ಮುಂಬೈ: ಮತ್ತು ಕಿವೀಸ್ ಪ್ರವಾಸವನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದ ಟೀಂ ಇಂಡಿಯಾ ಇದೀಗ ತವರಿಗೆ ವಾಪಸ್ ಮರಳಿದೆ. ಆಸಿಸ್ ವಿರುದ್ಧ ಐತಿಹಾಸಿಕ ಟೆಸ್ಟ್ ಮತ್ತು ಏಕದಿನ ಸರಣಿ, ಕಿವೀಸ್ ವಿರುದ್ಧ ಏಕದಿನ ಸರಣಿಗಳನ್ನ ಗೆದ್ದು ಸ್ಮರಣಿಯವಾಗರಿಸಿಕೊಂಡಿದೆ. ಸುದೀರ್ಘ ಮೂರು ತಿಂಗಳ ಪ್ರವಾಸದ ನಂತರ ಟೀಂ ಇಂಡಿಯಾ ಆಟಗಾರರು ಭಾರತಕ್ಕೆ ಮರಳಿದ್ದಾರೆ. ತವರಿಗೆ ವಾಪಸ್ ಬಂದ ಖುಷಿಯಲ್ಲಿ ಏನೇನ್ ಮಾಡಿದ್ರು ಅನ್ನೊದನ್ನ ನಾವ್ ತೋರಿಸ್ತೀವಿ ನೋಡಿ
ಮುಂಬೈಗೆ ಬಂದಿಳಿದ ಟೀಂ ಇಂಡಿಯಾ ಆಟಗಾರರು.
ಕಿವೀಸ್ ವಿರುದ್ಧ ಟಿ20 ಸರಣಿ ಮುಗಿಯುತ್ತಿದ್ದಂತೆ ಟೀಂ ಇಂಡಿಯಾ ಆಟಗಾರರು ವಾಪಸ್ ಭಾರತಕ್ಕೆ ಬಂದಿದ್ದಾರೆ. ಬ್ಯಾಟಿಂಗ್ ಮತ್ತು ವಿಕೆಟ್ ಕಿಪೀಂಗ್ನಲ್ಲಿ ಮಿಂಚಿದ ಮಿಸ್ಟರ್ ಕೂಲ್ ಧೋನಿ ಮುಂಬೈ ಏರ್ಪೋರ್ಟ್ಗೆ ಬಂದಿಳಿದ್ರು. ಇವರೊಂದಿಗೆ ಸಹ ಆಟಗಾರರು ಬಂದಿಳಿದ್ರು.
ಅಪ್ಪನಿಗೆ ಸ್ಮೈಲ್ ಕೊಟ್ಟು ಸ್ವಾಗತಸಿದ ಸಮೈರಾ ..!
ಕಿವೀಸ್ ವಿರುದ್ಧ ಸರಣಿ ಸೋತು ಬರಿಗೈಯಲ್ಲಿ ವಾಪಸ್ ಮರಳಿದ ಅಪ್ಪ ರೋಹಿತ್ಗೆ ಮುದ್ದಿನ ಮಗಳು ಸಮೈರಾ Smiಟe ಕೊಟ್ಟು ವೆಲ್ಕಮ್ ಮಾಡಿದ್ದಾಳೆ. ರೋಹಿತ್ ಪತ್ನಿ ರಿತಿಕಾ Iಟಿsಣಚಿgಡಿಚಿmನಲ್ಲಿ ಸಮೈರಾ ಮುದ್ದಾಗಿ ನಗುತ್ತಿರುವ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದಾರೆ. ಮಗಳ ನಗುವನ್ನ ನೋಡಿರುವ ರೋಹಿತ್ ಫುಲ್ ಫಿದಾ ಆಗಿದ್ದಾರೆ. ಜೊತೆಗೆ ಸರಣಿ ಸೋಲಿನ ಕಹಿಯನ್ನ ಮರೆತಿದ್ದಾರೆ.
ಮಗಳೊಂದಿಗೆ ಖುಷಿಯಿಂದ ಸಂಭ್ರಮಿಸಿದ ರೋಹಿತ್
ಸರಣಿ ಸೋತು ಬಂದ ಹಿಟ್ಮ್ಯಾನ್ ರೋಹಿತ್ ಶರ್ಮಾ ಮಗಳು ಸಮೈರಾ ಜೊತೆ ಆಟವಾಡಿ ಸೋಲಿನ ಕಹಿಯನ್ನೆಲ್ಲ ಮರೆತಿದ್ದಾರೆ. ಆಸಿಸ್ ವಿರುದ್ಧ ಏಕದಿನ ಸರಣಿಯನ್ನ ರೋಹಿತ್ ಆಡದೇ ಇರೋದ್ರಿಂದ ಈ ಮಗಳೊಂದಿಗೆ ಇನ್ನಷ್ಟು ಸಮಯ ಕಳೆಯ ಬಹುದಾಗಿದೆ.
ಸೆಲ್ಪಿಗೆ ಫೋಸ್ ಕೊಟ್ಟ ಚಹಲ್, ಕುಲ್ದೀಪ್
ಇನ್ನು ಟೀಂ ಇಂಡಿಯಾದ ರಿಸ್ಟ್ ಸ್ಪಿನ್ನರ್ಸ್ಗಳಾದ ಯಜ್ವಿಂದರ್ ಚಹಲ್ ಮತ್ತು ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಭಾರತಕ್ಕೆ ವಾಪಸ್ ಬಂದಿರುವ ಫೋಟೋವೊಂದನ್ನ ಪೋಸ್ಟ್ ಮಾಡಿದ್ದಾರೆ. ಇವರೊಂದಿಗೆ ಶಿಖರ್ ಧವನ್ ರಿಷಭ್ ಪಂತ್ ಕೂಡ ಇದ್ದಾರೆ.
ಭಾರತದ ಖಾದ್ಯ ಸವಿದು ಸಂಭ್ರಮಿಸಿದ ದಿನೇಶ್ ಕಾರ್ತಿಕ್
ಇನ್ನು ಕಿವೀಸ್ ವಿರುದ್ಧ ಫೈನಲ್ ಪಂದ್ಯವನ್ನ ಗೆಲ್ಲಿಸಿಕೊಡುವಲ್ಲಿ ಎಡವಿದ ತಂಡದ ಅನುಭವಿ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ತವರಿಗೆ ಮರಳುತ್ತಿದ್ದಂತೆ ಭಾರತದ ಖಾದ್ಯಗಳನ್ನ ಸವಿದು ಸಂಭ್ರಮಿಸಿದ್ದಾರೆ.
ಆಸಿಸ್ ಕಿವೀಸ್ ವಿರುದ್ಧದ ಸರಣಿಯಲ್ಲಿ ಸಾಲಿಡ್ ಪರ್ಫಾಮನ್ಸ್ ಕೊಟ್ಟ ಟೀಂ ಇಂಡಿಯಾ ಮೂರು ತಿಂಗಳ ಪ್ರವಾಸವನ್ನ ಸ್ಮರಣೀವಾಗಿರಿಸಿಕೊಂಡಿದೆ.