ತುಮಕೂರು,ಮಾ.17-ಕ್ಷುಲ್ಲಕ ಕಾರಣಕ್ಕೆ ಎರಡು ಬೈಕ್ಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಕ್ಯಾತಸಂದ್ರ ಪೆÇಲೀಸ್ ಠಾಣೆ ವ್ಯಾಪ್ತಿಯ ಶ್ರೀನಗರದಲ್ಲಿ ನಡೆದಿದೆ.
ರಾತ್ರಿ 2 ಗಂಟೆ ಸಮಯದಲ್ಲಿ ಮನೆಯ ಕೆಳಭಾಗದ ಮೆಟ್ಟಲುಗಳ ಬಳಿ ನಿಲ್ಲಿಸಿದ್ದ ಬೈಕ್ಗಳನ್ನು ಸುಟ್ಟು ಹಾಕಲಾಗಿದೆ.
ತುಮಕೂರು ಸಿದ್ದ ಗಂಗಾ ಕಾಲೇಜಿನಲ್ಲಿ ಅಟೆಂಡರ್ ಆಗಿರುವ ಮೋಹನ್ಕುಮಾರ್, ಜೆಸಿಬಿ ಆಪರೇಟರ್ ಕುಮಾರಸ್ವಾಮಿ ಅವರಿಗೆ ಸೇರಿದ ಬೈಕ್ಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಮತ್ತೊಂದು ಬೈಕಿಗೂ ಬೆಂಕಿ ಬಿದ್ದಿದ್ದು ಭಾಗಶಃ ಸುಟ್ಟಿದೆ. ಕ್ಯಾತಸಂದ್ರ ಠಾಣೆ ಸಬ್ಇನ್ಸ್ಪೆಕ್ಟರ್ ರಾಜು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ. ವೃತ್ತ ನಿರೀಕ್ಷಕ ರಾಘವೇಂದ್ರ ಭೇಟಿ ನೀಡಿ ಪರಿಶೀಲಿಸಿದರು.