ಪ್ರಾದೇಶಿಕ ಪಕ್ಷಗಳ ಮೈತ್ರಿ ಹತಾಶ ರಾಜಕೀಯ ಪಕ್ಷಗಳ ಅವ್ಯವಸ್ಥೆಯ ಪ್ರತೀಕ – ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ

ನವದೆಹಲಿ, ಮೇ 26-ಮುಂದಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿ ವಿರುದ್ಧ ಹೋರಾಡಲು ರಚನೆಯಾಗಲಿರುವ ಪ್ರಾದೇಶಿಕ ಪಕ್ಷಗಳ ಮೈತ್ರಿಯನ್ನು ಹತಾಶ ರಾಜಕೀಯ ಪಕ್ಷಗಳ ಅವ್ಯವಸ್ಥೆಯ ಪ್ರತೀಕ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಣ್ಣಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ನಾಲ್ಕನೇ ವರ್ಷಾಚರಣೆ ಸಂದರ್ಭದಲ್ಲಿ ಈ ಕುರಿತು ಹೇಳಿಕೆ ನೀಡಿರುವ ಅವರು ಪ್ರಸ್ತುತ ರಾಜಕೀಯ ಚರ್ಚೆಯು ಮೋದಿ ವರ್ಸಸ್ ಅರಾಜಕತೆ ಸಂಯೋಜನೆ ಕುರಿತದ್ದಾಗಿದೆ ಎಂದು ಜೇಟ್ಲಿ ಫೇಸ್‍ಬುಲ್ ಪೆÇೀಸ್ಟ್‍ನಲ್ಲಿ ವಿಶ್ಲೇಷಿಸಿದ್ದಾರೆ.
2019ರ ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ವಿರುದ್ಧ ಹೋರಾಡಲು ರಚನೆಯಾಗಲಿರುವ ಹತಾಶ ರಾಜಕೀಯ ಪಕ್ಷಗಳ ಅರಾಜಕತೆ ಮೈತ್ರಿಯನ್ನು ಭಾರತದ ಜನರು ತಿರಸ್ಕರಿಸಲಿದ್ದಾರೆ ಎಂದು ಜೇಟ್ಲಿ ಭವಿಷ್ಯ ನುಡಿದಿದ್ದಾರೆ.
ಟಿಎಂಸಿ, ಡಿಎಂಕೆ, ಟಿಡಿಪಿ, ಬಿಎಸ್‍ಪಿ, ಎಸ್‍ಪಿ, ಜೆಡಿಎಸ್‍ನಂಥ ಪಕ್ಷಗಳು ಸಂದರ್ಭಕ್ಕೆ ತಕ್ಕಂತೆ ತಮ್ಮ ತತ್ತ್ವಾದರ್ಶನಗಳನ್ನು ಬದಲಿಸಿಕೊಳ್ಳುತ್ತವೆ. ಇದು ಅಧಿಕಾರಕ್ಕಾಗಿ ಅವಕಾಶವಾದಿ ರಾಜಕಾರಣ ಮಾಡುವ ಪಕ್ಷಗಳು ಎಂದು ಜೇಟ್ಲಿ ಲೇವಡಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ