ಬೆಂಗಳೂರು, ಡಿ.8- ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಪೈಕಿ 11 ಸಮಿತಿಗಳಿಗೆ ಇದೇ 14ರಂದು ಅಧ್ಯಕ್ಷರುಗಳನ್ನು ಆಯ್ಕೆ ಮಾಡಲಾಗುವುದು.
14ರಂದು ನಡೆಯಲಿರುವ ಸಭೆಯಲ್ಲಿ ಮೇಯರ್ ಗಂಗಾಂಬಿಕೆ ಅವರು ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರುಗಳನ್ನು ಆಯ್ಕೆ ಮಾಡಲಿದ್ದಾರೆ.
ನಗರ ಯೋಜನೆ ಸ್ಥಾಯಿ ಸಮಿತಿಗೆ ಕೇವಲ 9 ಮಂದಿ ಸದಸ್ಯರು ಮಾತ್ರ ಇರುವುದರಿಂದ ಆ ಸಮಿತಿಯನ್ನು ಹೊರತುಪಡಿಸಿ ಉಳಿದ ಎಲ್ಲ ಸಮಿತಿಗಳಿಗೂ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗುವುದು.
ನಗರ ಯೋಜನೆ ಸ್ಥಾಯಿ ಸಮಿತಿಗೆ ಉಳಿದ ಇಬ್ಬರು ಸದಸ್ಯರ ಆಯ್ಕೆಗೆ ಪ್ರಾದೇಶಿಕ ಆಯುಕ್ತರು ಚುನಾವಣೆ ನಡೆಸಿದ ನಂತರ ಆ ಸಮಿತಿಯ ಅಧ್ಯಕ್ಷರನ್ನು ನಿಯೋಜಿಸಲಾಗುವುದು.
ಸಂಭವನೀಯ ಅಧ್ಯಕ್ಷರುಗಳು:
ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ- ಹೇಮಲತಾ ಗೋಪಾಲಯ್ಯ, ಸಾಮಾಜಿಕ ನ್ಯಾಯ ಸಮಿತಿ- ಸೌಮ್ಯ ಶಿವಕುಮಾರ್, ತೋಟಗಾರಿಕೆ- ಐಶ್ವರ್ಯ ನಾಗರಾಜ್, ಶಿಕ್ಷಣ- ಇಮ್ರಾನ್ ಪಾಷ, ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ- ಉಮ್ಮೆ ಸಲ್ಮಾ, ಲೆಕ್ಕಪತ್ರ ಸ್ಥಾಯಿ ಸಮಿತಿ- ಸುಜಾತಾ ರಮೇಶ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ.
ಉಳಿದ ಸಮಿತಿಗಳಿಗೂ 14ರಂದೇ ಅಧ್ಯಕ್ಷರುಗಳನ್ನು ಆಯ್ಕೆ ಮಾಡಲಾಗುವುದು.