ಅತಿ  ಹೆಚ್ಚು ಬಾರಿ  ರನೌಟಾಗಿ  ಅಪಖ್ಯಾತಿಗೆ ಗುರಿಯಾದ  ಚೇತೇಶ್ವರ ಪೂಜಾರ 

ಲಂಡನ್ :  ಟೀಂ ಇಂಡಿಯಾದ  ಟೆಸ್ಟ್ ಸ್ಪೆಶಲಿಸ್ಟ್  ಚೇತೇಶ್ವರ  ಪೂಜಾರ ನಿನ್ನೆ   ಆಂಗ್ಲರ ವಿರುದ್ಧ  ಮೊದಲ  ಇನ್ನಿಂಗ್ಸ್ ನಲ್ಲಿ   ರನೌಟ್​ ಆಗುವ ಮೂಲಕ  ಟೆಸ್ಟ್ ನಲ್ಲಿ   ಅತಿ  ಹೆಚ್ಚು  ಬಾರಿ  ರನೌಟ್​ ಆದ  ಬ್ಯಾಟ್ಸ್ ಮನ್​ ಎಂಬ  ಅಪಖ್ಯಾತಿಗೆ  ಗುರಿಯಾಗಿದ್ದಾರೆ. ಲಾರ್ಡ್ಸ್  ಅಂಗಳದಲ್ಲಿ  ನಡೆದ ಎರಡನೇ  ದಿನದಾಟದ ಪಂದ್ಯದಲ್ಲಿ  ಒಂದನೇ ಕ್ರಮಾಂಕದಲ್ಲಿ  ಆಡಿದ ಚೇತೇಶ್ವರ ಪೂಜಾರ  ನಾಯಕ ವಿರಾಟ್  ಕೊಹ್ಲಿ ಜೊತೆ ಆಡುವಾಗ  ಅನಗತ್ಯ ರನ್​ ಕದಿಯಲು ಹೋಗಿ   ರನೌಟ್​ ಬಲೆಗೆ  ಬಿದ್ರು. ಇದರೊಂದಿಗೆ ಟೆಸ್ಟ್  ನಲ್ಲಿ  ತಮಗೆ ಬೇಡವಾದ  ದಾಖಲೆಯೊಂದನ್ನ  ಬರೆದ್ರು. ನಿನ್ನೆ 41ನಿಮಿಷಗಳ ಕಾಲ  ಆಡಿದ ಪೂಜಾರ    25 ಎಸೆತ  ಎದುರಿಸಿ  ಗಳಿಸಿದ್ದು  ಕೇವಲ 1 ರನ್  ಕಳೆದ 10  ವರ್ಷಗಳಲ್ಲಿ ಪೂಜಾರ ಎಂಟನೆ   ಬಾರಿ  ರನೌಟಾದ ದಾಖಲೆ ಬರೆದ್ರು.  ಇಂಗ್ಲೆಂಡ್​ ತಂಡದ ಮ್ಯಾಟ್​  ಪ್ರಿಯರ್, ಶ್ರೀಲಂಕಾ ತಂಡದ  ರಂಗನಾ ಹೆರತ್,  ಆಸೀಸ್ ನ ಮಾಜಿ ಕ್ಯಾಪ್ಟನ್  ರಿಕಿ ಪಾಂಟಿಂಗ್ ಮತ್ತು   ನ್ಯೂಜಿಲೆಂಡ್​ನ  ರಾಸ್ ಟೇಲರ್ ಅವರುಗಲ  ದಾಖಲೆ  ಸರಿಗಟ್ಟಿದ್ರು. ಇತ್ತೀಚೆಗೆ  13  ರನೌಟ್​ಗಳ  ಪೈಕಿ  8 ಬಾರಿ  ಪೂಜಾರ ತಂಡದಲ್ಲಿ  ಅತಿ  ಹೆಚ್ಚು  ಬಾರಿ ರನೌಟ್​ ಆಗಿದ್ದಾರೆ.   ಕಳೆದ  ಫೆಬ್ರವರಿಯಲ್ಲಿ  ದಕ್ಷಿಣ ಆಫ್ರಿಕಾ  ವಿರುದ್ಧ  ಸೆಂಚೂರಿಯನ್​ನಲ್ಲಿ   ನಡೆದ  ಟೆಸ್ಟ್  ಪಂದ್ಯದಲ್ಲಿ  ಒಂದೇ  ಪಂದ್ಯದಲ್ಲಿ  ಎರಡು  ಇನ್ನಿಂಗ್ಸ್​ಗಳಲ್ಲೂ  ರನೌಟ್​ ಆಗಿ  ಅಚ್ಚರಿ ಮೂಡಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ