ಸೆಂಟ್ ಪೀಟರ್ಸ್ ಬರ್ಗ್ : ರಷ್ಯಾದ ಸೆಂಟ್ ಪೀಟರ್ಸ್ ಬರ್ಗ್ ನಲ್ಲಿ ನಡೆದ ಫೀಫಾ ವಿಶ್ವಕಪ್ 2018 ಪುಟ್ಬಾಲ್ ಟೂರ್ನಿಯ 16 ರ ಘಟ್ಟದಲ್ಲಿ 1-0 ಗೋಲುಗಳಿಂದ ಸ್ವಿಟ್ಜರ್ಲ್ಯಾಂಡ್ ಸೋಲಿಸಿದ ಸ್ವಿಡನ್ , ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.ಪಂದ್ಯ ಆರಂಭಗೊಂಡ ಮೊದಲಾರ್ಧ ಯಾವುದೇ ತಂಡ ಗೋಲು ಗಳಿಸುವಲ್ಲಿ ವಿಫಲಗೊಂಡವು. ಉಭಯ ತಂಡಗಳ ನಡುವೆ ಪ್ರಬಲ ಪೈಪೋಟಿ ಕಂಡುಬಂದಿತ್ತು. ಆದರೆ, 66 ನೇ ನಿಮಿಷದಲ್ಲಿ ಪೊರ್ಸ್ ಬರ್ಗ್ ಗೋಲು ಗಳಿಸುವ ಮೂಲಕ ಸ್ವಿಡನ್ ಗೆಲ್ಲಲು ನೆರವಾದರು.ಪೊರ್ಸ್ ಬರ್ಗ್ ಸಿಡಿಸಿದ ಗೋಲು ತಡೆಯುವಲ್ಲಿ ಸ್ವಿಟ್ಜರ್ಲ್ಯಾಂಡ್ ಗೋಲುಕೀಪರ್ ಯನ್ ಸೊಮ್ಮರ್ ವಿಫಲರಾದ್ದರಿಂದ ಸ್ವಿಡನ್ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರೆ, ಸ್ವಿಟ್ಜರ್ಲ್ಯಾಂಡ್ ಸೋತು ನಿರಾಸೆ ಅನುಭವಿಸಿತು.ಪಂದ್ಯದ ಮೊದಲಾರ್ಧದಲ್ಲಿ ಸ್ವಿಟ್ಜರ್ಲ್ಯಾಂಡ್ ಉತ್ತಮ ಅವಕಾಶ ಹೊಂದಿತ್ತು, ಆದರೆ, ಗೋಲುಕೀಪರ್ ಯನ್ ಸೊಮ್ಮರ್ ಚೆಂಡು ರಕ್ಷಣೆ ಮಾಡುವಲ್ಲಿ ವಿಫಲಗೊಂಡರಿಂದ ಸ್ವಿಟ್ಜರ್ಲ್ಯಾಂಡ್ ಸೋಲಿಗೆ ಶರಣಾಗಬೇಕಾಯಿತು.ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಅಥವಾ ಕೊಲಂಬಿಯಾ ವಿರುದ್ಧ ಸ್ವಿಡನ್ ಸೆಣಸಾಟ ನಡೆಸಲಿದೆ.
Related Articles
ಫಿಫಾ ವಿಶ್ವಕಪ್ 2018: ಪಂದ್ಯವೊಂದರಲ್ಲಿ ಗೆಲುವು ಸಾಧಿಸಿದ ಮೊದಲ ಆಫ್ರಿಕನ್ ರಾಷ್ಟ್ರ ಸೆನೆಗಲ್!
June 21, 2018
VD
ಕ್ರೀಡೆ
Comments Off on ಫಿಫಾ ವಿಶ್ವಕಪ್ 2018: ಪಂದ್ಯವೊಂದರಲ್ಲಿ ಗೆಲುವು ಸಾಧಿಸಿದ ಮೊದಲ ಆಫ್ರಿಕನ್ ರಾಷ್ಟ್ರ ಸೆನೆಗಲ್!
Seen By: 30 ಮಾಸ್ಕೋ(ರಷ್ಯಾ): ಫಿಫಾ ವಿಶ್ವಕಪ್ 2018ರ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ ಪಂದ್ಯವನ್ನು ಗೆಲ್ಲುವ ಮೂಲಕ ಮೊದಲ ಆಫ್ರಿಕನ್ ರಾಷ್ಟ್ರ ಎಂಬ ಖ್ಯಾತಿಗೆ ಸೆನೆಗಲ್ [more]
ಫಿಫಾ ವಿಶ್ವಕಪ್ 2018: ಸರ್ಬಿಯಾ ವಿರುದ್ಧ ಸ್ವಿಜರ್ಲ್ಯಾಂಡ್ ಗೆ ಭರ್ಜರಿ ಗೆಲುವು
June 23, 2018
VD
ಕ್ರೀಡೆ
Comments Off on ಫಿಫಾ ವಿಶ್ವಕಪ್ 2018: ಸರ್ಬಿಯಾ ವಿರುದ್ಧ ಸ್ವಿಜರ್ಲ್ಯಾಂಡ್ ಗೆ ಭರ್ಜರಿ ಗೆಲುವು
Seen By: 249 ಮಾಸ್ಕೋ(ರಷ್ಯಾ): 2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಸ್ವಿಜರ್ಲ್ಯಾಂಡ್ ತಂಡ ಸರ್ಬಿಯಾ ತಂಡವನ್ನು ಮಣಿಸಿದೆ. ಪಂದ್ಯಾವಳಿಯ ಇ ಗುಂಪಿನ ಪಂದ್ಯದಲ್ಲಿ ಸ್ವಿಜರ್ಲ್ಯಾಂಡ್ ತಂಡ ಸರ್ಬಿಯಾ [more]
ಸುಳ್ಳಾಯ್ತು ಅಚಿಲ್ಸ್ ಬೆಕ್ಕಿನ ಭವಿಷ್ಯ; 1-0 ಅಂತರದಲ್ಲಿ ಬೆಲ್ಜಿಯಂ ಮಣಿಸಿದ ಫ್ರಾನ್ಸ್ ಫೈನಲ್ ಗೆ ಲಗ್ಗೆ!
July 11, 2018
VD
ಕ್ರೀಡೆ
Comments Off on ಸುಳ್ಳಾಯ್ತು ಅಚಿಲ್ಸ್ ಬೆಕ್ಕಿನ ಭವಿಷ್ಯ; 1-0 ಅಂತರದಲ್ಲಿ ಬೆಲ್ಜಿಯಂ ಮಣಿಸಿದ ಫ್ರಾನ್ಸ್ ಫೈನಲ್ ಗೆ ಲಗ್ಗೆ!
Seen By: 61 ಮಾಸ್ಕೋ: ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಫುಟ್ಬಾಲ್ ನಲ್ಲಿ ಪ್ರಬಲ ಫ್ರಾನ್ಸ್ ದಾಖಲೆ ನಿರ್ಮಾಣ ಮಾಡಿದ್ದು, ಸೆಮಿ ಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು [more]