ಉದ್ಯೋಗ ನೀಡಲು ಖಾಸಗಿ ಕಂಪನಿಗಳ ಪೈಪೋಟಿ

ಬೆಂಗಳೂರು, ನ.23-ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಪಿಇಎಸ್ ವಿಶ್ವವಿದ್ಯಾನಿಲಯದ ಇಂಜಿನಿಯರಿಂಗ್ ವಿದ್ಯಾರ್ಥಿಗೆ ಆಸ್ಟ್ರೇಲಿಯಾದ ಕಂಪೆನಿ ವಾರ್ಷಿಕ 46 ಲಕ್ಷ ರೂ. ವೇತನ ನೀಡಿ ನೇಮಕಾತಿ ಮಾಡಿಕೊಂಡಿದೆ ಎಂದು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ.ಎಂ.ಆರ್.ದೊರೆಸ್ವಾಮಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪಿಇಎಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲು ಖಾಸಗಿ ಕಂಪೆನಿಗಳು ಪೈಪೆÇೀಟಿ ಮೇಲೆ ಮುಂದೆ ಬರುತ್ತಿವೆ. ಇಂಜಿನಿಯರಿಂಗ್ ವಿಭಾಗದಲ್ಲಿ ಶೇ.60ರಷ್ಟು ವಿದ್ಯಾರ್ಥಿಗಳಿಗೆ ಉದ್ಯೋಗ ಸಿಕ್ಕಿದೆ.

ಮರ್ಸಿಡಿಸ್ ಬೆಂಜ್ ಕಂಪೆನಿ ನಾಲ್ಕು ವಿದ್ಯಾರ್ಥಿನಿಯರಿಗೆ ತಲಾ ಒಂದು ಲಕ್ಷ ರೂ. ವಿದ್ಯಾರ್ಥಿ ವೇತನ ನೀಡುತ್ತಿದೆ. 2020ಕ್ಕೆ ಇಂಜಿನಿಯರಿಂಗ್ ಪದವಿ ಮುಗಿಸುವ ವಿದ್ಯಾರ್ಥಿಗಳು ಈಗ 5ನೇ ಸೆಮಿಸ್ಟರ್‍ನಲ್ಲಿದ್ದು ಅವರ ಪೈಕಿ 8 ಮಂದಿಗೆ ಮಾರ್ಗೋನ್ ಸ್ಟಾನ್ಲಿ ಸಂಸ್ಥೆ ತಿಂಗಳಿಗೆ 87 ಸಾವಿರ ರೂ. ಶಿಷ್ಯ ವೇತನ ನೀಡುತ್ತಿದೆ. ಗೋಲ್ಡ್‍ಮನ್ ಸ್ಕ್ರಾಚ್ ಕಂಪೆನಿಯು ಮೂವರು ವಿದ್ಯಾರ್ಥಿಗಳಿಗೆ ತಲಾ 80 ಸಾವಿರ ರೂ.ಗಳನ್ನು , ಇನ್‍ಟ್ಯೂಟ್ ಸಂಸ್ಥೆಯು ಮೂರು ಮಂದಿ ವಿದ್ಯಾರ್ಥಿಗಳಿಗೆ 47 ಸಾವಿರ ರೂ., ವಾಲ್‍ಮಾರ್ಟ್ ಸಂಸ್ಥೆಯು 8 ಮಂದಿಗೆ ತಲಾ 50 ಸಾವಿರ ರೂ. ಪ್ರತಿ ತಿಂಗಳು ಶಿಷ್ಯ ವೇತನವನ್ನು ನೀಡುತ್ತಿದೆ.

ವಿವಿಯ ಫಾರ್ಮಸಿ ವಿಭಾಗದಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಈಗಾಗಲೇ ಉದ್ಯೋಗ ಲಭಿಸಿದೆ. ಬಿ.ಕಾಂ ವಿದ್ಯಾರ್ಥಿಗಳ ಪೈಕಿ ಶೇ.50ರಷ್ಟು ವಿದ್ಯಾರ್ಥಿಗಳಿಗೆ ಆಫರ್ ಲೆಟರ್ ಕೈಯಲ್ಲಿದೆ. ಸುಮಾರು 100ಕ್ಕೂ ಹೆಚ್ಚು ಕಂಪೆನಿಗಳು ಶಿಕ್ಷಣ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುತ್ತಿವೆ ಎಂದರು.

ಪಿಇಎಸ್ ವಿಶ್ವವಿದ್ಯಾನಿಲಯ ಅಂತಾರಾಷ್ಟ್ರೀಯ ಇಂಜಿನಿಯರಿಂಗ್ ಸಂಸ್ಥೆಯಿಂದ ಮಾನ್ಯತೆ ಪಡೆದಿದ್ದು, ಇದು ದೇಶದಲ್ಲೇ ಮೊದಲ ಹಾಗೂ ವಿಶ್ವದಲ್ಲೇ ಐದನೇ ಶಿಕ್ಷಣ ಸಂಸ್ಥೆಯಾಗಿದೆ.

ಪಿಇಎಸ್ ಶಿಕ್ಷಣ ಸಂಸ್ಥೆ 2013ರಲ್ಲಿ ವಿವಿಯಾಗಿ ಪರಿವರ್ತನೆಗೊಂಡಿದೆ. ಅಂದಿನಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪೆÇ್ರೀತ್ಸಹಿಸುವ ಸಲುವಾಗಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಈವರೆಗೂ ಹದಿನೈದೂವರೆ ಕೋಟಿ ನಗದನ್ನು ವಿದ್ಯಾರ್ಥಿ ವೇತನವಾಗಿ ನೀಡಲಾಗಿದೆ. ಈ ವರ್ಷ 3774 ವಿದ್ಯಾರ್ಥಿಗಳಿಗೆ 2.35 ಕೋಟಿ ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ಹೇಳಿದರು.

ಪಿಇಎಸ್ ಶಿಕ್ಷಣ ಸಂಸ್ಥೆ ನಾಳೆ ಸಂಸ್ಥಾಪನಾ ದಿನಾಚರಣೆ ಹಮ್ಮಿಕೊಂಡಿದೆ. ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಕರ್ನಾಟಕ ವಿದ್ಯುತ್ ನಿಯಂತ್ರಣ ಮಂಡಳಿ ಅಧ್ಯಕ್ಷ ಎಂ.ಕೆ.ಶಂಕರಲಿಂಗೇಗೌಡ, ಭಾರತ ಅಭಿವೃದ್ಧಿ ಮಂಡಳಿಯ ಮುಖ್ಯಸ್ಥ ಮುಸ್ತಫಾ ವಜೀದ್, ಪಿಇಎಸ್ ಶಿಕ್ಷಣ ಸಂಸ್ಥೆ ಸಿಇಒ ಸಮಕುಲಾಧಿಪತಿ ಪೆÇ್ರ.ಡಿ.ಜವಾಹರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ದೊರೆಸ್ವಾಮಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ