ಬೆಂಗಳೂರು, ಸೆ.12-ನಗರದ ಎರಡು ಕಡೆ ಮನೆಗಳ್ಳತನ ನಡೆಸಿರುವ ಕಳ್ಳರು ಹಣ ಹಾಗೂ ಆಭರಣವನ್ನು ಕಳ್ಳತನ ಮಾಡಿದ್ದಾರೆ.
ಜೆ.ಬಿ.ನಗರ:
ಮುರುಗೇಶ್ಪಾಳ್ಯದ 4ನೇ ಕ್ರಾಸ್ ನಿವಾಸಿ ಅರುಣ್ಕುಮಾರ್ ಎಂಬುವರ ಕುಟುಂಬ ಹೊರಗೆ ಹೋಗಿದ್ದಾಗ ಕಳ್ಳರು ಇವರ ಮನೆಯ ಬೀಗ ಒಡೆದು ಒಳನುಗ್ಗಿ ಬೀರುವನ್ನು ಮೀಟಿ ಕೈಗೆ ಸಿಕ್ಕ ಒಂದು ಸಾವಿರ ಹಣ ಹಾಗೂ 20 ಸಾವಿರ ರೂ. ಬೆಲೆಯ ಸರವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಕೆ.ಜಿ.ಹಳ್ಳಿ:
ಎಚ್.ಬಿ.ಆರ್. ಲೇಔಟ್ನ ಎಸ್ಬಿಸಿ ಅಪಾರ್ಟ್ಮೆಂಟ್, 8ನೇ ಕ್ರಾಸ್ ನಿವಾಸಿ ಮೊಹಮ್ಮದ್ ಮೊಹಿಬ್ ಎಂಬುವರ ಮನೆಯ ಬೀಗ ಮುರಿದು ಒಳನುಗ್ಗಿದ ಚೋರರು ಬೀರುವನ್ನು ಮೀಟಿ 40 ಸಾವಿರ ಬೆಲೆಯ ಆಭರಣವನ್ನು ಕದ್ದು ಪರಾರಿಯಾಗಿದ್ದಾರೆ.
ಈ ಎರಡೂ ಪ್ರಕರಣಗಳನ್ನು ಆಯಾ ಠಾಣೆ ಪೆÇಲೀಸರು ದಾಖಲಿಸಿಕೊಂಡು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.