ವಾಣಿಜ್ಯ ತೆರಿಗೆ ಇಲಾಖೆಯ ನೂತನ ಕಟ್ಟಡದಲ್ಲಿನ ಕಂಪ್ಯೂಟರ್, ಲ್ಯಾಪ್‍ಟಾಪ್‍ಗಳ ಕಳವು

ಮಂಡ್ಯ, ಮೇ 26-ನಗರದ ಹೊರವಲಯದಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆಯ ನೂತನ ಕಟ್ಟಡದಲ್ಲಿನ ಕಂಪ್ಯೂಟರ್, ಲ್ಯಾಪ್‍ಟಾಪ್‍ಗಳನ್ನು ಕಳವು ಮಾಡಿರುವ ಪ್ರಕರಣ ವಿವೇಕಾನಂದ ನಗರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಲಾಖೆಯ ನೂತನ ಕಟ್ಟಡ ಮಂಡ್ಯದ ವಿವೇಕಾನಂದ ನಗರದ ಹೊರವಲಯದಲ್ಲಿದ್ದು, ವಿರಳ ಜನಸಂಖ್ಯೆ ಹೊಂದಿರುವ ಈ ಪ್ರದೇಶದಲ್ಲಿ ನಿನ್ನೆ ರಾತ್ರಿ ಎಡಬಿಡದೆ ಸುರಿಯುತ್ತಿದ್ದ ಮಳೆ ನಡುವೆ ಕಳ್ಳರು ಸುಮಾರು 10 ಲಕ್ಷ ಮೌಲ್ಯದ ಕಂಪ್ಯೂಟರ್ ಉಪಕರಣಗಳನ್ನು ಕದ್ದೊಯ್ದಿದ್ದಾರೆ.
ಇಲಾಖೆಯ ಮುಖ್ಯ ದ್ವಾರದ ಬಾಗಿಲು ಒಡೆದು ಒಳನುಗ್ಗಿರುವ ಕಳ್ಳರು ಕಂಪ್ಯೂಟರ್, ಸಿಪಿಯು, 3 ಲ್ಯಾಪ್‍ಟಾಪ್‍ಗಳನ್ನು ಹೊತ್ತೊಯ್ದಿದ್ದಾರೆ. ಇಂದು ಬೆಳಗ್ಗೆ ಕಚೇರಿಗೆ ಸಿಬ್ಬಂದಿ ಆಗಮಿಸಿದಾಗ, ಬಾಗಿಲು ಒಡೆದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಅಧಿಕಾರಿಗಳಾದ ಸುದೇಶ್‍ಕುಮಾರ್ ಹಾಗೂ ಉದಯ್‍ಕುಮಾರ್ ಪೆÇಲೀಸರಿಗೆ ದೂರು ನೀಡಿದ್ದಾರೆ. ವಿವೇಕಾನಂದ ನಗರದಲ್ಲಿ ಹೆಚ್ಚಿರುವ ಕಳ್ಳತನ ನಿಯಂತ್ರಣಕ್ಕೆ ಪೆÇಲೀಸ್ ಗಸ್ತು ಮತ್ತಿತರ ಕ್ರಮ ವಹಿಸಿದ್ದರೂ ಇಂತಹ ಪ್ರಕರಣಗಳು ಮರುಕಳಿಸುತ್ತಿದ್ದು, ಸೂಕ್ತ ಭದ್ರತೆ ಒದಗಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ