ಇಂದು ಡೆಲ್ಲಿ ಕ್ಯಾಪಿಟೆಲ್ಸ್, ಚೆನ್ನೈ ನಡುವೆ ಸೂಪರ್ ಫೈಟ್: ರೋಚಕ ಕದನಕ್ಕೆ ಫಿರೋಜ್ ಶಾ ಅಂಗಳ ಸಜ್ಜು

ಇಂದು ಕಲರ್ಫುಲ್ ಟೂರ್ನಿ ಐಪಿಎಲ್ನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಫಿರೋಜ್ ಶಾ ಅಂಗಳದಲ್ಲಿ ನಡೆಯುವ ಮತ್ತೊಂದು ಮಹಾ ಕದನದ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.

ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿದೆ ಚೆನ್ನೈ, ಡೆಲ್ಲಿ
12ನೇ ಸೀಸನ್ನ ಐಪಿಎಲ್ನ ಟೂರ್ನಿಯಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಪಂದ್ಯಗಳನ್ನ ಗೆದ್ದು ಶುಭಾರಂಭ ಮಾಡಿವೆ. ಮೊನ್ನೆ ಚೆಪಾಕ್ ಅಂಗಳದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ತಂಡ ಆರ್ಸಿಬಿ ವಿರುದ್ದ ಗೆದ್ದು ಶುಭಾರಂಭ ಮಾಡಿತು.

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ವಾಂಖೆಡೆ ಅಂಗಳದಲ್ಲಿ ಬಲಿಷ್ಠ ಮುಂಬೈ ವಿರುದ್ಧ 37 ರನ್ಗಳ ಅಂತರದಿಂದ ಗೆಲುವು ಕಂಡು ಅಚ್ಚರಿ ಕೊಟ್ಟಿದೆ. ಮೊದಲ ಪಂದ್ಯ ಗೆದ್ದಿರುವ ಉಭಯ ತಂಡಗಳು ಕಾನ್ಫಿಡೆನ್ಸ್ ಹೆಚ್ಚಿಸಿಕೊಂಡಿವೆ.

ಎರಡನೇ ಗೆಲುವಿನ ಮೇಲೆ ಕಣ್ಣಿಟ್ಟ ಉಭಯ ತಂಡಗಳು
ಮೊದಲ ಪಂದ್ಯ ಗೆದ್ದಿರುವ ಚೆನ್ನೈ ಮತ್ತು ಡೆಲ್ಲಿ ತಂಡಗಳು ಎರಡನೇ ಗೆಲುವಿನ ಮೇಲೆ ಕಣ್ಣಿಟ್ಟಿವೆ. ಎರಡನೇ ಪಂದ್ಯದಲ್ಲೂ ಗೆಲುವಿನ ಓಟ ಮುಂದುವರೆಸಲು ಉಭಯ ತಂಡಗಳು ಟೊಂಕ ಕಟ್ಟಿ ನಿಂತಿವೆ.

ಚೆನ್ನೈ ಸೂಪರ್ ಕಿಂಗ್ಸ್ ಗೆ ಬಿಗ್ ಚಾಲೆಂಜ್
ರಾಜಧಾನಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಿಗ್ ಚಾಲೆಂಜ್ ಆಗಿದೆ . ಯಾಂಕಂದ್ರೆ ಮೊನ್ನೆ ಚೆನ್ನೈ ಸೂಪರ್ ಕಿಂಗ್ಸ್ ತವರಿನಲ್ಲಿ ಆರ್ಸಿಬಿ ವಿರುದ್ಧ ಗೆದ್ದಿರಬಹುದು ಆದರೆ 71 ರನ್ಗಳ ಸುಲಭ ಟಾರ್ಗೆಟ್ನ್ನ ತಿಣುಕಾಡಿ ಗೆದ್ದಿತ್ತು. ಇದರ ಬಗ್ಗೆ ಸ್ವತಃ ತಂಡದ ನಾಯಕ ಎಂ.ಎಸ್.ಧೋನಿ ಬೇಸರ ವ್ಯಕ್ತಪಡಿಸಿದ್ರು. ಹೀಗಾಗಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕದನ ಧೋನಿ ಪಡೆಗೆ ಅಗ್ನಿ ಪರೀಕ್ಷೆಯಾಗಿದ್ದು ತಂಡದ ಅಸಲಿ ತಾಕತ್ತು ಏನೆಂಬುದು ಗೊತ್ತಾಗಲಿದೆ.

ತಂಡಕ್ಕೆ ಬ್ಯಾಟಿಂಗ್ ಚಿಂತೆಯಾಗಿದ್ದು ಓಪನರ್ಸ್ಗಳಾದ ಅನುಭವಿ ಬ್ಯಾಟ್ಸ್ಮನ್ ಶೇನ್ ವಾಟ್ಸನ್ ಮತ್ತು ಅಂಬಟಿ ರಾಯ್ಡು ಒಳ್ಳೆಯ ಓಪನಿಂಗ್ ಕೊಡಬೇಕಿದೆ. ಇನ್ನು ಮಿಡ್ಲ್ ಆರ್ಡರ್ನಲ್ಲಿ ಬರುವ ಬ್ಯಾಟ್ಸ್ಮನ್ಗಳು ಕ್ರಿಸ್ಗೆ ನೆಲ ಕಚ್ಚಿ ನಿಲ್ಲೊದೇ ದೊಡ್ಡ ಸವಾಲಾಗಿದೆ.

ಮುಂಬೈ ವಿರುದ್ಧ ಗೆದ್ದು ಬೀಗಿದೆ ಡೆಲ್ಲಿ ಕ್ಯಾಪಿಟಲ್ಸ್
ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿದು ಮೊನ್ನೆ ವಾಂಖೆಡೆ ಅಂಗಳದಲ್ಲಿ ಮುಂಬೈ ತಂಡವನ್ನೆ ಬಗ್ಗುಬಡಿದ ಡೆಲ್ಲಿ ಕ್ಯಾಪಿಟೆಲ್ಸ್ ತನ್ನ ತಾಕತ್ತು ಏನೆಂಬುದು ತೋರಿಸಿಕೊಟ್ಟಿದೆ. ಬ್ಯಾಟಿಂಗ್, ಬೌಲಿಂಗ್ ನಲ್ಲಿ ಸಮತೋಲನ ತೋರಿಸಿರುವ ಡೆಲ್ಲಿ ಕ್ಯಾಪಿಟೆಲ್ಸ್ ಇದನ್ನೆ ಅಸ್ತ್ರವಾಗಿಟ್ಟುಕೊಂಡು ಚೆನ್ನೈಗೂ ಸೋಲಿನ ರುಚಿ ತೋರಿಸಲು ಸಜ್ಜಾಗಿದೆ.

ಫಿರೋಜ್ ಶಾ ಅಂಗಳದಲ್ಲಿ ನಡೆಯಲಿದೆ ಸ್ಪಿನ್ನರ್ಸ್ಗಳ ದರ್ಬಾರ್
ಚೆನ್ನೈ , ಡೆಲ್ಲಿ ಫೈಟ್ ನಲ್ಲಿ ಉಭಯ ತಂಡಗಳ ಸ್ಪಿನರ್ಗಳು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಫಿರೋಜ್ ಶಾ ಅಂಗಳ ಸ್ಲೋ ಪಿಚ್ನಿಂದ ಕೂಡಿದ್ದು ಸ್ಪಿನರ್ಸ್ಗಳು ದರ್ಬಾರ್ ನಡೆಸಲಿದ್ದಾರೆ. ಚೆನ್ನೈ ತಂಡದಲ್ಲಿ ಸ್ಪಿನ್ನರ್ಸ್ಗಳಾದ ಹರ್ಭಜನ್ ಸಿಂಗ್, ಇಮ್ರಾನ್ ತಾಹೀರ್ , ರವೀಂದ್ರ ಜಡೇಜಾ ಪ್ರಮುಖ ಪಾತ್ರವಹಿಸುತ್ತಾರೆ. ಇನ್ನು ಅಕ್ಷರ್ ಪಟೇಲ್ ಮತ್ತು ರಾಹುಲ್ ತೆವಾಟಿಯಾ ಡೆಲ್ಲಿ ತಂಡದ ಸ್ಪಿನ್ನರ್ಸ್ಗಳಾಗಿದ್ದಾರೆ.

ಧೋನಿ vs ರಿಷಬ್ ಪಂತ್
ಇಂದು ನಡೆಯೋದು ಚೆನ್ನೈ ಮತ್ತು ಡೆಲ್ಲಿ ನಡುವಿನ ಪಂದ್ಯ ಅಲ್ಲ . ಇದು ಚೆನ್ನೈ ತಲೈವಾ ಧೋನಿ ಮತ್ತು ರೈಸಿಂಗ್ ಸ್ಟಾರ್ ರಿಷಬ್ ಪಂತ್ ನಡುವಿನ ಕದನವಾಗಿದೆ. ಟೂರ್ನಿ ಆರಂಭಕ್ಕೂ ಮುನ್ನ ರಿಷಬ್ ಪಂತ್ ಧೋನಿಗೆ ಚಾಲೆಂಜ್ ಹಾಕಿದ್ರು. ಧೋನಿ ರಿಷಬ್ ಪಂತ್ಗೆ ಪಂಥ್ವಾನ ಕೊಟ್ಟಿದ್ರು. ಹೀಗಾಗಿ ಇಂದಿನ ಪಂದ್ಯ ರಿಷಭ್ ಮತ್ತು ಧೋನಿ ನಡುವಿನ ಕದನ ವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ