ತಂಡಕ್ಕೆ ಆಟಗಾರ  ಬೇಕಿದ್ದರೆ ಮೊದಲ ಆಯ್ಕೆ ವಿರಾಟ್ ಕೊಹ್ಲಿ: ಕ್ಲೈವ್  ಲಾಯ್ಡ್ 

ಕಿಂಗ್ಸ್ ಟನ್ :  ನನ್ನ ತಂಡಕ್ಕೆ ವಿಶ್ವದ ಯಾವುದಾದರೂ ಓರ್ವ ಆಟಗಾರರನ್ನು ಸೇರಿಸಿಕೊಳ್ಳುವದಾದರೆ ನನ್ನ ಮೊದಲ ಆಯ್ಕೆ ಖಂಡಿತವಾಗಿಯೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಲೆಜೆಂಡ್ ಕ್ಲೈವ್ ಲಾಯ್ಡ್ ಹೇಳಿದ್ದಾರೆ.

ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಲಾಯ್ಡ್, ಓರ್ವ ನಾಯಕನಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಕೊಹ್ಲಿ ಸಾಗಬೇಕಾದ ದೂರ ಸಾಕಷ್ಟಿದೆ. ಆದರೆ ನನ್ನ ಅಭಿಪ್ರಾಯದಂತೆ ಹೇಳುವುದಾದರೆ ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್ ಸರ್ವಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬ. ವಿರಾಟ್ ಕೊಹ್ಲಿ ಕ್ರಿಕೆಟ್ ನಲ್ಲಿ ಅದಾಗಲೇ ಸಾಕಷ್ಟು ಸಕಾರಾತ್ಮಕ ಲಕ್ಷಣಗಳನ್ನು ತೋರಿದ್ದಾರೆ. ಹೌದು ಅವರು ಆಕ್ರಮಣಶೀಲರು, ಆದರೆ ಮಿತಿಯಲ್ಲಿ ಇರುವವರೆಗೂ ಎಲ್ಲವೂ ಚೆನ್ನ. ಆಕ್ರಮಣಶೀಲತೆ ಒಳ್ಳೆಯದ್ದೇ ಎಂದು ನಾನು ನಂಬಿದ್ದೇನೆ ಎಂದು ಹೇಳಿದ್ದಾರೆ.

ಇದೇ ವೇಳೆ ಕೊಹ್ಲಿ ಬ್ಯಾಟಿಂಗ್‌ ಕುರಿತು ಮಾತನಾಡಿದ ಲಾಯ್ಡ್‌,’ಕೊಹ್ಲಿ ಒಬ್ಬ ಅತ್ಯುತ್ತಮ ಬ್ಯಾಟ್ಸಮನ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅವರ ತಂಡಕ್ಕೆ ಶ್ರೇಷ್ಠ ಕೊಡುಗೆ ನೀಡುತ್ತಿರುವ ಕೊಹ್ಲಿ ಕ್ರಿಕೆಟ್‌ ಜಗತ್ತಿನ ಯಾವುದೇ ಶ್ರೇಷ್ಠ ತಂಡದ ಭಾಗವಾಗಲು ಅರ್ಹರು. ನನ್ನ ತಂಡಕ್ಕೆ ಆಯ್ಕೆ ಮಾಡುವುದಾದರೆ ನಾನು ಖಂಡಿತಾ ಕೊಹ್ಲಿಯನ್ನು ಮೊದಲ ಆಯ್ಕೆಯಾಗಿ ಸ್ವೀಕರಿಸುತ್ತೇನೆ ಎಂದು ಲಾಯ್ಡ್ ಹೇಳಿದರು.

ಅಂತೆಯೇ ಕೊಹ್ಲಿ ಕುರಿತು ವಿವಿಯನ್ ರಿಚರ್ಡ್ಸ್ ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ ಲಾಯ್ಡ್, ಖಂಡಿತಾ ಅವರ ಮಾತಿಗೆ ನನ್ನ ಬೆಂಬಲವಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ