ಮುಂಬೈ: ಭಾರತೀಯ ರೂಪಾಯಿ ಕುಸಿತವನ್ನು ತಡೆಯಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪಾಟ್ ಮಾರ್ಕೆಟ್(ಈಗಲೇ ಒಪ್ಪಂದ ಮಾಡಿಕೊಂಡು ಈಗಲೇ ವಹಿವಾಟು ನಡೆಸುವುದು) ಮತ್ತು ಫಾರ್ವರ್ಡ್ ಮಾರ್ಕೆಟ್( ಈಗ ಒಪ್ಪಂದ ಮಾಡಿಕೊಂಡು ಮುಂದೆ ಮಾರಾಟ ಮಾಡುವುದು) ನಲ್ಲಿ ಮಧ್ಯೆ ಪ್ರವೇಶಿಸಬೇಕೆಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಕೊರಾಪ್ ವರದಿ ತಿಳಿಸಿದೆ.ಸ್ಪಾಟ್ ಮತ್ತು ಫಾರ್ವರ್ಡ್ ಮಾರುಕಟ್ಟೆಯಲ್ಲಿ ವಿದೇಶಿ ಕರೆನ್ಸಿಗಳನ್ನು ನೀಡಿರುವ ದರದಲ್ಲಿ ಮಾರಾಟ ಮಾಡುವುದು ಅಥವಾ ಖರೀದಿಸುವುದಾಗಿದೆ.ವರದಿಯ ಪ್ರಕಾರ, ಜೂನ್ 2008ರಿಂದ ಮೇ 2009ರವರೆಗೆ ಭಾರತೀಯ ರೂಪಾಯಿ ಬೆಲೆ ಶೇಕಡಾ 13ರಷ್ಟು ಇಳಿಕೆಯಾದಾಗ, ಆಗ ವಿದೇಶಿ ವಿನಿಮಯ ಮೀಸಲು 312 ಶತಕೋಟಿ ಡಾಲರ್ ನಷ್ಟು ಇದ್ದರೂ ಕೂಡ ಆರ್ ಬಿಐ 43 ಶತಕೋಟಿ ಡಾಲರ್ ಗೆ ಮಾರಾಟ ಮಾಡಿತ್ತು.1990ರ ದಶಕದಲ್ಲಿ ಕೂಡ ಒಟ್ಟು ವಿದೇಶಿ ವಿನಿಮಯ ಮೀಸಲು 40 ಶತಕೋಟಿ ಡಾಲರ್ ಗಿಂತ ಕಡಿಮೆಯಾಗಿದ್ದಾಗ ವಿದೇಶಿ ವಿನಿಮಯ ಮಾರುಕಟ್ಟೆಗೆ ಆರ್ ಬಿಐ ಮಧ್ಯ ಪ್ರವೇಶಿಸಿ ರೂಪಾಯಿ ಕುಸಿತವನ್ನು ತಡೆಗಟ್ಟಲು ಒಟ್ಟು ವಿದೇಶಿ ವಿನಿಮಯವನ್ನು ಶೇಕಡಾ 8ರಿಂದ 9ರಷ್ಟು ಮಾರಾಟ ಮಾಡಿತ್ತು.ನಾವು ಪ್ರಸ್ತುತ ಇರುವ ಮಾರುಕಟ್ಟೆ ಪರಿಸ್ಥಿತಿಯನ್ನು ನೋಡುತ್ತಿದ್ದೇವೆ. ಆರ್ ಬಿಐ ಶೇಕಡಾ 10ರಷ್ಟು ಹೋಗಬಹುದಾದ ಸಾಧ್ಯತೆಯಿದ್ದು ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಹೆಚ್ಚುವರಿ 25 ಶತಕೋಟಿ ಡಾಲರ್ ನ್ನು ಮಾರಾಟ ಮಾಡಬಹುದಾಗಿದೆ ಎಂದು ಎಸ್ ಬಿಐ ವರದಿ ತಿಳಿಸಿದೆ.ಡಾಲರ್ ಎದುರು ರೂಪಾಯಿ ಬೆಲೆ ಸ್ಥಿರವಾಗಿ ಉಳಿಯಲು ಆರ್ ಬಿಐ ಮಧ್ಯವರ್ತಿಗಳ ಮೂಲಕ ಮಧ್ಯಪ್ರವೇಶಿಸುವ ಸಾಧ್ಯತೆಯಿದೆ.
November 9, 2018VDವಾಣಿಜ್ಯComments Off on ಆರ್ಬಿಐ ಮೀಸಲು ನಿಧಿಯಿಂದ 3.6 ಲಕ್ಷ ಕೋಟಿ ರೂ. ಕೇಳಿಲ್ಲ: ಕೇಂದ್ರ ಸರಕಾರ ಸ್ಪಷ್ಟನೆ
Seen By: 185 ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ ಮೀಸಲು ನಿಧಿಯಿಂದ 3.6 ಲಕ್ಷ ಕೋಟಿ ರೂ. ಹಣವನ್ನು ಪಡೆಯುವ ನಿರೀಕ್ಷೆಯಲ್ಲಿ ಇಲ್ಲ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ [more]
Seen By: 271 ನವದೆಹಲಿ: ಆರ್ ಬಿಐ ಹಾಗೂ ಕೇಂದ್ರ ಸರ್ಕಾರದ ಸಂಘರ್ಷ ಮುಂದುವರೆದಿದ್ದು, ಈ ಭಿನ್ನಮತ ತಿಳಿಯಾಗದಿದ್ದಲ್ಲಿ ನ.19ರಂದು ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ರಾಜೀನಾಮೆ [more]