ಕೊಳ್ಳೇಗಾಲ. ಜು.26- ರೇಷ್ಮೆ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕುವ ಮೂಲಕ ಬೆಳೆಗಾರರಿಗೆ ಯಾವುದೇ ತರಹದ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ರೇಷ್ಮೆ ಸಚಿವ ಸಾ.ರಾ.ಮಹೇಶ್ ಭರವಸೆ ನೀಡಿದರು.
ನಗರದ ಮುಡಿಗುಂಡದ ರೇಷ್ಮೆಗೂಡಿನ ಮಾರುಕಟ್ಟೆಯನ್ನು ವೀಕ್ಷಣೆ ಮಾಡಿ ನಂತರ ಸುದ್ದಿಗಾರರೂಂದಿಗೆ ಮಾತನಾಡಿದ ಅವರು, ಈ ರೇಷ್ಮೆ ಮಾರುಕಟ್ಟೆಯಲ್ಲಿ ದ್ವಿತಳಿಗೆ 40 ರೂ. ಮತ್ತು ವಿಶ್ರತಳಿಗೆ 50 ರೂ. ಸರ್ಕಾರದಿಂದ ಕೊಡುವ ವ್ಯವಸ್ಥೆ ಮಾಡುತ್ತೇನೆಂದು ಆಶ್ವಾಸನೆ ನೀಡಿದರು.
ಅಧಿಕಾರಿಗಳು ಪ್ರತಿಯೊಬ್ಬ ರೈತನಿಂದ 20ರಿಂದ 30 ರೂಪಾಯಿಗಳವರೆಗೆ ವಸೂಲಿ ಮಾಡುತ್ತಿದ್ದಾರೆಂದು ನನ್ನ ಗಮನಕ್ಕೆ ಬಂದಿದೆ. ಮುಂದೆ ಇದೇ ರೀತಿ ನಡೆದರೆ ಅಧಿಕಾರಿಗಳ ವಿರುದ್ದ ಸರಿಯಾದ ಕ್ರಮ ಕೈಗೊಳ್ಳತ್ತೇನೆ ಎಂದು ಎಚ್ಚರಿಕೆ ನೀಡಿದರು.
ರೀಲರ್ಸ್ ಮತ್ತು ರೈತರು ಸಚಿವರಿಗೆ ತಮ್ಮ ವಿವಿಧ ಬೇಡಿಕೆಗಳನ್ನು ತಿಳಿಸಿದಾಗ ಅದಕ್ಕೆ ಸಚಿವರು ಪ್ರತಿ ಕ್ರಿಯಿಸಿ ನಾಳೆ ಮುಖ್ಯಮುಂತ್ರಿಗಳ ಜೋತೆ ಸಭೆ ಇದ್ದು ರೇಷ್ಮೆ ಮಾರುಕಟ್ಟೆಯಲ್ಲಿ ರೀಲರ್ಸ್ ಮತ್ತು ರೈತರ ಬೇಡಿಕೆಗಳ ಬಗ್ಗೆ ಮುಖ್ಯಮುಂತ್ರಿಗಳ ಜೊತೆ ಚರ್ಚಿಸಿ ರೈತರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ವ್ಯವಸ್ಧೆ ಮಾಡುತ್ತೇನೆಂದು ನೇರವಾಗಿ ರೈತರ ಮುಂದೆ ಮತ್ತು ಮಾಧ್ಯಮದವರಿಗೆ ಉತ್ತರಿಸಿದರು.
ರೈತರ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ಕಣ್ಣೀರು ಹಾಕಿದರೆ ನಿಜ ಆದರೆ ಬಿಜೆಪಿ ನಾಯಕರು ಮನೆಯ ಬಾಗಿಲು ಮುಚ್ಚಿಕೊಂಡು ಕಣ್ಣೀರು ಹಾಕುತ್ತಾರೆ. ಜನರಿಗೆ ನಾಲ್ಕು ವರ್ಷದಲ್ಲಿ ಪ್ರಧಾನ ಮಂತ್ರಿಗಳು ಏನ್ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಆದಕ್ಷಣ ಅವರಿಗೆ ಹೃದಯ ಇಲ್ಲವೆ. ಅವರು ನಮ್ಮಂತೆಯೇ ಮನುಷ್ಯರು. ನೋವಾದ ಸಂದರ್ಭದಲ್ಲಿ ಕಣ್ಣೀರು ಬಂದಿರುತ್ತೆ ಎಂದರು. ಹನೂರು ಶಾಸಕ ಆರ್.ನರೇಂದ್ರ, ಜಿಪಂ ಶಿವಮ್ಮ, ತಾ.ಪಂ ಅಧ್ಯಕ್ಷ ರಾಜು, ಅಧಿಕಾರಿ ಪ್ರೇಮನಾಥ್, ರಾಚಪ್ಪ, ವಿನ್ಸೆಂಟ್, ನಗರಸಭೆ ಸದಸ್ಯ ಕೃಷ್ಣಯ್ಯ, ಚಾಮರಾಜು ಮುಂತಾದವರು ಹಾಜರಿದ್ದರು.