ಮೈಸೂರು: ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸೋದರಿ, ರಾಜಮಾತೆ ಪ್ರಮೋದಾದೇವಿ ನಾದಿನಿ ವಿಶಾಲಾಕ್ಷಿದೇವಿ ಅವರು ವಿಧಿವಶರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದಿಂದ ಬಳಲುತ್ತಿದ್ದ ವಿಶಾಲಾಕ್ಷಿದೇವಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆಯಷ್ಟೇ ಪ್ರಮೋದಾದೇವಿಯವರು ಆಸ್ಪತ್ರೆಗೆ ಬಂದು ಅವರ ಆರೋಗ್ಯ ವಿಚಾರಿಸಿದ್ದರು. ಆದರೆ ಇಂದು ಸಂಜೆ ಕೊನೆಯುಸಿರೆಳೆದಿದ್ದಾರೆ ಎಂದು ಮೃತ ವಿಶಾಲಾಕ್ಷಿದೇವಿ ಪುತ್ರ ರುದ್ರಪ್ರತಾಪ ಸಿಂಗ್ ಮಾಹಿತಿ ನೀಡಿದ್ದಾರೆ.
ಇಂದು ಬೆಳಗ್ಗೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಜಮಾತೆ ಪ್ರಮೋದಾ ದೇವಿ ಅವರ ತಾಯಿ ಪುಟ್ಟರತ್ನಮ್ಮಣಿ(98) ಅವರು ಕೂಡ ಇಹಲೋಕ ತ್ಯಜಿಸಿದ್ದರು.