ಚೌಡೇಶ್ವರಿ ಅಮ್ಮನವರ ಬ್ರಹ್ಮರಥೋತ್ಸವ ಸಡಗರ, ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು

ಬೆಂಗಳೂರು, ಫೆ.10- ಎಲ್ಲಿ ನೋಡಿದರೂ ಜನಸಾಗರ, ಜಯಘೋಷಣೆಯೊಂದಿಗೆ ಶ್ರೀ ಚೌಡೇಶ್ವರಿ ಅಮ್ಮನವರ ಬ್ರಹ್ಮರಥೋತ್ಸವ ಸಡಗರ, ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.

ಬೆಂಗಳೂರು ದಕ್ಷಿಣ ತಾಲ್ಲೂಕು ಗೊಟ್ಟಿಗೆರೆ ಸಮಿಪದ ವೀವರ್ಸ್ ಕಾಲೋನಿಯಲ್ಲಿ ನಡೆದ ಬ್ರಹ್ಮರಥೋತ್ಸವ ಕಾರ್ಯಕ್ರಮದಲ್ಲಿ ವೀರಭದ್ರ, ಗೊರವನ ಕುಣಿತ, ಕಂಸಾಳೆ, ಪೂಜಾಕುಣಿತ, ಮೊಬೈಲ್ ಆರ್ಕೆಸ್ಟ್ರಾ, ಮರದ ಗೊಂಬೆಯಾಟ, ಕೀಲು ಕುದುರೆ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ಆಕರ್ಷಣೆಯಾಗಿತ್ತು.

ಬೆಂಗಳೂರು ಡೈರಿ (ಬಮೂಲ್) ಮಾಜಿ ಅಧ್ಯಕ್ಷ ಆರ್.ಕೆ.ರಮೇಶ್ ಬ್ರಹ್ಮರಥೋತ್ಸವಕ್ಕೆ ವಿಶೇಷ ಪೂಜೆ, ಪುನಸ್ಕಾರಗಳನ್ನು ನಡೆಸುವ ಮೂಲಕ ರಥವನ್ನು ಎಳೆಯುವ ಮೂಲಕ ಚಾಲನೆ ನೀಡಿದರು. ಪಾಲ್ಗೊಂಡಿದ್ದ ಸಹಸ್ತ್ರಾರು ಭಕ್ತಾಧಿಗಳ ಜಯಘೋಷ ಕೂಗಿ ಜಯಕಾರ ಹಾಕಿ ಬಾಳೆ ಹಣ್ಣು ಜವನ ಎಸೆಯುವ ಮೂಲಕ ಇಷ್ಟಾರ್ಥ ನೆರವೇರಿದ ಸಂತೃಪ್ತ ಭಾವನೆಯಿಂದ ಭಕ್ತಿಯಿಂದ ಮಿಂದೆದ್ದರು.

ಆರ್.ಕೆ. ರಮೇಶ್ ಮಾತನಾಡಿ, ಸಾವಿರಾರು ವರ್ಷಗಳಿಂದ ನಮ್ಮ ಪೂರ್ವಿಕರು ರಥೋತ್ಸವ, ಜಾತ್ರಾಮಹೋತ್ಸವ, ಗ್ರಾಮೀಣ ಸಂಸ್ಕೃತಿ ಉತ್ಸವ, ಸಿಡಿ ಉತ್ಸವ, ಊರ ಹಬ್ಬಗಳನ್ನು ಆಚರಿಸಿಕೊಂಡು ನಮ್ಮಲ್ಲಿರುವ ಪರಂಪರೆ, ಸಂಸ್ಕೃತಿ ಪೆÇೀಷಿಸಿಕೊಂಡು ಬರಲಾಗುತ್ತಿದ್ದು ಅದನ್ನ ಮುಂದಿನ ಪೀಳಿಗೆಗೆ ಕೊಂಡ್ಯೊದು ಜಾಗೃತಿ ಮೂಡಿಸಿ ಕಲೆ ಸಾಹಿತಿ ಸಂಸ್ಕೃತಿಯನ್ನ ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರದಾಗಬೇಕಾಗಿದೆ ಎಂದರು.

ಗ್ರಾ.ಪಂ. ಮಾಜಿ ಅಧ್ಯಕ್ಷ ಜೆ.ಕೆ.ರವಿ ಅನ್ನದಾಸೋಹ ಕಾರ್ಯುಕ್ರಮಕ್ಕೆ ಪೂಜೆ ಸಲ್ಲಿಸುವ ಮೂಲಕ್ ಚಾಲನೆ ನೀಡಿದರು. ಬಿಬಿಎಂಪಿ ಮಾಜಿ ಸದಸ್ಯೆ ಎಸ್.ಕೆ.ಪುಷ್ಪ ಪ್ರಭಾಕರ್,  ಕೆ.ಪಿ.ವಜ್ರಮುನಿ  ಹಾಗೂ ಮತ್ತಿತರರ ಮುಖಂಡರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ