ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡರೆ 6-7 ಸ್ಥಾನಗಳನ್ನು ಬಿಟ್ಟು ಕೊಡಬಹುದು. ಆದರೆ ನಾವು ಭಿಕ್ಷುಕರಲ್ಲ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಗುಡುಗಿದ್ದಾರೆ.
ಕಾಂಗ್ರೆಸ್ ಸಭೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಗೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡರೆ ಜೆಡಿಎಸ್ಗೆ ಏಳು ಸ್ಥಾನ ಬಿಟ್ಟು ಕೊಡುವ ಬಗ್ಗೆ ಚರ್ಚೆ ಆಗಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ವಿ ಆರ್ ನಾಟ್ ಬೆಗ್ಗರ್ಸ್. ಸ್ಪಷ್ಟವಾಗಿ ಹೇಳುತ್ತೇನೆ, ರಾಷ್ಟ್ರ ರಾಜಕಾರಣದಲ್ಲಿ ಸ್ಪಷ್ಟ ಸಂದೇಶ ಕೊಡುವ ಬಗ್ಗೆ ಮಾತನಾಡಬೇಕೆ ಹೊರತು ಈ ರೀತಿಯ ಮೈತ್ರಿ ವಿಚಾರದಲ್ಲಿ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ನನ್ನ ಜವಾಬ್ದಾರಿ ಮೈತ್ರಿ ಸರ್ಕಾರದಲ್ಲಿ ನಾಡಿನ ಜನತೆ ಸಮಸ್ಯೆಗಳಿಗೆ ಯಾವ ರೀತಿ ಪರಿಹಾರ ನೀಡಬೇಕು ಎಂಬುದರ ಬಗ್ಗೆ. ಸೀಟು ಹಂಚಿಕೆ ವಿಚಾರ ರಾಷ್ಟ್ರೀಯ ಅಧ್ಯಕ್ಷರು ಕುಳಿತು ಮಾತನಾಡುತ್ತಾರೆ ಎಂದರು.
Lok Sabha Election,CM Kumaraswamy,Mysore