ಬೆಂಗಳೂರು, ಫೆ.10-ಓಂಕಾರ ಆಶ್ರಮ ಮಹಾಸಂಸ್ಥಾನದ ವತಿಯಿಂದ ಇದೇ 13ರಂದು ಮಹಾಶಿವರಾತ್ರಿ ಅಂಗವಾಗಿ ಕೆಂಗೇರಿಯ ಉತ್ತರಹಳ್ಳಿಯಲ್ಲಿರುವ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥಾನದ ಆಡಳಿತಾಧಿಕಾರಿ ಕೆ.ಭಾಸ್ಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ವಿಶೇಷವಾಗಿ ರಥೋತ್ಸವ, ಪಲ್ಲಕ್ಕಿ ಉತ್ಸವ , ಭಜನೆ ಹಾಗೂ ವೈವಿದ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಮತ್ತು ಜಾನಪದ ಮೇಳಗಳು ನಡೆಯಲಿವೆ ಎಂದರು.
ಹಬ್ಬದ ನಿಮಿತ್ತ ಅಂದು ಜ್ಯೋರ್ತಿಲಿಂರ್ಗದ ಗರ್ಭಗುಡಿಗೆ ಪ್ರವೇಶಿಸಿ ಲಿಂಗದ ದರ್ಶನ ಪಡೆಯಲು ಭಕ್ತಾದಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಓಂಕಾರೇಶ್ವರನಿಗೆ ಸ್ವಹಸ್ತದಿಂದ ಗಂಗಾ ಜಲಾಭಿಷೇಕ ಮಾಡುವ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಗಂಗಾ ಜಲಾಭಿಷೇಕ ಮಾಡುವವರಿಗೆ 100 ರೂ. ಹಾಗೂ ರುದ್ರ ದೇವನಿಗೆ ಭಸ್ಮಾರ್ಚನೆ ಮಾಡುವವರಿಗೆ 150 ರೂ, ರುದ್ರಯಾಗಕ್ಕೆ 500 ರೂ. ಹಾಗೂ ವಿಶೇಷ ಹೋಮಹವನಗಳಿಗೆ 5000 ರೂ. ನಿಗದಿಪಡಿಸಲಾಗಿದೆ ಎಂದರು.
ಫೋಟೋ ಕ್ರೆಡಿಟ್: omkarhills.com (ಪ್ರಾತಿನಿಧ್ಯಕ್ಕಾಗಿ ಮಾತ್ರ)