ಮುಂಬೈ: ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ ಆಂಗ್ಲರ ವಿರುದ್ಧ ಕೇವಲ 107 ರನ್ ಗಳಿಸಿ ಆಲೌಟ್ ಆಯಿತು. ಇಂಗ್ಲೆಂಡ್ನ ಟಫ್ ಪಿಚ್ಗಳಲ್ಲಿ ಕಠಿಣ ಸವಾಲನ್ನ ಎದುರಿಸ್ತಿರುವ ಟೀಮ್ ಇಂಡಿಯಾ ಪ್ಲೇಯರ್ಸ್, ಸಾಕಷ್ಟು ಪ್ರಯತ್ನದ ನಡುವೆಯೂ ವೈಫಲ್ಯತೆ ಅನುಭವಿಸ್ತಾ ಇದ್ದಾರೆ. ಬರ್ಮಿಂಗ್ಹ್ಯಾಮ್ನ ಎಜ್ಬ್ಯಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ 31 ರನ್ ಅಂತರದಿಂದ ಮಣಿದು ಸಾಕಷ್ಟು ಪ್ರಶ್ನೆಗಳನ್ನ ಎದುರಿಸಿದ್ದರು. ಇದೀಗ, ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ನಲ್ಲಿ ಅದೇ ರೀತಿಯ ಪರ್ಫಾರ್ಮನ್ಸ್ ಮುಂದುವರಿಸಿದೆ. ಫ್ಯಾನ್ಸ್ ಕೂಡ ಸಾಕಷ್ಟು ಟೀಕೆಗಳನ್ನ, ಪ್ರಶ್ನೆಗಳನ್ನ ಟೀಮ್ ಇಂಡಿಯಾ ಪ್ಲೇಯರ್ಸ್ನತ್ತ ಎಸೆಯುತ್ತಿದ್ದಾರೆ. ಇದೆಲ್ಲವನ್ನ ಗಮನಿಸಿರೋ ಟೀಮ್ ಇಂಡಿಯಾ ಏಕದಿನ, ಟಿ20 ತಂಡಗಳ ಓಪನರ್ ರೋಹಿತ್ ಶರ್ಮಾ, ಅಭಿಮಾನಿಗಳಲ್ಲಿ ವಿಶೇಷ ಮನವಿಯೊಂದನ್ನ ಮಾಡಿದ್ದಾರೆ. ಇದೇ ಆಟಗಾರರು ಟೀಮ್ ಇಂಡಿಯಾ ಟೆಸ್ಟ್ ತಂಡವನ್ನ ನಂ. 1 ಸ್ಥಾನಕ್ಕೇರಿಸಿದ್ದಾರೆ. ಇದೀಗ ಅವರು, ಟಫ್ ಟೈಮ್ ಎದುರಿಸುತ್ತಿದ್ದು, ಇದೇ ಸಮಯದಲ್ಲಿ ನಾವು ಆಟಗಾರರಿಗೆ ಬೆಂಬಲಿಸಬೇಕಾಗುತ್ತದೆ ಅಂತ ತಮ್ಮ ಟ್ವಿಟರ್ ಖಾತೆಯಲ್ಲಿ ಹಿಟ್ಮ್ಯಾನ್ ಬರೆದುಕೊಂಡಿದ್ದಾರೆ.
Related Articles
ಮತ್ತೆ ಸುದ್ದಿಯಾಗಿದ್ದಾಳೆ ರೋಹಿತ್ ಮಗಳು ಸಮೈರಾ
February 13, 2019
Samachar Network-Sports
ಕ್ರೀಡೆ
Comments Off on ಮತ್ತೆ ಸುದ್ದಿಯಾಗಿದ್ದಾಳೆ ರೋಹಿತ್ ಮಗಳು ಸಮೈರಾ
Seen By: 41 ಟೀಂ ಇಂಡಿಯಾದ ಡ್ಯಾಶಿಂಗ್ ಓಪನರ್ ರೋಹಿತ್ ಶರ್ಮಾ ಅವರ ಮುದ್ದಿನ ಮಗಳು ಈಗ ಮತ್ತೆ ಸುದ್ದಿಯಲಿದ್ದಾಳೆ. ಸರಣಿ ಸೋತು ಬಂದ ರೋಹಿತ್ ಇದೀಗ [more]
ರಷ್ಯಾದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ರೋಹಿತ್ ಶರ್ಮಾ
Seen By: 725 ನವದೆಹಲಿ: 21ನೇ ಫಿಫಾ ವಿಶ್ವಕಪ್ ಪಂದ್ಯಾವಳಿಯ ಕಾವು ಜೋರಾಗಿದೆ. ಇದು ಕ್ರಿಕೆಟ್ ಪ್ರಿಯ ಭಾರತವನ್ನು ಬಿಟ್ಟಿಲ್ಲ. ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ [more]