ವೀರೂ ಜಾಹೀರಾತು ನೋಡಿ ಕೋಪಗೊಂಡ ಕಾಂಗರೂಸ್

ಟೀಂ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಮತ್ತೆ ಸೌಂಡ್ ಮಾಡಿದ್ದಾರೆ. ಕ್ರಿಕೆಟ್ಗೆ ಗುಡ್ ಬೈ ಹೇಳಿದ ಮೇಲೆ ಸೋಶಿಯಲ್ ಮೀಡಿಯಾದಲ್ಲಿಲೈವ್ ಆಗಿರುವ ಮಾಜಿ ಡೆಲ್ಲಿ ಡ್ಯಾಶರ್ ಐಪಿಎಲ್ನಲ್ಲಿ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಖತ್ ಸೌಂಡ್ ಮಾಡುತ್ತಿದೆ ವೀರೂ ಜಾಹೀರಾತು
ಸದ್ಯ ಟೀಂ ಇಂಡಿಯಾದ ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್ ಜಾಹೀರಾತು ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತು ಬೇಬಿ ಸಿಟ್ಟಿಂಗ್ ಸಂಬಂಧಿಸಿದ್ದಾಗಿದ್ದು ಎಲ್ಲೆಡೆ ಸದ್ದು ಮಾಡುತ್ತಿದೆ.

ಫೆಬ್ರವರಿ 24ರಿಂದ ಆರಂಭವಾಗುವ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಟಿ20 ಮತ್ತು ಏಕದಿನ ಸರಣಿ ನಡೆಯಲಿರುವ ಹಿನ್ನೆಲೆಯಲ್ಲಿ ಈ ಬೇಬಿ ಸಿಟ್ಟಿಂಗ್ ಜಾಹೀರಾತನ್ನ ಮಾಡಲಾಗಿದೆ. ಈ ಜಾಹೀರಾತಿನಲ್ಲಿ ಆಸಿಸ್ ಕ್ರಿಕೆಟ್ ತಂಡದ ಜೆರ್ಸಿ ತೊಟ್ಟಿರುವ ಶಿಶುಗಳನ್ನ ವೀರೇಂದ್ರ ಸೆಹ್ವಾಗ್ ಆರೈಕೆ ಮಾಡುತ್ತಾರೆ. ನಾವು ಆಸ್ಟ್ರೇಲಿಯಾಗೆ ಹೋದಾಗ ಒಬ್ಬ ವ್ಯಕ್ತಿ ಬೇಬಿ ಸಿಟ್ಟಿಂಗ್ ಪ್ರಾರಂಭ ಮಾಡಿ ಎಂದು ಹೇಳಿದ್ರು. ಅದಕ್ಕೆ ನಾವು ಹೇಳುತ್ತಿದ್ದೇವೆ ನೀವೆಲ್ಲ ಬನ್ನಿ ಖಂಡಿತವಾಗಿಯೂ ಶಿಶುವಿಹಾರ ಆರಂಭಿಸುತ್ತೇವೆ ಎಂದು ವೀರೂ ಹೇಳುತ್ತಾರೆ.

ಬೇಬಿ ಸಿಟ್ಟರ್ ಆಗುವಂತೆ ರಿಷಬ್ ಕಾಲೆಳೆದಿದ್ದ ಟಿಮ್ ಪೇನ್
ಈ ಬೇಬಿ ಸಿಟ್ಟಿಂಗ್ ಜಾಹೀರಾತು ಮಾಡಲು ಒಂದು ಪ್ರೇರಣೆ ಇದೆ. ಕಳೆದ ತಿಂಗಳು ಮೆಲ್ಬೋರ್ನ್ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯದ ಮೂರನೇ ದಿನ ಟೀಮ್ ಪೈನ್ ರಿಷಭ್ ಪಂತ್ರನ್ನ ಞiಟಿಜಟe ಮಾಡಿದ್ರು. ನಾನು ನನ್ನ ಹೆಂಡತಿಯನ್ನು ಕರೆದುಕೊಂಡು ಸಿನಿಮಾ ನೋಡಲು ಹೋಗುತ್ತೇನೆ. ನೀನು ನನ್ನ ಮಕ್ಕಳನ್ನು ನೋಡಿಕೊಳ್ಳುತ್ತೀಯಾ? ನೀವು ಶಿಶುವಿಹಾರ ನಡೆಸುತ್ತೀರಾ? ಅವರನ್ನು ಕರೆದುಕೊಂಡು ಭೋಜನಕ್ಕೆ ಹೋಗುತ್ತೀರಾ? ಎಂದು ಕಾಲೆಳೆದಿದ್ರು.

ವೀರೂ ಜಾಹೀರಾತು ನೋಡಿ ಕೆಂಡಾಮಂಡಲರಾಗಿದ್ದ ಹೇಡನ್
ಆಸಿಸ್ ವಿರುದ್ಧದ ಸರಣಿಗಾಗಿ ತಯಾರಾಗಿರುವ ಜಾಹೀರಾತನ್ನ ನೋಡಿ ಮಾಜಿ ಸ್ಪೋಟಕ ಬ್ಯಾಟ್ಸ್ಮನ್ ಮ್ಯಾಥ್ಯೂ ಹೇಡನ್ ಕೆಂಡಾಮಂಡಲರಾಗಿದ್ದಾರೆ. ಆಸ್ಟ್ರೇಲಿಯಾ ಆಟಗಾರರನ್ನ ಹಗೂರವಾಗಿ ತೆಗೆದುಕೊಳ್ಳಬೇಡಿ, ವಿಶ್ವ ಕಪ್ ಟೂರ್ನಮೆಂಟ್ನಲ್ಲಿ ಯಾರು ಶಿಶುಗಳು ಎಂದು ತಿಳಿಯುತ್ತದೆ ಅಂತ ಟ್ವೀಟ್ ಮಾಡಿ ಎಚ್ಚರಿಕೆ ಕೊಟ್ಟಿದ್ದಾರೆ.

ವೀರೂ ಜಾಹೀರಾತಿಗೆ ಫಿಧಾ ಆದ ರೈಸಿಂಗ್ ಸ್ಟಾರ್ ಪಂತ್
ವೀರೂ ಅವರ ಬೇಬಿ ಸಿಟ್ಟಿಂಗ್ ಜಾಹೀರಾತಿಗೆ ಟೀಂ ಇಂಡಿಯಾದ ರೈಸಿಂಗ್ ಸ್ಟಾರ್ ರಿಷಭ್ ಪಂತ್ ಕೂಡ ಫಿದಾ ಆಗಿದ್ದಾರೆ. ಈ ಜಾಹೀರಾತು ಕುರಿತು ಟ್ವೀಟ್ ಮಾಡಿರುವ ಪಂತ್, ವೀರೂ ಪಾಜಿ ಕ್ರಿಕೆಟ್ ಮತ್ತು ಬೇಬಿ ಸಿಟ್ಟಿಂಗ್ನಲ್ಲಿ ಹೇಗೆ ಉತ್ತಮವಾಗಿರಬೇಕು ಎಂದು ನನಗೂ ತೋರಿಸಿಕೊಡಿ ಎಂದು ಕೇಳಿಕೊಂಡಿದ್ದಾರೆ.
ಒಟ್ಟಾರೆ ವೀರೂ ನೀಡಿರುವ ಜಾಹೀರಾತು ಮುಂದೆ ನಡೆಯಲಿರುವ ಇಂಡೋ -ಆಸೀಸ್ ಸರಣಿಯ ಕಾವನ್ನ ಹೆಚ್ಚಿಸಿದೆ. ಟೀಂ ಇಂಡಿಯಾ ಅಭಿಮಾನಿಗಳು ಈ ಜಾಹೀರಾತು ನೋಡಿ ಖುಷಿ ಪಟ್ಟರೇ ಕಾಂಗರೂಗಳು ಹುರಿದುಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ