ಬೆಂಗಳೂರು, ಆ.8-ಮಂಗಳೂರು, ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಇನ್ನೂ ಮೂರು ಕೆ-ಟಿಐ ಹಬ್ಗಳನ್ನು ಸ್ಥಾಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಪ್ರಕಟಿಸಿದರು.
ಜಾಲಹಳ್ಳಿಯಲ್ಲಿಂದು ಕೆ-ಟೆಕ್ ಇನ್ನೋವೇಷನ್ ಹಬ್ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಕೈಗಾರಿಕಾ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಲಭ್ಯವಿರುವ ಸ್ಥಳೀಯ ಮಾನವ ಸಂಪನ್ಮೂಲ ಹಾಗೂ ಉತ್ಪಾದನಾ ಸೌಲಭ್ಯ ಸಮೂಹಗಳನ್ನು ಬಳಸಿಕೊಳ್ಳಲು ಸರ್ಕಾರ ಎರಡನೇ ಹಂತದ ನಗರಗಳಲ್ಲಿ ಇದನ್ನು ಸ್ಥಾಪಿಸಲು ನಿರ್ಧರಿಸಿದೆ ಎಂದು ಹೇಳಿದರು.
ಈ ಸೌಲಭ್ಯಗಳ ಸುಸ್ಥಿರತೆಗಾಗಿ ಸ್ಥಳೀಯ ವ್ಯವಸ್ಥೆಯಲ್ಲಿನ ಪ್ರಮುಖ ಪಾಲುದಾರರನ್ನು ತೊಡಗಿಸುವುದು ನಮ್ಮ ಉದ್ದೇಶವಾಗಿದೆ. 5 ಕೆ-ಟಿಐ ಹಬ್ಗಳ ನವೀನತೆಯನ್ನು ಪೆÇ್ರೀ ಉದ್ಯಮ ಶೀಲತೆಯನ್ನು ಚುರುಕುಗೊಳಿಸಿ ತಂತ್ರಜ್ಞಾನ ಆಧಾರಿತ ಸ್ಟಾರ್ಟ್ಅಪ್ಗಳನ್ನು ಸೃಷ್ಟಿಸಿ ವೇಗ ನೀಡಿ ಉದ್ಯೋಗ ಪೂರೈಸುವುದು ಮತ್ತು ಪುನರ್ ಕೌಶಲ್ಯ ನೀಡಿಕೆಗೆ ಅವಕಾಶ ಸೃಷ್ಟಿಯಾಗುತ್ತದೆ ಎಂದರು.
ಸಂಶೋಧನಾಭಿವೃದ್ಧಿ ಪೆÇ್ರಟೋಟೈಪಿಂಗ್ ಪ್ರಯೋಗಾಲಯಗಳು, ವಿನ್ಯಾಸದಲ್ಲಿ ಸಹಾಯವಾಗುವಂತಹ ವಿಶೇಷ ಸಿಬ್ಬಂದಿ, ಕಚ್ಛಾ ವಸ್ತುಗಳನ್ನು ಪಡೆದುಕೊಳ್ಳುವಲ್ಲಿ ನೆರವು, ಉದ್ಯಮಶೀಲ ಸಮುದಾಯ ಮತ್ತು ಸಮಾನ ಮನಸ್ಕ ಹಾರ್ಡ್ವೇರ್, ನವಿನಾತ ಹರಿಕಾರರು, ಮಧ್ಯಮ-ಸಣ್ಣ ಉದ್ಯಮಗಳ ಸಂಪರ್ಕದ ಅಗತ್ಯವಿರುವ ತಂತ್ರಜ್ಞಾನ ಆಧಾರಿತ ಉತ್ಪನ್ನಗಳ ತಯಾರಿಕೆಯ ಸ್ಟಾರ್ಟ್ಅಪ್ಗಳಿಗೆ ಕೆ-ಟೆಕ್ ನವಿನತಾ ಕೇಂದ್ರ ವಿಶೇಷ ಚಾಲನೆ ನೀಡಲಿದೆ ಎಂದು ಜಾರ್ಜ್ ಹೇಳಿದರು.