ಗೌತಮ್ ಗಂಭೀರ್ ಕ್ರಿಕೆಟ್‍ಗೆ ವಿದಾಯ 

ನವದೆಹಲಿ: ಭಾರತದ ಎಡಗೈ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಅವರು ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಕುತೂಹಲದ ಸಂಗತಿಯೆಂದರೆ bccI ಎಂದು ಟ್ಯಾಗ್ ಮಾಡಿ, ಟ್ವಿಟರ್ ಮೂಲಕ ಗೌತಮ್ ಗಂಭೀರ್ ತಮ್ಮ ನಿವೃತ್ತಿ ಘೋಷಿಸಿದ್ದಾರೆ.
‘ಗೌತಿ’ ಎಂದೇ ಕರೆಯಿಸಿಕೊಳ್ಳುತ್ತಿದ್ದ ಗೌತಮ್ ಗಂಭೀರ್ ಅವರು 2003 ರಲ್ಲಿ ಢಾಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡುವ ಮೂಲಕ ಕ್ರಿಕೆಟ್ ವೃತ್ತಿ ಜೀವನ ಆರಂಭಿಸಿದ್ದರು.
ಗೌತಮ್ ಗಂಭೀರ್ ಇಲ್ಲಿವರೆಗೂ 58 ಟೆಸ್ಟ್, 147 ಏಕದಿನ ಪಂದ್ಯಗಳು ಮತ್ತು 37 ಟಿ20 ಪಂದ್ಯಗಳನ್ನ ಆಡಿದ್ದಾರೆ. 2007ರ ವಿಶ್ವ ಟ್ವೆಂಟಿ 20 ಮತ್ತು 2011 ರ ವಿಶ್ವಕಪ್ ಗೆಲುವು ಸಾಧಿಸಲು ಭಾರತಕ್ಕೆ ಸಹಾಯ ಮಾಡುವಲ್ಲಿ ಗಂಭೀರ್ ಪ್ರಮುಖ ಪಾತ್ರ ವಹಿಸಿದ್ದಾರೆ.
ಭಾರವಾದ ಹೃದಯದಿಂದ ಅತ್ಯಂತ ಕಷ್ಟದ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ನಾನು ನಿವೃತ್ತಿ ಘೋಷಣೆ ಮಾಡಲು ನಿರ್ಧರಿಸಿದ್ದೇನೆ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.
ಗೌತಮ್ ಗಂಭೀರ್ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ವಿಶ್ವದ ಶ್ರೇಷ್ಠ ಆರಂಭಿಕ ಬ್ಯಾಟ್ಸ್‍ಮನ್ ಆಗಿದ್ದರು. ಗಂಭೀರ್ ಟೆಸ್ಟ್‍ನಲ್ಲಿ 58 ಪಂದ್ಯಗಳನ್ನಾಡಿ 4154 ರನ್ ಗಳಿಸಿದ್ದು ಇದರಲ್ಲಿ 9 ಶತಕ ಮತ್ತು 22 ಅರ್ಧ ಶತಕ ಬಾರಿಸಿದ್ದಾರೆ. ಇನ್ನು ಏಕದಿನ ಕ್ರಿಕೆಟ್‍ನಲ್ಲಿ 147 ಪಂದ್ಯಗಳನ್ನ ಆಡಿ ಒಟ್ಟು 6,144 ರನ್ ಗಳಿಸಿ 11 ಶತಕ 34 ಅರ್ಧ ಶತಕ ಬಾರಿಸಿದ್ದಾರೆ. ಟಿ20 ಆವೃತ್ತಿಯಲ್ಲಿ 37 ಪಂದ್ಯಗಳನ್ನಾಡಿ ಒಟ್ಟು 783 ರನ್ ಗಳಿಸಿ 7 ಬಾರಿಸಿ ಅರ್ಧ ಶತಕ ಸಿಡಿಸಿದ್ದಾರೆ. 2007 ಏಕೈಕ ವಿಶ್ವಕಪ್ ಆಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ