ಟೀಂ ಇಂಡಿಯಾದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಸಧ್ಯದಲ್ಲೆ ನಿವೃತ್ತಿ ಘೋಷಿಸುತ್ತಾರಾ ? ಇಂಥದೊಂದು ಪ್ರಶ್ನೆ ಈಗ ಉದ್ಭವಿಸಿದೆ. ಈ ಸ್ವತಃ ಪಂಜಾಬ್ ಕಾ ಪುತ್ತರ್ ಯುವರಾಜ್ ಸಿಂಗ್ ಅವರೇ ಮಾತನಾಡಿದ್ದಾರೆ.
ಈ ಬಾರಿಯ ವಿಶ್ವಕಪ್ ಆಡಬೇಕೆನ್ನುವ ಕನಸು ಕಾಣುತ್ತಿದ್ದ ಯುವರಾಜ್ ಸಿಂಗ್ಗೆ Bad performance ಮುಳುವಾಯಿತು. 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಯುವರಾಜ್ ಸಿಂಗ್ ಫ್ಲಾಪ್ ಪರ್ಫಾಮನ್ಸ್ ಕೊಟ್ಟು ತಂಡದಿಂದ ಗೇಟ್ ಪಾಸ್ ಪಡೆದಿದ್ರು. ಇದೇ ಲಾಸ್ಟ್ ಯುವಿ ಮತ್ತೆ ಟೀಂ ಇಂಡಿಯಾದ ಬಾಗಿಲು ಬಡಿದ್ರು ಎಂಟ್ರಿ ಮಾತ್ರ ಸಿಗಲಿಲ್ಲ. 12ನೇ ಸೀಸನ್ನ ಐಪಿಎಲ್ ನಲ್ಲಿ ಪಂಜಾಬ್ ಕಾ ಪುತ್ತರ್ ಯುವರಾಜ್ ಸಿಂಗ್ ಈ ಬಾರಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ.
ಮೊದಲ ಪಂದ್ಯದಲ್ಲೆ ಅಬ್ಬರಿಸಿದ ಯುವರಾಜ್ ಸಿಂಗ್
ಟೀಂ ಇಂಡಿಯಾದ Left hand Batsman ಯುವ ರಾಜ್ ಸಿಂಗ್ ಮೊನ್ನೆ ಡೆಲ್ಲಿ ಪರ ಆಡಿದ ಮೊದಲ ಪಂದ್ಯದಲ್ಲೆ ಡೈನಾಮಿಕ್ ಬ್ಯಾಟಿಂಗ್ ಮಾಡಿ ಮಿಂಚಿದ್ದಾರೆ. ನಂ. 4ನಲ್ಲಿ ಬ್ಯಾಟಿಂಗ್ ಮಾಡಿದ ಯುವರಾಜ್ ಸಿಂಗ್ 35 ಎಸೆತದಲ್ಲಿ 5 ಬೌಂಡರಿ 3 ಸಿಕ್ಸರ್ ಬಾರಿಸಿ 53 ರನ್ ಗಳಿಸಿದ್ರು. ಇದರೊಂದಿಗೆ ಯುವರಾಜ್ ಸಿಂಗ್ ತಮ್ಮಲ್ಲಿ ಕ್ರಿಕೆಟ್ ಇನ್ನು ಬಾಕಿ ಉಳಿದಿದೆ ಅನ್ನೋದನ್ನ ತೋರಿಸಿದ್ರು.
ಈ ಪರ್ಫಾಮನ್ಸ್ ನೊಂದಿಗೆ ಈ ಪಂಜಾಬ್ ಬ್ಯಾಟ್ಸ್ಮನ್ ತಂಡದ ಪರ ಹೈಯೆಸ್ಟ್ ಸ್ಕೋರರ್ ಎನಿಸಿದ್ರು. ಜೊತೆಗೆ ತಂಡದ ಸೋಲಿನ ಅಂತರವನ್ನ ಕಡಿಮೆ ಮಾಡಿದ್ರು.
ನಿವೃತ್ತಿಯ ಸುಳಿವು ನೀಡಿದ ಸಿಕ್ಸರ್ ಕಿಂಗ್ ಯುವಿ
ಡೆಲ್ಲಿ ವಿರುದ್ಧ ಅಬ್ಬರದ ಬ್ಯಾಟಿಂಗ್ ಮಾಡಿದ ನಂತರ ಯುವರಾಜ್ ಸಿಂಗ್ ನಿವೃತ್ತಿ ಕುರಿತು ಕೊನೆಗೂ ರಿವೀಲ್ ಮಾಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ನಾನು ಜೀವನದಲ್ಲಿ ತುಂಬಾನೆ ಏರಿಳಿತಗಳನ್ನು ಕಂಡಿದ್ದೇನೆ. ಆಗ ನನಗೆ ಏನು ಮಾಡಬೇಕು ಎಂಬುದೆ ತಿಳಿಯುತ್ತಿರಲಿಲ್ಲ. ಒಂದು ಸಮಯ ಬಂದಾಗ ಮೊದಲಿಗೆ ನಾನೆ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸುತ್ತೇನೆ. ನಾನು ಕ್ರಿಕೆಟ್ ಆಟವನ್ನು ತುಂಬಾನೆ ಇಷ್ಟ ಪಡುತ್ತೇನೆ, ಅದಕ್ಕೋಸ್ಕರ ಆಡುತ್ತಿರುವೆ. ದೇಶದ ಪರ ಆಡಲು ಸಾಧ್ಯವಾಗದಿದ್ದಾಗ ಅಂಡರ್ 14, ಅಂಡರ್ 16 ಪರ ಆಡಿದ ರೀತಿಯಲ್ಲೇ ಸಂತಸದಿಂದ ಆಡುತ್ತೇನೆ’ ಎಂದು ಹೇಳಿದರು.
ಜೊತೆಗೆ ಸಚಿನ್ ಅವರ ಜೊತೆ ಕಳೆದ ಕೆಲ ಸಮಯ ನಾನು ಉತ್ತಮ ಪ್ರದರ್ಶನ ನೀಡಲು ತುಂಬಾನೆ ಸಹಕಾರಿ ಆಗಿದೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
ಯುವಿಗೆ ಸಲಹೆ ಕೊಟ್ಟಿದ್ದಾರೆ ಕ್ರಿಕೆಟ್ ದೇವರು ಸಚಿನ್
ಇನ್ನು ಯುವಿ ಯಾವಾಗ ಕ್ರಿಕೆಟ್ಗೆ ನಿವೃತ್ತಿಯಾಗಬೇಕೆನ್ನುವ ಕುರಿತು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸಲಹೆ ಕೊಟ್ಟಿದ್ದಾರೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ಸವ್ಯಸಾಚಿ ಸಚಿನ್ ತೆಂಡೂಲ್ಕರ್ ಅವರನ್ನ ಆರಾಧಿಸುವ ಯುವರಾಜ್ ಸಿಂಗ್ ಸಚಿನ್ ಸಲಹೆಯಂತೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಸದ್ಯ ಐಪಿಎಲ್ ಆಡುತ್ತಿರುವ ಯುವಾರಜ್ ಸಿಂಗ್ ಈ ಬಾರಿ ರನ್ ಮಳೆಯನ್ನೆ ಸುರಿಸಿ ಎಂಟರ್ಟೈನ್ ಮಾಡಲಿ ಅನ್ನೋದೇ ಅಭಿಮಾನಿಗಳ ಆಶಯವಾಗಿದೆ.