ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮೊದಲೆರೆಡು ಟೆಸ್ಟ್ ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿದ್ದು ಭಾರತೀಯ ಬ್ಯಾಟ್ಸ್ಮನ್ಗಳ ಕಳಪೆ ಪ್ರದರ್ಶನ ಪಂದ್ಯಗಳ ಸೋಲಿಗೆ ಪ್ರಮುಖ ಕಾರಣವಾಗಿದೆ.
ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಬಿಟ್ಟರೆ ಮತ್ಯಾವ ಆಟಗಾರನು ಸಹ ಒಂದು ಅರ್ಧ ಶತಕವನ್ನು ಬಾರಿಸಿಲ್ಲ. ಖ್ಯಾತ ಬ್ಯಾಟ್ಸ್ಮನ್ಗಳೆ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿರುವುದು ಜಗತ್ತಿನ ನಂಬರ್ ತಂಡಕ್ಕೆ ತಲೆ ನೋವಾಗಿ ಪರಿಣಮಿಸಿದೆ.
ಇನ್ನು ಬ್ಯಾಟ್ಸ್ಮನ್ಗಳ ಕಳಪೆ ಪ್ರದರ್ಶನಕ್ಕೆ ಸ್ವತಃ ನಾಯಕ ವಿರಾಟ್ ಕೊಹ್ಲಿ ದಂಗಾಗಿದ್ದಾರೆ. ಬ್ಯಾಟ್ಸ್ಮನ್ಗಳ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿರುವ ವಿರಾಟ್ ಕೊಹ್ಲಿ ಬ್ಯಾಟ್ಸ್ಮನ್ಗಳನ್ನು ತೆಗಳದೆ ಅವರಿಗೆ ಆಶಾ ಭಾವ ಮೂಡಿಸುವ ಮಾತುಗಳನ್ನಾಡುತ್ತಿದ್ದಾರೆ.
ವಿರಾಟ್ ಕೊಹ್ಲಿ ಹೇಳುವಂತೆ ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಗಳು ಮಾನಸಿಕವಾಗಿ ತೊಂದರೆ ಅನುಭವಿಸುತ್ತಿದ್ದಾರೆ. ತಾಂತ್ರಿಕವಾಗಿ ಎಲ್ಲಾ ಬ್ಯಾಟ್ಸ್ಮನ್ಗಳು ತಮ್ಮ ಆಟದಲ್ಲಿ ಬಲಿಷ್ಠರಾಗಿದ್ದಾರೆ. ಆದರೆ ಮಾನಸಿಕವಾಗಿ ಗೊಂದಲಕ್ಕೆ ಸಿಲುಕಿರುವುದರಿಂ ಅವರು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಇದಕ್ಕಾಗಿ ನಾನು ಯಾವ ಬ್ಯಾಟ್ಸ್ಮನ್ಗಳನ್ನು ನಿಂದಿಸುತ್ತಿಲ್ಲ. ಬದಲಿಗೆ ಅವರಿಗೆ ಹುಮ್ಮಸ್ಸು ತುಂಬಿಸುವ ಹಾಗೂ ಸದಾ ಸಂತೋಷದಿಂದಿರುವಂತೆ ಮಾಡುವ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ಒಂದು ವೇಳೆ ಇದೇ ರೀತಿ ಬ್ಯಾಟ್ಸ್ಮನ್ಗಳು ಮಾನಸಿಕವಾಗಿ ಕುಗ್ಗಿದರೆ ಮುಂದಿನ ಮೂರು ಟೆಸ್ಟ್ ಪಂದ್ಯಗಳ ಮೇಲೆ ಪರಿಣಾಮ ಬೀರಲಿದೆ ಎಂದರು.
ಯಾವುದೇ ಬ್ಯಾಟ್ಸ್ಮನ್ನಲ್ಲಿ ತಾಂತ್ರಿಕ ಕೊರತೆಯನ್ನು ಕಂಡಿಲ್ಲ. ಬ್ಯಾಟ್ಸ್ಮನ್ ಆಲೋಚನೆ ಸರಿಯಾಗಿದ್ದರೆ ಮೈದಾನದಲ್ಲಿ ಚೆಂಡು ಹೇಗೆ ಬಂದು ಅದನ್ನು ಸಮರ್ಥವಾಗಿ ಎದುರಿಸಬಹುದು. ಆದರೆ ಮಾನಸಿಕವಾಗಿ ಕುಗ್ಗಿದರೆ ನಾವು ಬೇಗ ಔಟ್ ಆಗಬೇಕಾಗುತ್ತದೆ ಎಂದರು.
ಜಗತ್ತಿನ ಯಾವುದೇ ಪರಿಸ್ಥಿತಿಗಳು ಸುಲಭ ಅಥವಾ ಕಷ್ಟವಾಗಿರುತ್ತದೆ. ಭಾರತದಲ್ಲಿ ನೀವು ಮಾನಸಿಕವಾಗಿ ದೃಢವಿಲ್ಲದಿದ್ದರು ಚೆಂಡನ್ನು ಸಮರ್ಥವಾಗಿ ಎದುರಿಸಬಲ್ಲರು ಆದರೆ ಇಲ್ಲಿ ಅದು ಆಗುತ್ತಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.