ಅಮರೇಶ್ ಕರಡಿ ಎಂಎಲ್‌ಸಿಯಾದರೆ ಬಿಜೆಪಿಗೆ ಬಲ

ಬೆಂಗಳೂರು ;
ಬಿಜೆಪಿಗೆ ಇದೀಗ ಸ್ಥಳೀಯ ಸಂಸ್ಥೆ, ವಿಧಾನಪರಿಷತ್ ಹಾಗೂ ಲೋಕಸಭಾ ಚುನಾವಣೆ ಎದುರಾಗಲಿವೆ. ಅತಿಹೆಚ್ಚು ಸಂಸತ್ ಸ್ಥಾನ ಗೆಲ್ಲುವುದು ಬಿಜೆಪಿಗಿರುವ ಸವಾಲು. ಪ್ರದೇಶವಾರು ತಮ್ಮದೇ ಪ್ರಾಬಲ್ಯ ಹೊಂದಿದ ನಾಯಕರಿಗೆ ಸ್ವತಂತ್ರವಾಗಿ ರಣತಂತ್ರ ರೂಪಿಸಲು ಬಿಟ್ಟಿದ್ದರೆ ಈ ಚುನಾವಣೆಯಲ್ಲಿ ಅನೇಕರನ್ನು ಗೆಲ್ಲಿಸುತ್ತಿದ್ದರು ಎಂಬ ಮಾತುಗಳು ಕೇಳಿಬಂದಿವೆ. ಇದೇ ನಿಟ್ಟಿನಲ್ಲಿ ಮುಂದಾದರೆ ಲೋಕಸಭಾ ಚುನಾವಣೆ ಸುಲಭವಾಗಲಿದೆ.

 

  • ಹೈ-ಕ ಭಾಗದ ಜನಪ್ರಿಯ ನಾಯಕ ಸಂಸದ ಸಂಗಣ್ಣ ಕರಡಿ
  • ಸಂಗಣ್ಣ ಪುತ್ರ ಅಮರೇಶ್ ಎಂಎಲ್‌ಸಿಯಾದರೆ ಎಂಪಿ ಚುನಾವಣೆ ಗೆಲುವು ಸುಲಭ
  • ಪ್ರಬಲ ಸಮುದಾಯಗಳೂ ಸೇರಿ ಎಲ್ಲ ಸಮಾಜಗಳೊಂದಿಗೆ ಉತ್ತಮ ಬಾಂಧವ್ಯ

ಹೈ-ಕ ಭಾಗದಲ್ಲಿ ಈ ಬಾರಿ ಬಿಜೆಪಿಗೆ ಹೆಚ್ಚು ಸ್ಥಾನಗಳು ಬಂದಿಲ್ಲ. ಇಲ್ಲಿ ಪ್ರಬಲ ಸಮುದಾಯಗಳು ಬಿಜೆಪಿಗೆ ಕೈ ಕೊಟ್ಟಿದ್ದೆ ಇದಕ್ಕೆ ಕಾರಣ. ಈ ಭಾಗದ ಆರೂ ಜಿಲ್ಲೆಗಳಲ್ಲಿ ಪ್ರಬಲ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಕಡಿಮೆ ಟಿಕೆಟ್ ಸಿಕ್ಕಿವೆ. ಅಫ್ಜಲಪುರದಿಂದ ಕಾಂಗ್ರೆಸ್‌ನ ಎಂ.ವೈ. ಪಾಟೀಲ್ ಮಾತ್ರ ಆಯ್ಕೆಯಾಗಿದ್ದಾರೆ. ಆದರೆ ಬಿಜೆಪಿ, ಜೆಡಿಎಸ್‌ನಿಂದ ಈ ಸಮುದಾಯ ಪ್ರತಿನಿಧಿಸುವ ಒಬ್ಬೇ ಒಬ್ಬ ಶಾಸಕ ಇಲ್ಲ. ಹೈ-ಕ ಭಾಗ ಸೇರಿ ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕ ಭಾಗದಲ್ಲಿ ಅತೀ ಹೆಚ್ಚು ಜನಸಂಖ್ಯೆ ಇರುವ ಸಮುದಾಯಕ್ಕೆ ಸೂಕ್ತ ಗೌರವ ಸಿಗದಿರುವುದು ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿ ಈ ಭಾಗದ ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ನೀಡಿದ್ದು ಕೊಪ್ಪಳ ಕ್ಷೇತ್ರದ ಅಮರೇಶ್ ಕರಡಿಗೆ ಮಾತ್ರ. ಅದು ಕೊನೇ ಗಳಿಗೆಯಲ್ಲಿ ಬಿ ಫಾರಂ ನೀಡಿದ್ದರಿಂದ ಸೋಲಬೇಕಾಯಿತು. ಅಲ್ಲದೇ ವಿರೋಧ ಪಕ್ಷದವರು ಅದಾಗಲೆ ಎರಡು ಸುತ್ತು ಪ್ರಚಾರ ಮಾಡಿದ್ದು, ಸ್ವಪಕ್ಷದ ಕೆಲವರು ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದು ಸೋಲಿಗೆ ಪ್ರಮುಖ ಕಾರಣ. ಆದರೆ ಅಮರೇಶ್ ಕರಡಿ ತಂದೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ತಮ್ಮ ಕ್ಷೇತ್ರ ವ್ಯಾಪ್ತಿಯ ನಾಲ್ಕು ಕಡೆ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚುನಾವಣೆ ಮೊದಲೇ ಅವರಿಗೆ ಅಥವಾ ಅವರು ಹೇಳಿದವರಿಗೆ ಟಿಕೆಟ್ ನೀಡಿದ್ದರೆ ಹೈ-ಕ ಭಾಗದಲ್ಲಿ ಇನ್ನೂ ಹೆಚ್ಚಿನ ಸ್ಥಾನಗಳು ಲಭಿಸುತ್ತಿದ್ದವು ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿಬಂದಿವೆ.
ಸಂಗಣ್ಣ ಕರಡಿ ಹೈ-ಕ ಭಾಗದಲ್ಲಿ ಎಲ್ಲ ಸಮುದಾಯಗಳ ನಾಯಕರಲ್ಲದೆ ವಿಪಕ್ಷದವರು ಮೆಚ್ಚುವಂತ ಜನಪ್ರಿಯ ನಾಯಕ. ಹೀಗಾಗಿಯೇ ನಾಲ್ಕು ಬಾರಿ ಶಾಸಕ, ಒಮ್ಮೆ ಸಂಸದರಾಗಿ ಆಯ್ಕೆಯಾಗಿ ಎಲ್ಲರೂ ಮೆಚ್ಚುವಂತ ಮೃದು ಸ್ವಭಾವ ಹೊಂದಿದ್ದಾರೆ. ಇದೀಗ ಲೋಕಸಭಾ ಚುನಾವಣೆಯಲ್ಲಿ ಈ ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕೆಂದರೆ ಯುವನಾಯಕ, ಡೇರ್ ಅಂಡ್ ಡೆವಿಲ್, ಎಂಥಹ ಸಂದರ್ಭ ಬಂದರೂ ಅದನ್ನು ಸಮರ್ಥವಾಗಿ ನಿಭಾಯಿಸಬಲ್ಲ ಅಮರೇಶ್ ಕರಡಿಗೆ ವಿಧಾನಪರಿಷತ್ ಸದಸ್ಯನನ್ನಾಗಿ ಮಾಡಿದರೆ ಈ ಭಾಗದ ಪಂಚಮಸಾಲಿ ಸಮುದಾಯ ಸೇರಿದಂತೆ ಇವರ ತಂದೆಯವರು ಬೇರೆ ಸಮಾಜಗಳ ಜೊತೆ ಹೊಂದಿದ ಉತ್ತಮ ಬಾಂಧವ್ಯದಿಂದ ಹೆಚ್ಚು ಕಡೆ ಗೆಲುವು ಸಾಧಿಸಲು ಅನುಕೂಲವಾಗಲಿದೆ.

ಸಮರ್ಥ ಯುವನಾಯಕ..
ಅಮರೇಶ್ ಕರಡಿ ಯಡಿಯೂರಪ್ಪ ಅವರಂತೆ ನೇರ, ನಿಷ್ಠುರ ಸ್ವಭಾವದ ಯಾವುದೇ ಕ್ಷಣದಲ್ಲೂ ಎದೆಗುಂದದೆ ಎಲ್ಲ ಸಂಕಷ್ಟ ಬಂದರೂ ಸಮರ್ಥವಾಗಿ ಎದುರಿಸುವ ಸ್ವಭಾವದ ಯುವಕ. ಇವರಿಗೆ ಎಂಎಲ್‌ಸಿ ಸ್ಥಾನಸಿಕ್ಕರೆ ಈ ಭಾಗದಲ್ಲಿ ಪಕ್ಷದ ಪರ ಇನ್ನಷ್ಟು ಹೆಚ್ಚಿನ ಕೆಲಸ ಮಾಡಲು ಮತ್ತು ತಮ್ಮ ಸಮುದಾಯದ ಯುವಕನಿಗೆ ಅವಕಾಶ ನೀಡಿದೆ ಎಂಬ ಮನೋಭಾವ ಆ ಸಮುದಾಯಕ್ಕೆ ಬರುವ ಹಿನ್ನೆಲೆಯಲ್ಲಿ ಬಿಜೆಪಿ ಅವಕಾಶ ನೀಡಬೇಕಿದೆ. ಇದೀಗ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಐವರನ್ನು ಆಯ್ಕೆ ಮಾಡಲು ಬಿಜೆಪಿ ಶಕ್ತವಾಗಿದೆ. ಇದನ್ನೇ ಬಳಸಿಕೊಂಡು ಅಮರೇಶ್ ಅವರನ್ನು ಆಯ್ಕೆ ಮಾಡಿದರೆ ಹೈ-ಕ ಭಾಗದಲ್ಲಿ ಲೋಕಸಭಾ ಚುನಾವಣೆ ಬಿಜೆಪಿಗೆ ಸುಲಭವಾಗಲಿದೆ.

ವರಿಷ್ಠರಿಂದಲೂ ಮೆಚ್ಚುಗೆ..
ಕೊಪ್ಪಳ ಸಂಸದ ಸಂಗಣ್ಣ ಕರಡಿ ಮತ್ತು ಪುತ್ರ ಅಮರೇಶ್ ಕರಡಿ ಅವರು ಹೈ-ಕ ಭಾಗದ ವಿವಿಧ ನಾಯಕರೊಂದಿಗೆ ಇರಿಸಿಕೊಂಡ ಉತ್ತಮ ಬಾಂಧವ್ಯ, ಸ್ನೇಹ ಸಂಬಂಧ, ಪಕ್ಷದ ಕಾರ್ಯಕರ್ತರೊಂದಿಗಿನ ಒಡನಾಟ, ಎಲ್ಲ ಸಮಾಜಗಳ ಮುಖಂಡರೊಂದಿಗೆ ಮೆಚ್ಚುವ ರೀತಿ ಹೊಂದಿಕೊಂಡು ಹೋಗುವ ಸ್ವಭಾವ ಕೇಂದ್ರ ಬಿಜೆಪಿ ವರಿಷ್ಠರಿಗೂ ಮೆಚ್ಚುಗೆಯಾಗಿದೆ. ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ ಜಾವ್ಡೇಕರ್, ಬಿಜೆಪಿ ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಧರ್ಮೇಂದ್ರ ಪ್ರಧಾನ್, ಯಡಿಯೂರಪ್ಪ, ಅನಂತಕುಮಾರ್, ಜಗದೀಶ್ ಶೆಟ್ಟರ್, ಪ್ರಹ್ಲಾದ ಜೋಶಿ ಆದಿಯಾಗಿ ಎಲ್ಲ ನಾಯಕರೂ ಸಂಗಣ್ಣ ಅವರನ್ನು ಅತಿ ಆತ್ಮೀಯವಾಗಿ ಅಚ್ಚಿಕೊಂಡಿದ್ದಾರೆ. ಅಲ್ಲದೇ ಇವರ ಪುತ್ರ ಅಮರೇಶ್‌ಗೆ ಬೆಂಬಲ, ಸಲಹೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ