ಭಾರತೀಯ ಸೈನಿಕರ ಮೇಲೆ ದಾಳಿ ಮಾಡಲು ಅಮೇರಿಕಾ ಕ್ಷಿಪಣಿ ಬಳಸಿದ ಪಾಕ್

ನವದೆಹಲಿ:ಫೆ-11: ರಜೌರಿ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಕಳೆದ ವಾರ ಭಾರತೀಯ ಸೈನಿಕರ ಮೇಲೆ ಉಗ್ರರು ನಡೆಸಿದ ಶೆಲ್ ದಾಳಿ ವೇಳೆ ಅಮೆರಿಕಾ ತಯಾರಿಸಿದ  ಕ್ಷಿಪಣಿ ನಿರ್ದೇಶಿತ ವಿರೋಧಿ ಟ್ಯಾಂಕ್  ಬಳಸಿರುವುದು ಕಂಡುಬಂದಿದ್ದು,  ಈ ನಿಟ್ಟಿನಲ್ಲಿ ಭಾರತೀಯ ಸೇನೆ ಮೇಲೆ ದಾಳಿ ಮಾಡಲು ಪಾಕಿಸ್ತಾನ ಅಮೆರಿಕಾದ ಕ್ಷಿಪಣಿಗಳನ್ನು ಬಳಕೆ ಮಾಡುತ್ತಿದೆ ಎಂಬ ಮಾಹಿತಿ ರಕ್ಷಣಾ ಸಚಿವಾಲಯಕ್ಕೆ ಲಭ್ಯವಾಗಿದೆ.

ಪಾಕಿಸ್ತಾನ 120 ಎಂಎಂ ಹಾಗೂ ಕ್ಷಿಪಣಿ ನಿರ್ದೇಶಿತ ವಿರೋಧಿ ಟ್ಯಾಂಕ್ ಬಳಕೆ ಮಾಡಿದೆ ಎಂದು ರಕ್ಷಣಾ ಮೂಲಗಳು ಸ್ಪಷ್ಪಪಡಿಸಿವೆ. ಈ ಸಂಬಂಧ ಅಮೆರಿಕಾದೊಂದಿಗೆ ಮಾತುಕತೆ ನಡೆಸುವುದಾಗಿಯೂ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕಾ ಭಾರತದ ದೊಡ್ಡ ರಕ್ಷಣಾ ಪಾಲುದಾರರಾಗಿದ್ದು, ರಕ್ಷಣೆ ಮತ್ತು ಭದ್ರತೆ ಸಂಬಂಧ ಉಭಯ ದೇಶಗಳ ನಡುವೆ ಹಲವು ಒಪ್ಪಂದಗಳು ಏರ್ಪಟ್ಟಿವೆ. ಕಳೆದ ವಾರ ನಡೆದ ದಾಳಿಯಲ್ಲಿ ನಾಲ್ವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದು, ಅದರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭಾರತ ಸ್ಪಷ್ಪಪಡಿಸಿದೆ.

ಜಮ್ಮು- ಕಾಶ್ಮೀರದ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ  ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಪಾಕಿಸ್ತಾನ ತನ್ನ ಸೇನೆಯನ್ನು ನಿಯೋಜಿಸಿದೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ.

ಫೋಟೋ ಕ್ರೆಡಿಟ್: dawn.com (ಪ್ರಾತಿನಿಧ್ಯಕ್ಕಾಗಿ ಮಾತ್ರ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ