ಅಂಪೈರ್ ಎಡವಟ್ಟಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೋಲು ..?

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್ಶಿಪ್ನಲ್ಲಿ ಗುರುವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐದು ರನ್ ಅಂತರದ ಸೋಲಿಗೆ ಶರಣಾಗಿಬಹದು. ಆದರೆ ಆ ಒಂದು ನೋ ಬಾಲ್ನಿಂದಾಗಿ ಆರ್ಸಿಬಿಪಂದ್ಯ ಕಳೆದುಕೊಳ್ಳುವಂತಾಗಿದೆ.

ಕೊನೆಯ ಎಸೆತವನ್ನು ಲಸಿತ್ ಮಾಲಿಂಗ ನೋ ಬಾಲ್ ಎಸೆದಿದ್ದರು. ಆದರೆ ಅಂಪೈರ್ ನೋ ಬಾಲ್ ನೀಡಲಿಲ್ಲ. ಪರಿಣಾಮ ಫ್ರೀ ಹಿಟ್ ನಿರಾಕರಿಸಲ್ಪಟ್ಟಿತ್ತು.

ಅಲ್ಲದೆ ಕೊನೆಯ ಎಸೆತದಲ್ಲೂ ಸಿಂಗಲ್ ಮಾತ್ರ ದಾಖಲಾಗಿದ್ದರಿಂದ ಮುಂಬೈ ಐದು ರನ್ ಅಂತರದಿಂದ ಪಂದ್ಯವನ್ನು ಗೆದ್ದಿತ್ತು.

ಬಳಿಕ ಟಿ.ವಿ ಸ್ಕ್ರೀನ್ನಲ್ಲಿ ರಿಪ್ಲೇ ತೋರಿಸಿದಾಗ ನೋ ಬಾಲ್ ಎಂಬುದು ತಿಳಿದು ಬಂದಿತು. ತದಾ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಕುಪಿತಕ್ಕೊಳಗಾದರು.

ಅಲ್ಲದೆ ಪಂದ್ಯದ ಬಳಿಕ ನಡೆದ ಪ್ರಶಸ್ತಿ ಸಮಾರಂಭದಲ್ಲೂ ಕೊಹ್ಲಿ, ನಾವು ಐಪಿಎಲ್ ಲೆವೆಲ್ನಲ್ಲಿ ಆಡುತ್ತಿದ್ದೇವೆ. ಕ್ಲಬ್ ಕ್ರಿಕೆಟ್ ಲೆವೆಲ್ನಲ್ಲಿ ಅಲ್ಲ. ಇದು ಗೇಮ್ ಚೇಂಜರ್ ಮ್ಯಾಚ್. ಹೀಗಾಗಿ ಅಂಪೈರ್ ಕಣ್ಣು ತೆರೆದು ನೋಡಬೇಕು. ಫೀಲ್ಡ್ನಲ್ಲಿ ಶಾರ್ಪ್ ಆಗಿ ಇರಬೇಕು ಅಂತ, ಕೊಹ್ಲಿ ತನ್ನ ಆಕ್ರೋಶವನ್ನ ವ್ಯಕ್ತಪಡಿಸಿದ್ರು.

ಒಟ್ಟಿನಲ್ಲಿ ಆರ್ಸಿಬಿ ಐಪಿಎಲ್ 12ರಲ್ಲಿ ಸತತ ಎರಡನೇ ಸೋಲಿಗೆ ಶರಣಾಗಿದೆ. ಅತ್ತ 41 ಎಸೆತಗಳಲ್ಲಿ ಅಜೇಯ 70 ರನ್ ಗಳಿಸಿದ ವಿಲಿಯರ್ಸ್ ಹೋರಾಟ ವ್ಯರ್ಥವೆನಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ