ನಾಳೆ ನಲಪಾಡ್ ಜಾಮೀನು ತೀರ್ಪು

ಬೆಂಗಳೂರು:  ಉದ್ಯಮಿ ಪುತ್ರ ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಜಾಮೀನು ಅರ್ಜಿಯ ತೀರ್ಪನ್ನ ಹೈಕೋರ್ಟ್ ಬುಧವಾರಕ್ಕೆ ಕಾಯ್ದಿರಿಸಿದೆ. ಅಂದು ಮಧ್ಯಾಹ್ನ 12.30ಕ್ಕೆ ಹೈಕೋರ್ಟ್ ತೀರ್ಪು ನೀಡುವ ಸಾಧ್ಯತೆ ಇದೆ.

ಜಾಮೀನು ಅರ್ಜಿ ಕುರಿತಾದ ವಾದವನ್ನ ಆರೋಪಿ ಪರ ವಕೀಲ ಸಿ.ವಿ. ನಾಗೇಶ್ ಇವತ್ತು ಪೂರ್ಣಗೊಳಿಸಿದರು. ಹಲ್ಲೆ ನಡೆದ ದಿನವೇ ವಿದ್ವತ್ ಮಾತನಾಡಿದ್ದಾನೆ. ಹಲ್ಲೆಯಾದಾಗ ವಿದ್ವತ್ ಮಾತನಾಡುವ ವಿಡಿಯೋ ಮಾಡಿದ್ದಾರೆ. ಆಗ ವಿದ್ವತ್ ಮಾತನಾಡಿದ್ದಾನೆ. ಆದರೆ, ಸಿಸಿಬಿ ಪೊಲೀಸರು ಹೇಳಿಕೆ ಪಡೆಯಲು ಹೋದಾಗ ಮಾತನಾಡಲು ಆಗುವುದಿಲ್ಲ ಅಂದಿದ್ದಾರೆ. ಇದೊಂದು ಉದ್ದೇಶ ಪೂರ್ವಕವಾಗಿ ಮಾಡಿರುವ ನಾಟಕ ಎಂದು ಸಿ.ವಿ. ನಾಗೇಶ್ ವಾದ ಮಂಡಿಸಿದ್ಧಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ