39ನೇ ವಾರ್ಷಿಕೋತ್ಸವದ ಯುಗಾದಿ ವಿಶೇಷ ಕಾರ್ಯಕ್ರಮ

ಬೆಳಗಾವಿ-ಮಾ.14- ಯುಗಾದಿ ಹಬ್ಬಕ್ಕೆ ತನ್ನದೆ ಅದ ಇತಿಹಾಸವಿದೆ ಜೀವನ ಬೆವು ಬೆಲ್ಲದಂತೆ ಕಷ್ಠ ಸುಖಗಳ ಮಿಶ್ರಣ ಜೀವನದಲ್ಲಿ ಎಲ್ಲವನ್ನು ಅನುಭವಿಸಿದಾಗ ಮಾತ್ರ ಸಂತೃಪ್ತಿ ದೊರೆಯುತ್ತದೆ ಎಲ್ಲರಿಗೊ ಯುಗದಿಯ ಹಾಗು ಹೊಸ ವರುಷದ ಶುಭಾಶಯಗಳು
ಎಂದು ಕಾಹೆರ್‍ನ ಕುಲಸಚಿವ ಡಾ.ವಿ.ಡಿ ಪಾಟೀಲ ಹೇಳಿದರು ಅವರು ಇಂದು ಕೆಎಲ್‍ಇ ವಿಶ್ವವಿದ್ಯಾಲಯದ ಜವಹರಲಾಲ್ ನೆಹರು ಮೆಡಿಕಲ್ ಕಾಲೇಜಿನ ಆವರಣದಲ್ಲಿರುವ ಶಿವಾಲಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಶಿವಾಲಯದ 39ನೇ ವಾರ್ಷಿಕೋತ್ಸವ ಸಮಾರಂಭವನ್ನ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ಡಾ.ಅವಿನಾಶ ಕವಿ ವಿಶೇಷ ಅತಿಥಿಗಳಾಗಿ ಆಗಮಿಸಿ ವಾರ್ಷಿಕೋತ್ಸವ ಮತ್ತು ಯುಗಾದಿ ಹಬ್ಬದ ಕುರಿತು ಕಿರು ಪರಿಚಯ ಮಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನ ಶಿವಾಲಯ ಸಮಿತಿ ಕಾರ್ಯಾಧ್ಯಕ್ಷರಾದ ಡಾ,(ಶ್ರೀಮತಿ) ಎನ್ ಎಸ್ ಮಹಾಂತ ಶೆಟ್ಟಿ ವಹಿಸಿದ್ದರು.

ಈ ಸಂದರ್ಭದಲ್ಲಿ ಉನ್ನತ ಸೇವೆ ಸಲ್ಲಿಸಿದ ಕೆಎಲ್‍ಇ ಅಕಾಡೆಮಿ ಆಫ್ ಹಾಯರ್ ಎಜ್ಯುಕೇಶನ್ ಅಂಡ್ ರಿಸರ್ಚನ ವಿದ್ಯಾಲಯದ ಸಿಬ್ಬಂದಿಗಳಿಗೆ ಹಾಗು ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಬೆಳಗಾವಿಯ ಗಣ್ಯ ನಾಗರಿಕರಿಗೆ ಸನ್ಮಾನಿಸಲಾಯಿತು.

ಪ್ರಾರಂಭದಲ್ಲಿ ಶಿವಾಲಯ ಸಮಿತಿ ಕಾರ್ಯದರ್ಶಿ ಡಾ.ಶಿವಯೋಗಿ.ಮ ಹೊಗಾರ ಸ್ವಾಗತಿಸಿ ಸನ್ಮಾನಿತ ಗಣ್ಯರ ಪರಿಚಯ ಮಾಡಿದರು.

ಉದ್ಘಾಟನ ಸಮಾರಂಭದ ನಂತರ ಬೆಳಗಾವಿಯ ರವಿ ನೃತ್ಯಾಲಯ ಕಲಾಮಂದಿರ ಇವರಿಂದ ನೃತ್ಯಾರಾಧನೆ ನಡೆಯಿತು.

ಪ್ರತಿದಿನವು ವಿಶೇಷ ಕಾರ್ಯಕ್ರಮಗಳನ್ನ ಆಯೋಜಿಸಲಾಗಿದೆ. ಶನಿವಾರ 17/3/2018 ರಂದು ಸಂಜೆ 5 ಗಂಟೆಗೆ ಕಾಹೆರ್‍ನ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಸಂಗೀತರಾಧನೆ ಹಾಗು ಜವಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯ ಆವರಣದ ವಿದ್ಯಾರ್ಥಿಗಳಿಂದ ಮತ್ತು ಕಾಲೇಜು ಸಿಬ್ಬಂದಿ ವರ್ಗದ ಮಕ್ಕಳಿಂದ ವಿವಿಧ ವೇಷಭೋಷಣಗಳು ಹಾಗು ಭಕ್ತಿಗೀತೆಗಳು ನಡೆಯಲಿವೆ.

ರವಿವಾರ ದಿನಾಂಕ 18/3/2018 ರಂದು ಮುಂಜಾನೆ 5 ಗಂಟೆಗೆ ಶಿವಾಲಯದ ಶಿವಲಿಂಗಕ್ಕೆ ಮಹಾರುದ್ರಾಭೀಷೇಕ, ಈಶ್ವರನಿಗೆ ವಿಶೇಷ ಅಲಂಕಾರ, ಹಾಗು ತೀರ್ಥಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ

ಈ ಶಿವಾಲಯವು 1979 ರಲ್ಲಿ ಯುಗಾದಿಯಂದು ಸ್ಥಾಪಿತವಾಗಿದ್ದು ಅನೇಕ ವಿಶೇಷತೆಗಳನ್ನ ಹೊಂದಿದ ಅಪರೋಪದ ಶಿವಲಿಂಗ ಇಲ್ಲಿದೆ.

ಫೊಟೋ-1- ಜವಹರಲಾಲ್ ನೆಹರು ಮೆಡಿಕಲ್ ಕಾಲೇಜಿನ ಆವರಣದಲ್ಲಿರುವ ಶಿವಾಲಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಶಿವಾಲಯದ 39ನೇ ವಾರ್ಷಿಕೋತ್ಸವ ಸಮಾರಂಭವನ್ನ ಮುಖ್ಯ ಅತಿಥಿ ಜ್ಯೋತಿ ಬೆಳಗಿಸಿ ಉದ್ಘಾಟಿಸುತ್ತಿರುವುದು ಚಿತ್ರದಲ್ಲಿ ಡಾ.ಎನ್.ಎಸ್ ಮಹಾಂತಶೆಟ್ಟಿ, ಡಾ.ವಿನಾಶ ಕವಿ, ಡಾ.ವಿ.ಎ ಕೋಠಿವಾಲೆ, ಡಾ.ಶಿವಯೋಗಿ ಹೊಗಾರ ಮುಂತಾದವರು ಇದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ