ಬೆಂಗಳೂರು, ನ.28- ಮೊನ್ನೆ ನಿಧನರಾದ ರೆಬೆಲ್‍ಸ್ಟಾರ್ ಅಂಬರೀಶ್ ಅವರ ಗೌರವಾರ್ಥ ಕನ್ನಡ ಚಿತ್ರೋದ್ಯಮ ಇದೇ 30ರ ಶುಕ್ರವಾರದಂದು ಶ್ರದ್ಧಾಂಜಲಿ ಸಭೆ ಏರ್ಪಡಿಸಿದೆ.
ವಸಂತನಗರ ಬಡಾವಣೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯುವ ಈ ಸಭೆಯ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ವಹಿಸುವರು.
ಮುಖ್ಯಮಂತ್ರಿಗಳಿಗೆ ಬೇರೆ ಕಾರ್ಯಭಾರ ಇರುವ ಕಾರಣ ಅಂದು ಬೆಳಗ್ಗೆ 9 ಗಂಟೆಗೆ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿದೆ.ಚಿತ್ರರಂಗದ ಪ್ರದರ್ಶನ, ವಿತರಣೆ, ನಿರ್ಮಾಣವಲಯದ ಸದಸ್ಯರು, ಕಲಾವಿದರು, ಕಾರ್ಮಿಕರಾದಿಯಾಗಿ ಎಲ್ಲರೂ ಈ ಸಭೆಯಲ್ಲಿ ಭಾಗವಹಿಸುತ್ತಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿಯ ಅಧ್ಯಕ್ಷ ಎಸ್.ಎ.ಚಿನ್ನೇಗೌಡರು ತಿಳಿಸಿದ್ದಾರೆ.
ಅಂಬರೀಶ್ ಅವರ ಅಂತಿಮ ದರ್ಶನ ಹಾಗೂ ಅಂತಿಮ ಯಾತ್ರೆಯ ಸಂದರ್ಭದಲ್ಲಿ ಅಗಾಧ ಜನಸಂದಣಿ ಸೇರಿದ್ದರೂ ಕೂಡ ಕಾನೂನು ಸುವ್ಯವಸ್ಥೆಗೆ ಅಡಚಣೆ ಆಗದ ಹಾಗೆ ಏರ್ಪಾಡು ಮಾಡಿದ್ದ ಮುಖ್ಯಮಂತ್ರಿಗಳಿಗೆ ಹಾಗೂ ಪೆÇಲೀಸ್ ಇಲಾಖೆಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವುದಾಗಿ ಚಿನ್ನೆಗೌಡರು ಹೇಳಿದ್ದಾರೆ.