ಬೆಂಗಳೂರು,ಫೆ.28-ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಹಾಗೂ ದೇವಸ್ಥಾನಗಳಿಗೆ ಹೋದಾಗ ಅಲ್ಲಿನ ಸ್ವಾರಸ್ಯವನ್ನು ಹಾಗೂ ಅನುಭವಗಳನ್ನು ಲೇಖನಗಳ ಮೂಲಕ ಕೃತಿ ಹೊರ ತಂದಿರುವುದು ಬಹಳ ಸಂತೋಷದ ವಿಷಯ ಎಂದು ಖ್ಯಾತ ಸಾಹಿತಿ ಡಾ.ಬೈರಮಂಗಲ ರಾಮೇಗೌಡ ತಿಳಿಸಿದರು.
ಪ್ರೆಸ್ಕ್ಲಬ್ನಲ್ಲಿ ವಿಶ್ವ ಪರ್ಯಟ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕಾ ಬಳಗ ಹಿರಿಯ ಪತ್ರಕರ್ತರ ವೇದಿಕೆ ಮತ್ತು ಸಿವಿಜೆ ಪಬ್ಲಿಕೇಷನ್ಸ್ ಸಹಯೋಗದಲ್ಲಿ ಹಿರಿಯ ಪತ್ರಕರ್ತ ಡಾ.ಎನ್.ಜಿ.ಕೋಟೇಶ್ ಅವರು ಬರೆದಿರುವ ಎಷ್ಟು ಚಕ್ರ ಭಾರತಾಂಬೆ ನಿನ್ನ ಹಿರಿಯ ತೇರಿಗೆ ಮತ್ತು ವಿಶ್ವಾಂತರಾಳ ಪುಸ್ತಕ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಡಾ.ಎನ್.ಜಿ.ಕೋಟೇಶ್ ಅವರು ಇತಿಹಾಸದ ವಿದ್ಯಾರ್ಥಿಯಲ್ಲದಿದ್ದರೂ ನಿರಂತರ ವಿದ್ಯಾರ್ಥಿಯಾಗಿ ಸಂಶೋಧನೆ ಮಾಡಿದ್ದಾರೆ. ದೇವಸ್ಥಾನಕ್ಕೆ ಸಂಬಂಧಪಟ್ಟ ಸ್ವಾರಸ್ಯವಲ್ಲದೆ ಹೊಸ ವಿಚಾರಗಳನ್ನು ಸಹಾ ಲೇಖನದಲ್ಲಿ ಮೂಡಿಸಿದ್ದಾರೆ ಎಂದು ಹೇಳಿದರು.
ಸಂಶೋಧನಾತ್ಮಕ ಹೊರನೋಟಕ್ಕೆ ಸೀಮಿತವಾಗದೆ ಇದಕ್ಕೆ ಇರುವ ಹಿನ್ನಲೆಯನ್ನು ತೋರಿಸುವ ಒಳನೋಟವನ್ನು ಹೊಂದಿರುವ ಲೇಖನವನ್ನು ನೀಡಿದ್ದಾರೆ ಎಂದು ತಿಳಿಸಿದರು.
ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಮಾತನಾಡಿ, ಈಗಿನ ಗುರುಶಿಷ್ಯರ ಸಂಬಂಧ ಉತ್ತಮವಾಗಿಲ್ಲ. ಮಾಧ್ಯಮದ ಒಂದುಪೆನ್ನು ನೂರು ಕತ್ತಿಗೆ ಸಮ ಎಂದು ಹೇಳಿದರು.
ನಮ್ಮ ದೇಶದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಆ ಸಜ್ಜನರಿಗೆ ಕಾಲವಿಲ್ಲದಂತಾಗಿದೆ. ಅನೇಕತೆಯಲ್ಲಿ ಏಕತೆ ಇದೆ. ಅದೇ ಒಂದು ಧರ್ಮ. ನಮ್ಮ ಈ ಮಣ್ಣಿನಲಿ ವಿಶೇಷವಾದ ಗುಣ ಅಡಗಿದೆ ಎಂದು ತಿಳಿಸಿದರು.
ಚಲನಚಿತ್ರ ಹಿರಿಯ ನಟ ರಾಜೇಶ್ ಮಾತನಾಡಿ, ಈ ಎರಡು ಪುಸ್ತಕಗಳು ಎಲ್ಲರ ಕೈಯಲ್ಲಿ ಎಲ್ಲರ ಮನದಲ್ಲಿ ಶೋಭಿಸುವಂತಾಗಲಿ ಎಂದು ಹಾರೈಸಿದರು.
ವಿಶ್ವಾಂತರಾಳ ಪುಸ್ತಕದಲ್ಲಿ ಪ್ರವಾಸ ಮಾಡುವವರಿಗೆ ಬಹಳ ಅನುಕೂಲವಾಗುವ ಅಂಶಗಳಿವೆ ಎಂದು ಹೇಳಿದರು.
ಬೆಂಗಳೂರು ವಿವಿ ಕುಲಸಚಿವ ಪೆÇ್ರ.ಡಾ.ಬಿ.ಎಕ.ರವಿ, ಹಿರಿಯ ಪತ್ರಕರ್ತ ರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಆರ್.ಪಿ.ಸಾಂಬಸದಾ ಶಿವರೆಡ್ಡಿ , ಕೃತಿ ಬರೆದಿರುವ ಡಾ. ಎನ್.ಜಿ.ಕೋಟೇಶ್, ವಾಣಿಜ್ಯ ಇಲಾಖೆಯ ಡಿ.ಎಸ್.ಲಿಂಗರಾಜು, ಪ್ರಕಾಶಕರಾದ ಗಿರಿಜಾ ಚಂದ್ರು ಮತ್ತಿತರರು ಉಪಸ್ಥಿತರಿದ್ದರು.