ವಾಂಖೆಡೆ ಅಂಗಳದಲ್ಲಿ ಪಂತ್ ಪರಾಕ್ರಮ : ವಿಶ್ವಕಪ್ಗೆ ರೆಡಿ ಎಂದ ರೈಸಿಂಗ್ ಸ್ಟಾರ್

ಟೀಂ ಇಂಡಿಯಾದ ರೈಸಿಂಗ್ ಸ್ಟಾರ್ ರಿಷಬ್ ಪಂತ್ ಪರಾಕ್ರಮ ಮೆರೆದಿದ್ದಾರೆ. ಕಲರ್ಫುಲ್ ಟೂರ್ನಿ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟೆಲ್ಸ್ ಪರ ಆಡುತ್ತಿರುವ ಈ ಡೆಲ್ಲಿ ಡ್ಯಾಶರ್ ಮುಂಬೈ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ತಂಡಕ್ಕೆ ಗೆಲುವು ತಂದೊಕೊಟ್ಟಿದ್ದಾರೆ.

ವಾಂಖೆಡೆ ಅಂಗಳದಲ್ಲಿ ರಿಷಬ್ ಪಂತ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದರಿಂದಲೇ ಡೆಲ್ಲಿ ತಂಡ ಮುಂಬೈ ವಿರುದ್ಧ 37 ರನ್ಗಳ ರೋಚಕ ಜಯ ಪಡೆಯಿತು. ಒಂದು ವೇಳೆ ಪಂತ್ ಸಿಡಿಯದಿದ್ರೆ ಡೆಲ್ಲಿ ಗೆಲುವು ಕನಸಿನ ಮಾತಾಗುತ್ತಿತ್ತು.

ಆಸಿಸ್ ವಿರುದ್ಧದ ಸರಣಿಯಲ್ಲಿ ಪಂತ್ ಪಂಕ್ಚರ್
ಐಪಿಎಲ್ಗೂ ಮುನ್ನ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ರಿಷಭ್ ಪಂತ್ ಬ್ಯಾಟಂಗ್ ಮತ್ತು ವಿಕೆಟ್ ಕೀಪಿಂಗ್ ಎರಡರಲ್ಲೂ ಪ್ಲಾಪ್ ಪರ್ಫಾಮನ್ಸ್ ಕೊಟ್ಟು ಸರಣಿ ಸೋಲಿಗೆ ಕಾರಣರಾಗಿದ್ರು. ಭಾರೀ ಟೀಕೆಗಳಿಗೆ ಗುರಿಯಾಗಿದ್ದ ಪಂತ್ ಇದಿಗ ಐಪಿಎಲ್ ಮೂಲಕ ಎಲ್ಲ ಟೀಕೆಗಳಿಗೆ ಉತ್ತರ ಕೊಟ್ಟಿದ್ದಾರೆ.

18 ಎಸೆತದಲ್ಲೆ ವೇಗದ ಅರ್ಧ ಶತಕ ಬಾರಿಸಿದ ದಾಖಲೆ ಬರೆದ ಪಂತ್
ಮುಂಬೈ ವಿರುದ್ಧ ನಂ.5ನಲ್ಲಿ ಬ್ಯಾಟಿಂಗ್ಗೆ ಇಳಿದ ರಿಷಭ್ ಪಂತ್ ಮುಂಬೈ ಲೆಕ್ಕಚಾರಗಳನ್ನೆಲ್ಲ ತಲೆ ಕೆಳಗೆ ಮಾಡಿದ್ರು. ವಾಂಖೆಡೆಯಲ್ಲಿ ಮನಸೋ ಇಚ್ಛೆ ದಂಡಿಸಿದ ಪಂತ್ ಬೌಂಡರಿಯ ಮೂಲೆ ಮೂಲೆಗೂ ಚೆಂಡಿನ ಪರಿಚೆಯ ಮಾಡಿಕೊಟ್ರು. ಇದರ ಪರಿಣಾಮವೇ ಕೇವಲ 18 ಎಸೆತದಲ್ಲಿ ಅರ್ಧ ಶತಕ ಬಾರಿಸಿ ಹೊಸ ದಾಖಲೆ ಬರೆದ್ರು. ಈ ಹಿಂದೆ ಧೋನಿ 20 ಎಸೆತದಲ್ಲಿ ಅರ್ಧ ಶತಕ ಬಾರಿಸಿದ್ರು. ಇದೀಗ ಈ ದಾಖಲೆಯನ್ನ ಪಂತ್ ಮುರಿದಿದ್ದಾರೆ.
ರಿಷಬ್ ಪಂತ್ ಸಾಧನೆ
ಎಸೆತ 27
ರನ್ 78 *
4/6 7/7
ಸ್ಟ್ರೈಕ್ ರೇಟ್ 288.88

ಬ್ಬರದ ಬ್ಯಾಟಿಂಗ್ ಮಾಡಿದ ರಿಷಭ್ ಪಂತ್ 27 ಎಸೆತ ಎದುರಿಸಿ ಅಜೇಯ 78 ರನ್ ಗಳಿಸಿದ್ರು. ಇದರಲ್ಲಿ 7 ಬೌಂಡರಿ 7 ಸಿಕ್ಸರ್ ಬಾರಿಸಿ ಒಟ್ಟು 288.88 ಸ್ಟ್ರೈಕ್ ರೇಟ್ ಪಡೆದ್ರು.

ಟೀಂ ಇಂಡಿಯಾಕ್ಕೆ ಸಿಕ್ಕಿದ್ದಾನೆ ಮಿಸ್ಟರ್ 360
ನಿಮಗೆಲ್ಲ ಗೊತ್ತಿರೋ ಹಾಗೆ ಸೌತ್ ಆಫ್ರಿಕಾ ತಂಡದ ಮಾಜಿ ಬ್ಯಾಟ್ಸ್ಮನ್ ಎಬಿಡಿ ವಿಲಿಯರ್ಸ್ ಎಲ್ಲ ಂಟಿgಟeನಿಂದಲೂ ಚೆಂಡನ್ನ ಬಾರಿಸ್ತಾರೆ.ಹೀಗಾಗಿ ಎಬಿಡಿಯನ್ನ ಮಿಸ್ಟರ್ 360 ಎಂದು ಕ್ರಿಕೆಟ್ ದುನಿಯಾ ಕೆಯುತ್ತೆ. ಇದೀಗ ಟೀಂ ಇಂಡಿಯಾಕ್ಕೂ ಒಬ್ಬ ಮಿಸ್ಟರ್ 360 ಸಿಕ್ಕಿದ್ದಾನೆ ಆತ ಬೇರೆ ಯಾರು ಅಲ್ಲ ರಿಷಭ್ ಪಂತ್. ಹೌದು ಮೊನ್ನೆ ಮುಂಬೈ ವಿರುದ್ಧದ ಪಂದ್ಯದಲ್ಲಿ ರಿಷಬ್ ಎಬಿಡಿಯಂತೆ ಎಲ್ಲ ಂಟಿgಟeನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಹೀಗಾಗಿ ಟೀಂ ಇಂಡಿಯಾಕ್ಕೆ ಒಬ್ಬ ಮಿಸ್ಟರ್ 360 ಬ್ಯಾಟ್ಸ್ಮನ್ ಸಿಕ್ಕಿದಂತಾಗಿದೆ.

ಪಂತ್ ಪಂಚ್ ಹಿಂದಿದ್ದಾರೆ ದಾದಾ ಗಂಗೂಲಿ
ಮೊನ್ನೆ ಮುಂಬೈ ವಿರುದ್ಧ ವೀರಾವೇಶದ ಬ್ಯಾಟಿಂಗ್ ಮಾಡಿದ ರಿಷಬ್ ಹಿಂದೆ ಟೀಂ ಇಂಡಿಯಾದ ದಾದಾ ಸೌರವ್ ಗಂಗೂಲಿ ಇದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೌರವ್ ಗಂಗೂಲಿ ಸಲಹೆಗಾರರಾಗಿದ್ದಾರೆ. ಪಂತ್ ಗಂಗೂಲಿ ಸಲಹೆಯಿಂದಲ್ಲೇ ಪಂತ್ ಪರಾಕ್ರಮದ ಬ್ಯಾಟಿಂಗ್ ಮಾಡಿದ್ದಾರೆ.

ವಿಶ್ವಕಪ್ ಟಿಕೆಟ್ಗೆ ಬ್ಯಾಟ್ನಲ್ಲೇ ಉತ್ತರ ಕೊಟ್ಟ ಡೆಲ್ಲಿ ಬಾಯ್
ಮುಂಬೈ ವಿರುದ್ಧ ಮೊದಲ ಪಂದ್ಯದಲ್ಲೆ ಅಬ್ಬರಿಸಿದ ರಿಷಭ್ ಪಂತ್ ವಿಶ್ವಕಪ್ಗೆ ನಾನೇ ಹೋಗ್ತೀನಿ ಅನ್ನೋದನ್ನ ಬ್ಯಾಟ್ ಮೂಲಕವೇ ಹೇಳಿದ್ದಾರೆ. ಮುಂಬರುವ ವಿಶ್ವಕಪ್ನಲ್ಲಿ ತಂಡದ ಬ್ಯಾಕ್ ವಿಕೆಟ್ ಕೀಪರ್ ಸ್ಲಾಟ್ಗಾಗಿ ದಿನೇಶ್ ಕಾರ್ತಿಕ್ ಮತ್ತು ರಿಷಬ್ ನಡುವೆ ಪೈಪೋಟಿ ಇದೆ. ಹೀಗಾಗಿ ಪಂತ್ ಮೊದಲ ಪಂದ್ಯದಲ್ಲೆ ಅಬ್ಬರಿಸುವ ಮೂಲಕ ರನ್ ಹೊಳೆಯನ್ನ ಹರಿಸುವ ಸೂಚನೆ ಕೊಟ್ಟಿದ್ದಾರೆ.

ಒಟ್ಟಾರೆ ಡೆಲ್ಲಿ ಬಾಯ್ ರಿಷಬ್ ಪಂತ್ ಬ್ಯಾಟಿಂಗ್ನಲ್ಲಿ ಪರಾಕ್ರಮ ಮೆರೆದು ಡೆಲ್ಲಿ ತಂಡದ ಟ್ರಂಪ್ ಕಾರ್ಡ್ ಆಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ