತ್ವ ಈಗ ಭಾರೀ ಸದ್ದು ಮಾಡಿದೆ. ಮೊನ್ನೆ ಕೋಲ್ಕತ್ತಾ ವಿರುದ್ಧ ಪಂದ್ಯದಲ್ಲಿ ಕ್ಯಾಪ್ಟನ್ ಅಶ್ವಿನ್ ತೆಗೆದುಕೊಂಡ ಆ ಎರಡು ತಪ್ಪುಗಳೆ ಪಂಜಾಬ್ ತಂಡದ ಸೋಲಿಗೆ ಕಾರಣವಾಗಿದೆ. ಕಳೆದ ಸೀಸನ್ನಿಂದ ಪಂಜಾಬ್ ತಂಡವನ್ನ ಮುನ್ನಡೆಸಿದ ಅನುಭವ ಹೊಂದಿರುವ ಅಶ್ವಿನ್ ಕ್ರಿಕೆಟ್ನ ಸಾಮಾನ್ಯ ಸಂಗತಿಗಳು ಗೊತ್ತಿಲ್ಲದವರಂತೆ ನಡೆದುಕೊಂಡಿದ್ದು ಅವರ ನಾಯಕತ್ವವನ್ನೆ ಪ್ರಶ್ನಿಸುವಂತೆ ಮಾಡಿದೆ. ಹಾಗಾದ್ರೆ ಬನ್ನಿ ಅಶ್ವಿನ್ ಮಾಡಿದ ಆ ಎರಡು ಮಿಸ್ಟೇಕುಗಳು ಏನು ಅನ್ನೊದನ್ನ ತೋರಿಸ್ತೀವಿ ನೋಡಿ.
ಮಿಸ್ಟೇಕ್ ನಂ.1
ವರುಣ್ ಚಕ್ರವರ್ತಿಗೆ ಓವರ್ ಕೊಟ್ಟು ಯಡವಟ್ಟು
ಕ್ಯಾಪ್ಟನ್ ಆರ್.ಅಶ್ವಿನ್ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಪ್ರಮುಖ ಖಿಡಿiಛಿಞ ವೊಂದನ್ನ ಮರೆತು ಮೊದಲ ತಪ್ಪು ಮಾಡಿದ್ರು. ಆ ಪಂದ್ಯದಲ್ಲಿ ತಂಡಕ್ಕೆ ಡೆಬ್ಯು ಮಾಡಿದ ಕನ್ನಡಿಗ ವರುಣ್ ಚಕ್ರವರ್ತಿಗೆ ಎರಡನೇ ಓವರ್ ಕೊಟ್ಟು ಅಶ್ವಿನ್ ಕೈಸುಟ್ಟುಕೊಂಡ್ರು. ಗೂಗ್ಲಿ ಬೌಲರ್ ವರುಣ್ ಚಕ್ರವರ್ತಿಯನ್ನ ಅಶ್ವಿನ್ ಓಪನರ್ ಕ್ರಿಸ್ ಲೀನ್ ಅವರನ್ನ ಔಟ್ ಮಾಡುವುದಕ್ಕಾಗಿ ಚೆಂಡನ್ನ ಕೈಗಿಟ್ರು. ಆದರೆ ಕ್ರಿಸ್ ಲೀನ್ ಸಹ ಓಪನರ್ ಸುನಿಲ್ ನರೈನ್ಗೆ Sಣಡಿiಞe ಬಿಟ್ಟುಕೊಟ್ಟು ಜಾಣ್ಮೆ ಮರೆದ್ರು. Sಣಡಿiಞe ಪಡೆದ ಸುನಿಲ್ ನರೈನ್ ವರುಣ್ ಚಕ್ರವರ್ತಿ ಆರು ಎಸೆತಗಳಲ್ಲಿ 3 ಸಿಕ್ಸ್ 1 ಬೌಂಡರಿ ಸೇರಿದಂತೆ ಒಟ್ಟು 25 ರನ್ ಕಲೆ ಹಾಕಿದ್ರು. ತನ್ನ ಡೆಬ್ಯೂ ಪಂದ್ಯದಲ್ಲಿ ಮೊದಲ ಓವರ್ನಲ್ಲಿ ಬೌಲರ್ ಕೊಟ್ಟ ಅತಿ ದುಬಾರಿ ರನ್ ಇದಾಗಿದೆ.
ಕ್ರಿಸ್ ಲೀನ್ ಸುನಿಲ್ Sಣಡಿiಞe ಬಿಟ್ಟುಕೊಡಲು ಕಾರಣ ಇದೆ. ಸುನಿಲ್ ಸ್ಪಿನ್ನರ್ಸ್ಗಳ ವಿರುದ್ಧ ಚೆನ್ನಾಗಿ ಆಡುತ್ತಾರೆ. ಸ್ಪಿನ್ನರ್ಗಳನ್ನ ಮನಬಂದಂತೆ ಚೆಂಡಾಡುವ ವಿಂಡೀಸ್ ಪ್ಲೇಯರ್ ಎರಡು ವರ್ಷಗಳ ಹಿಂದೆ ಈಡನ್ ಅಂಗಳದಲ್ಲಿ ಇದೇ ಇದೇ ಸುನಿಲ್ ನರೈನ್ ಆರ್ಸಿಬಿ ತಂಡದ ಸ್ಪಿನ್ನರ್ ಸ್ಯಾಮ್ಯುವೆಲ್ ಬದ್ರಿ ಅವರ 10 ಎಸೆತದಲ್ಲಿ 30 ರನ್ ಬಾರಿಸಿದ್ರು. ಕ್ಯಾಪ್ಟನ್ ಅಶ್ವಿನ್ ಇದನ್ನ ಮರೆತಿದ್ರು.
ಮಿಸ್ಟೇಕ್ ನಂ. 2
ಫೀಲ್ಡಂಗ್ ನಿಯಮಗಳನ್ನೆ ಮರೆತ ಕೇರಂ ಸ್ಪಿನ್ನರ್
ಫಿಂಗರ್ ಸ್ಪಿನ್ನರ್ ಆರ್.ಅಶ್ವಿನ್ ಇದುವರೆಗೂ ಹಲವಾರು ಅಂತಾರಾಷ್ಟ್ರೀಯ ಪಂದ್ಯಗಳನ್ನ ಆಡಿದ್ದಾರೆ. ಆದರೆ ಆಶ್ವಿನ್ ಫೀಲ್ಡಿಂಗ್ ನಿಯಮಗಳೆ ಗೊತ್ತಿಲ್ಲದವರಂತೆ ನಡೆದುಕೊಂಡಿದ್ದು ಅಚ್ಚರಿ ತಂದಿತ್ತು. ಮೊನ್ನೆಯ ಪಂದ್ಯದಲ್ಲಿ ತಂಡದ ವೇಗಿ ಮೊಹ್ಮದ್ ಶಮಿ ಸ್ಪೋಟಕ ಬ್ಯಾಟ್ಸ್ಮನ್ ಆ್ಯಂಡ್ರೆ ರಸ್ಸೆಲ್ ಅವರನ್ನ ಆರಂಭದಲ್ಲೆ ಸೂಪರ್ ಸ್ಪೆಲ್ ಮಾಡಿ ಕಟ್ಟಿ ಹಾಕಿದ್ರು. 17ನೇ ಓವರ್ನ ನಾಲ್ಕನೆ ಎಸೆತದಲ್ಲಿ ಶಮಿ ಮೂರು ರನ್ ಗಳಿಸಿದ್ದ ರಸ್ಸೆಲ್ ಗೆ ಯಾರ್ಕರ್ ಹಾಕಿ ಎಲ್ಬಿ ಬಲೆಗೆ ಬೀಳಿಸಿದ್ರು. ಎಲ್ಲ ಪಂಜಾಬ್ ಆಟಗಾರರು ಇದನ್ನ ಸಂಭ್ರಮಿಸುತ್ತಿರುವಾಗಲೇ ಅಂಪೈಯರ್ ಅನಿಲ್ ಚೌಧರಿ ಪೆವಿಲಿಯನ್ ಕಡೆ ಹೋಗುತ್ತಿದ್ದ ರಸ್ಸೆಲ್ ಅವರನ್ನ ವಾಪಸ್ ಕರೆದ್ರು. ಯಾಕಂದ್ರೆ ಶಮಿ ಬೌಲಿಂಗ್ ಮಾಡುವಾಗ iಟಿಟಿeಡಿ ಅiಡಿಛಿಟeನಲ್ಲಿ ಕೇವಲ ಮೂರು ಫೀಲ್ಡರ್ಗಳು ಮಾತ್ರ ಇದ್ರು. ಅಂಪೈಯರ್ ಇದನ್ನ ನೋ ಬಾಲ್ ಎಂದು ಪರಿಗಣಿಸಿದ್ರು. ಕ್ಯಾಪ್ಟನ್ ಅಶ್ವಿನ್ ಫೀಲ್ಡ್ ಸೆಟ್ ಮಾಡೋದ್ರಲ್ಲಿ ಎಡವಿದ್ರು.
ಈ ಜೀವದಾನದ ಲಾಭ ಪಡೆದ ಆ್ಯಂಡ್ರೆ ರಸ್ಸೆಲ್ ಮತ್ತೆ ಹಿಂತಿರುಗಿ ನೋಡಲಿಲ್ಲ . ಪಂಜಾಬ್ ಬೌಲರ್ಸ್ಗಳನ್ನ ಬೆಂಡೆತ್ತಿದ ಈ ಕೆರೆಬಿಯನ್ ಪ್ಲೇಯರ್ ಐದು ಸಿಕ್ಸರ್ ಮತ್ತು ಮೂರು ಬೌಂಡರಿ ಬಾರಿಸಿ ಕೇವಲ 17 ಎಸೆತದಲ್ಲಿ 48 ರನ್ ಕಲೆ ಹಾಕಿದ್ರು. ಒಂದು ವೇಳೆ ರಸ್ಸೆಲ್ 3 ರನ್ಗೆ ಔಟ್ ಆಗಿದ್ರೆ ಕೋಲ್ಕತ್ತಾ ತಂಡ 218 ರನ್ ಕಲೆ ಹಾಕುತ್ತಿರಲಿಲ್ಲ . ಕ್ಯಾಪ್ಟನ್ ಅಶ್ವಿನ್ ಮಾಡಿದ ಮಿಸ್ಟೆಕ್ಗೆ ನಂತರ ಸರಿಯಾದ ಬೆಲೆ ತೆತ್ತಿದ್ದಾರೆ.
ಒಟ್ನಲ್ಲಿ ಕ್ಯಾಪ್ಟನ್ ಆರ್. ಆಶ್ವಿನ್ ಇನ್ನಾದ್ರೂ ಮಾಡಿದ ತಪ್ಪುಗಳಿಂದ ಪಾಠ ಕಲಿತು . ಮುಂದಿನ ಪಂದ್ಯಗಳಲ್ಲಿ ಇಂಥ ತಪ್ಪುಗಳನ್ನ ಮಾಡದೆ ಜಾಣ್ಮಯಿಂದ ತಂಡಕ್ಕೆ ಗೆಲುವಿನ ದಾರಿ ಹುಡುಕಬೇಕಿದೆ.