ಬೆಂಗಳೂರು, ಸೆ.11-ಬ್ಯೂಟಿಷಿಯನ್ ವೃತ್ತಿಯ ಮಹತ್ವ ಅರಿಯದೆ ತ್ವರಿತ ತರಬೇತಿ ಪಡೆದು ವೃತ್ತಿಗೆ ಕಳಂಕ ತರುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ಬ್ಯೂಟಿ ಪಾರ್ಲರ್ ಅಸೋಸಿಯೇಷನ್ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ನ ಅಧ್ಯಕ್ಷೆ ಅನಿತಾ ಶರ್ಲಿ ಮಾತನಾಡಿ, ಕೆಲವು ದಿನಗಳ ಹಿಂದೆ ಮೈಸೂರಿನ ನೇಹಾ ಗಂಗಮ್ಮ ಎಂಬ ಯುವತಿ ಬ್ಯೂಟಿಪಾರ್ಲರ್ನಲ್ಲಿ ಹೇರ್ ಸ್ಟ್ರೈಟ್ನಿಂಗ್ ಮಾಡಿಕೊಂಡಿದ್ದಳು. ನಂತರ ಆಕೆಯ ಕೂದಲು ಉದುರಲು ಆರಂಭಿಸಿದ್ದು, ಇದರಿಂದ ಮನನೊಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಪೆÇೀಷಕರು ದೂರು ದಾಖಲಿಸಿದ್ದಾರೆ. ಇದರಿಂದ ಬ್ಯೂಟಿಷಿಯನ್ ವೃತ್ತಿಗೆ ಕಳಂಕವಾಗಿದೆ ಎಂದರು.
ಇತರೆ ಕೆಲವು ಸಂಘಟನೆಗಳು ಒಂದು ಅಥವಾ ಮೂರು ತಿಂಗಳು ಕಾಲ ಬ್ಯೂಟಿಷಿಯನ್ ಕೋರ್ಸ್ಗಳ ತರಬೇತಿಯಿಂದ ಚರ್ಮ ಮತ್ತು ಕೂದಲುಗಳ ಬಗ್ಗೆ ತಿಳಿದುಕೊಳ್ಳಲು ಈ ಅವಧಿಯಲ್ಲಿ ಸಾಧ್ಯವಾಗುವುದಿಲ್ಲ. ಇದರಿಂದಾಗಿ ಸರಿಯಾದ ಅಭ್ಯಾಸವಿಲ್ಲದೆ ಈ ರೀತಿಯ ತೊಂದರೆಯಾಗುತ್ತಿದೆ. ಇದರಿಂದ ನುರಿತ ಬ್ಯೂಟಿಷಿಯನ್ಗೆ ಕೆಟ್ಟ ಬರುತ್ತಿದೆ ಎಂದರು.
ಬ್ಯೂಟಿಷಿಯನ್ ಅಭ್ಯಾಸಕ್ಕೆ 2 ವರ್ಷ ಸಮಯ ಬೇಕಾಗುತ್ತದೆ. ಇವರು ಕೇವಲ ಮೂರು ತಿಂಗಳ ಅಭ್ಯಾಸದಿಂದ ಸಾರ್ವಜನಿಕರು ತೊಂದರೆಗೆ ಒಳಪಡುತ್ತಾರೆ. ಇಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.