10 ಮಹಿಳೆಯರಿಗೆ ಉದ್ಯಮಶೀಲತಾ ಪ್ರಶಸ್ತಿ ಪ್ರದಾನ

Varta Mitra News

ಬೆಂಗಳೂರು, ಆ.8- ಇನಾರ್ಬಿಟ್ ಮಾಲ್‍ನಲ್ಲಿ ನಡೆದ ಇನಾರ್ಬಿಟ್ ಪಿಂಕ್ ಪವರ್‍ನ ನಾಲ್ಕನೆ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 10 ಮಹಿಳೆಯರಿಗೆ ಉದ್ಯಮಶೀಲತಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಖ್ಯಾತ ಸಂಗೀತಗಾರ್ತಿ ಹಾಗೂ ರೇಡಿಯೋ ಜಾಕಿ ಮಲಿಶ್ಕಾ ಮೆಂಡೋನ್ಸಾ ಅವರು ಪ್ರಶಸ್ತಿ ಪ್ರದಾನ ಮಾಡಿದರು. ವಿಜೇತರಿಗೆ ಇನಾರ್ಬಿಟ್ ಮಾಲ್‍ನಲ್ಲಿ 9 ತಿಂಗಳ ಅವಧಿಗೆ ಉಚಿತ ರಿಟೇಲ್ ಮಳಿಗೆಯನ್ನ್ನು ನೀಡಲಾಗುತ್ತದೆ. ಮುಂಬೈ (ಮಲಾಡ್ ಮತ್ತು ವಾಶಿ), ಬೆಂಗಳೂರು, ಹೈದರಾಬಾದ್ ಮತ್ತು ವಡೋದರ ನಗರಗಳಿಂದ ವಿಜೇತರನ್ನು ಆರಿಸಲಾಗಿತ್ತು. ಪಿಂಕ್ ಪವರ್ ಈ ಋತುವಿನಲ್ಲಿ ಮಹಿಳಾ ಉದ್ಯಮಶೀಲರಿಂದ, ಆಹಾರ, ಕರಕುಶಲವಸ್ತು, ತ್ವಚೆ ಮತ್ತು ಸೌಂದರ್ಯ, ಗೃಹಾಲಂಕಾರ ಮುಂತಾದ ವರ್ಗಗಳಲ್ಲಿ 538 ಪ್ರವೇಶಗಳನ್ನು ಸ್ವೀಕರಿಸಿತ್ತು.
ವಿಜೇತರು: ಮುಂಬೈಯ ವಾಮಾಕ್ಷಿ ಮೋದಿ, ಜ್ಯೋತಿ ಛೆಟ್ರಿ, ನವೀ ಮುಂಬೈಯ ಕೃಷ್ಣಾ ತಮಾಲಿಯ ವೋರ, ಸುಜಾತ ಹಂಚಾಟೆ, ವೃಟ್ಟಿ ವಾಸ್ವಾನಿ, ಬೆಂಗಳೂರಿನ ಅರೋಮೆ ಹರ್ಬಲ್ಸ್‍ನ ಸ್ಥಾಪಕಿ ಕಿನ್ನೆರಿ ಗಾರ್ಗ್, ಹೈದರಾಬಾದ್‍ನ ಸಾಯಿದೀಪಿಕಾ, ಶಿಪ್ರಾ ನಯ್ಯರ್ (ಓಜೆಲ್‍ಬಿರ್ ಸೇ ಬ್ರಾಂಡ್ ಸ್ಥಾಪಕರು), ವಡೋದರದ ಸುವರ್ಣ ಸೋಳಂಕಿ, ದೇವಶ್ರೀ ರಾವಲ್ ಪ್ರಮುಖರು.
ವಿಜೇತರಿಗೆ ಟ್ರಸ್ಟ್ ಫಾರ್ ರಿಟೇಲರ್ಸ್ ಅಂಡ್ ರಿಟೇಲ್ ಅಸೋಸಿಯೇಷನ್ ಆಫ್ ಇಂಡಿಯಾ(ಟಿಆರ್‍ಆರ್‍ಎಐಎನ್) ಬೆಂಬಲದೊಂದಿಗೆ ವಹಿವಾಟು ಹೆಚ್ಚಿಸಿಕೊಳ್ಳಲು ಮಾರ್ಗದರ್ಶನ ನೀಡಲಾಗುತ್ತಿದೆ. ಪಿಂಕ್ ಪವರ್‍ನೊಂದಿಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗ ಹೊಂದಿದ್ದು ವಿಜೇತ ಉದ್ಯಮಶೀಲರಿಗೆ ಸಾಲದ ನೆರವು ನೀಡುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ