ಬೆಂಗಳೂರು, ಮಾ.13- ದಾಖಲೆ ಪರಿಶೀಲನೆ ನೆಪದಲ್ಲಿ ಕಾಲೇಜಿಗೆ ಬಂದ 8 ಮಂದಿಯ ತಂಡವು ಹಣ ಹಾಗೂ ವಿವಿಧ ದಾಖಲೆ, ಕಂಪ್ಯೂಟರ್ ಹಾರ್ಡ್ಡಿಸ್ಕ್ ದೋಚಿರುವ ಘಟನೆ ನಂದಿನಿ ಲೇಔಟ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಲಗ್ಗೆರೆಯ ಪ್ರೀತಿ ನಗರದಲ್ಲಿನ ಬೆಥಲ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ.
ಮಾ.7ರಂದು ಮೂವರು ಮಹಿಳೆಯರು ಹಾಗೂ ಐದು ಮಂದಿ ಪುರುಷರಿದ್ದ ತಂಡ ಬೆಥಲ್ ಕಾಲೇಜಿಗೆ ಆಗಮಿಸಿ ನಾವು ಆರೋಗ್ಯ ವಿಶ್ವವಿದ್ಯಾಲಯದಿಂದ
ಬಂದಿದ್ದು, ದಾಖಲೆ ಪರಿಶೀಲನೆ ನಡೆಸುವುದಾಗಿ ಹೇಳಿದೆ.
ಇವರ ಮಾತನ್ನು ನಂಬಿದ ಕಾಲೇಜು ಆಡಳಿತ ಮಂಡಳಿ ಪರಿಶೀಲನೆಗೆ ಅವಕಾಶ ಮಾಡಿಕೊಟ್ಟಿದೆ. ಪರಿಶೀಲನೆ ನೆಪದಲ್ಲಿ ಸುಮಾರು 50 ಲಕ್ಷದಿಂದ 1 ಕೋಟಿ ರೂ. ಹಣ, ವಿವಿಧ ದಾಖಲೆಗಳು ಹಾಗೂ ಕಂಪ್ಯೂಟರ್ ಹಾರ್ಡ್ಡಿಸ್ಕ್ಅನ್ನು ದೋಚಿಕೊಂಡು ಈ ತಂಡ ಹೋಗಿದೆ. ಇವರ ಮೇಲೆ ಅನುಮಾನಗೊಂಡ ಕಾಲೇಜಿನ
ಮಾಲೀಕರಾದ ಸುಮಿಯಾ ಜೋಸೆಫ್ ಅವರು ನಂದಿನಿ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಪೆÇಲೀಸರು, ಕಾಲೇಜಿನವರು ದೂರು ನೀಡಿದ್ದಾರೆ. ನಾವು ಪ್ರಕರಣ ದಾಖಲಿಸಿಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದೇವೆ ಎಂದರು.