ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ ಎಂದು ಸಚಿವರಿಗೆ ದೂರು

Varta Mitra News

ನಂಜನಗೂಡು ಜು.26-ತಾಲ್ಲೂಕಿನ ಚಿಕ್ಕಯ್ಯನ ಛತ್ರ ಹೋಬಳಿ ವರುಣಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಕೈಗಾರಿಕಾ ಪ್ರದೇಶ, ಅಡಕನಹಳ್ಳಿ ಹುಂಡಿ, ಇಮ್ಮಾವು, ಗ್ರಾಪಂ ವ್ಯಾಪ್ತಿಗೆ ಬರುವ ಕೈಗಾರಿಕಾ ಪ್ರದೇಶಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ಇತ್ತ ಗಮನಹರಿಸಬೇಕೆಂದು ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಲಕ್ಷಿ ಬಿ.ಪಿ.ಮಹದೇವು ಅವರು ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್‍ಗೆ ಮನವಿ ಮಾಡಿದರು.
ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಏಷಿಯನ್ ಪೇಯಿಂಟ್, ಕಾರ್ಖಾನೆಗೆ ಭೇಟಿ ನೀಡಿ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್‍ರವರು ಸಂದರ್ಭದಲ್ಲಿ ತಾಂಡವಪುರ ಸೇರಿದಂತೆ ಗ್ರಾಪಂ ವ್ಯಾಪ್ತಿಯ ಕೆಲವು ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ಹೊರಗಿನವರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ದೂರಿದರು.
ಇದೇ ವೇಳೆ ಸಚಿವರಿಗೆ ವರುಣಾ ಕ್ಷೇತ್ರದ ಶಾಸಕ ಡಾ.ಎಸ್.ಯತೀಂದ್ರ ಸಿದ್ದರಾಮಯ್ಯ, ಹೂ ಗುಚ್ಚ ನೀಡಿ, ಗೌರವಿಸಿ ಬರಮಾಡಿಕೊಂಡರು.
ನಂತರ ಈ ಭಾಗದ ನಿರುದ್ಯೋಗಿ ಯುವಕರ ಸಮಸ್ಯೆಗಳನ್ನು ಶಾಸಕರು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಈ ಸಂಬಂಧ ಜಿಲ್ಲಾದಿಕಾರಿಗಳ ಕಛೇರಿಯಲ್ಲಿ ಸಭೆ ಕರೆಯಲಾಗಿದ್ದು, ಚರ್ಚಿಸಿ ಸ್ಥಳೀಯರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಗ್ರಾಪಂ ಅಧ್ಯಕ್ಷರಾದ ಮಹೇಶ್ ಪ್ರಸಾದ್, ಜಿ.ಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ತಾಪಂ ಸದಸ್ಯೆ ಲಕ್ಷ್ಮಿ ಬಿ.ಪಿ.ಮಹದೇವು, ರಾಜ್ಯ ಗೃಹ ಮಂಡಳಿ ಮಾಜಿ ಸದಸ್ಯ ಟಿ.ಕೆ. ಮಾಲೇಗೌಡ, ಗ್ರಾ.ಪಂ ಸದಸ್ಯರಾದ ಪಿ.ಗಿರೀಶ್, ಕಾಂಗ್ರೇಸ್ ಮುಖಂಡ ಇಮ್ಮಾವು ಶಿವಣ್ಣ, ಹೆಬ್ಯಾ ರಾಜು, ಮಾಜಿ ಸದಸ್ಯ ಪ್ರಭು, ಕಾರ್ಮಿಕ ಇಲಾಖೆ ಅಧಿಕಾರಿಗಳು, ಮುಖಂಡರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ